ಶುಕ್ರವಾರಕ್ಕಿಂತ ಸೋಮವಾರ 'ಕಾಂತಾರ' ಹಿಂದಿ ಕಲೆಕ್ಷನ್ ಹೆಚ್ಚು? ಹಿಂದಿ ಸಿನಿಮಾಗಳಿಗೆ ಅವರ ನೆಲದಲ್ಲೇ ಟಕ್ಕರ್!

ಥಿಯೇಟರ್‌ಗಳಲ್ಲಿ ರಿಷಬ್ ಶೆಟ್ಟಿ ಚಮತ್ಕಾರ ಮುಂದುವರೆದಿದೆ. 'ಕಾಂತಾರ' ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಒಂದು ಸಿನಿಮಾದ ನಿಜವಾದ ತಾಕತ್ತು ಗೊತ್ತಾಗೋದು ಸಿನಿಮಾ ರಿಲೀಸ್ ಆದ ವೀಕೆಂಡ್ ಮುಗಿದ ನಂತರ ಬರುವ ಸೋಮವಾರ. ಅಂದು ಕೂಡ ಪ್ರೇಕ್ಷಕರು ಸಿನಿಮಾ ನೋಡಲು ದೊಡ್ಡಸಂಖ್ಯೆಯಲ್ಲಿ ಬಂದರೆ ಸಿನಿಮಾ ಹಿಟ್ ಲಿಸ್ಟ್ ಸೇರಿಕೊಳ್ಳುವುದು ಗ್ಯಾರೆಂಟಿ. ಕಳೆದ ಶುಕ್ರವಾರ 'ಕಾಂತಾರ' ಹಿಂದಿ ವರ್ಷನ್ ರಿಲೀಸ್ ಆಗಿ ಒಳ್ಳೆ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತ್ತು. ಇದೀಗ ಸೋಮವಾರವೂ ಹೌಸ್‌ಫುಲ್ ಪ್ರದರ್ಶನ ಕಂಡು ಸಿನಿಮಾ ಸದ್ದು ಮಾಡ್ತಿದೆ.

2500 ಸ್ಕ್ರೀನ್‌ಗಳಲ್ಲಿ 'ಕಾಂತಾರ' ಹಿಂದಿ ಪ್ರೇಕ್ಷಕರ ಮುಂದೆ ಬಂದಿತ್ತು. ಮೊದಲ ದಿನ 5ರಿಂದ 5 ಕೋಟಿ ರೂ. ಕಲೆಕ್ಷನ್ ಲೆಕ್ಕಾಚಾರ ನಡೆದಿತ್ತು. ಆದರೆ ಸಿನಿಮಾ 1 ಕೋಟಿ ರೂ. ಅಷ್ಟೇ ಗಳಿಕೆ ಕಂಡಿತ್ತು. ಆದರೆ ಶನಿವಾರ ಕಲೆಕ್ಷನ್ ಹೆಚ್ಚಾಗಿತ್ತು. ಭಾನುವಾರ ಡಬಲ್ ಆಗಿತ್ತು. ಭಾನುವಾರಕ್ಕೆ ಹೋಲಿಸಿದರೆ ಸೋಮವಾರ ಕೊಂಚ ಕಮ್ಮಿ ಆಗಿದ್ದರೂ ಶುಕ್ರವಾರಕ್ಕಿಂತ ಸೋಮವಾರ ಸಿನಿಮಾ ಕಲೆಕ್ಷನ್ ಹೆಚ್ಚಾಗಿದೆ. ನಿಧಾನವಾಗಿ ಫ್ಯಾಮಿಲಿ ಅಡಿಯನ್ಸ್ ಸಿನಿಮಾ ನೋಡಲು ಬರುತ್ತಿದ್ದಾರೆ. ನ್ಯೂಟ್ರಲ್ ಆಡಿಯನ್ಸ್ ಕೂಡ 'ಕಾಂತಾರ' ದರ್ಶನಕ್ಕೆ ಕ್ಯೂ ನಿಂತಿದ್ದಾರೆ.

ಬಾಲಿವುಡ್ ಸಿನಿಮಾಗಳಿಗೆ ಹಿಂದಿ ಬೆಲ್ಟ್‌ನಲ್ಲಿ 'ಕಾಂತಾರ' ಪೈಪೋಟಿ ಕೊಡುತ್ತಿದೆ. ಕಳೆದ ವಾರ 'ಡಾಕ್ಟರ್‌ ಜಿ' ಎನ್ನುವ ಸಿನಿಮಾ ರಿಲೀಸ್ ಆಗಿದೆ. ಮೊದಲ ದಿನ ಈ ಸಿನಿಮಾ ಸದ್ದು ಮಾಡಿದರೂ ನಿಧಾನವಾಗಿ 'ಕಾಂತಾರ' ಆರ್ಭಟ ಹೆಚ್ಚಾಗುತ್ತಿದೆ. 4 ದಿನದ 'ಕಾಂತಾರ' ಹಿಂದಿ ಕಲೆಕ್ಷನ್ ಡಿಟೈಲ್ಸ್ ಮುಂದೆ ಓದಿ.

4 ದಿನಕ್ಕೆ 8.45 ಕೋಟಿ ಕಲೆಕ್ಷನ್

4 ದಿನಕ್ಕೆ 8.45 ಕೋಟಿ ಕಲೆಕ್ಷನ್

KGF ಸರಣಿ ಸಿನಿಮಾಗಳನ್ನು ಹೊರತು ಪಡಿಸಿದರೆ 'ಕಾಂತಾರ' ಸಿನಿಮಾ ಮಾತ್ರ ಹಿಂದಿ ಬೆಲ್ಟ್‌ನಲ್ಲಿ ಈ ಪಾಟಿ ಸೌಂಡ್ ಮಾಡ್ತಿರೋದು. ಮಾಸ್ ಮಹರಾಜಾ ರಾಕಿಭಾಯ್ ಆರ್ಭಟಕ್ಕೂ ಅಭೂತಪೂರ್ವ ಬೆಂಬಲ ಸಿಕ್ಕಿತ್ತು. ಆದರೆ ಮೀಡಿಯಂ ಬಜೆಟ್ 'ಕಾಂತಾರ' ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿಸಿ, ಬಾಕ್ಸಾಫೀಸ್‌ ಚಿಂದಿ ಉಡಾಯಿಸಿದೆ.

'ಕಾಂತಾರ' ಹಿಂದಿ ಕಲೆಕ್ಷನ್ (ಕೋಟಿ ರೂ.ಗಳಲ್ಲಿ)

ಶುಕ್ರವಾರ - 1 ಕೋಟಿ
ಶನಿವಾರ - 2.50 ಕೋಟಿ
ಭಾನುವಾರ - 3.50 ಕೋಟಿ
ಸೋಮವಾರ - 1.45 ಕೋಟಿ

ಒಟ್ಟು - 8.45 ಕೋಟಿ

ತೆಲುಗು, ತಮಿಳಿನಲ್ಲಿ ಸೂಪರ್ ಹಿಟ್

ತೆಲುಗು, ತಮಿಳಿನಲ್ಲಿ ಸೂಪರ್ ಹಿಟ್

ಬರೀ ಹಿಂದಿ ಬೆಲ್ಟ್ ಮಾತ್ರವಲ್ಲ ಕರ್ನಾಟಕ ಬಿಟ್ಟು ಹೊರ ರಾಜ್ಯಗಳಲ್ಲೂ 'ಕಾಂತಾರ' ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡ್ತಿದೆ. ತೆಲುಗು ರಾಜ್ಯಗಳಲ್ಲಿ ಆರ್ಭಟ ತುಸು ಹೆಚ್ಚೇ ಇದೆ. ಇನ್ನು ತಮಿಳುನಾಡಿನಲ್ಲೂ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ವಿಮರ್ಶಕರು ಕೂಡ ಸಿನಿಮಾ ವೀಕ್ಷಿಸಿ ಕೊಂಡಾಡುತ್ತಿದ್ದಾರೆ. ಫ್ಯಾಮಿಲಿ ಅಡಿಯನ್ಸ್ ಪಂಜುರ್ಲಿ, ಗುಳಿಗ ದೈವಗಳ ಬಗ್ಗೆ ತಿಳಿಯಲು ಥಿಯೇಟರ್‌ ಕಡೆ ಮುಖ ಮಾಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ 'ಕಾಂತಾರ' ಹೊಸ ದಾಖಲೆ

ಆಸ್ಟ್ರೇಲಿಯಾದಲ್ಲಿ 'ಕಾಂತಾರ' ಹೊಸ ದಾಖಲೆ

ಕೆಲವೆಡೆ 'ಕಾಂತಾರ' ಸಿನಿಮಾ 'KGF- 2' ದಾಖಲೆ ಅಳಿಸಿ ಮುನ್ನುಗ್ಗುತ್ತಿದೆ. ಚಿತ್ರಕ್ಕೆ ವಿದೇಶಗಳಲ್ಲೂ ಸಿನಿಮಾ ಸಖತ್ ಸದ್ದು ಮಾಡ್ತಿದೆ. ಆಸ್ಟ್ರೇಲಿಯಾದಲ್ಲಿ 'KGF- 2' ದಾಖಲೆ ಮುರಿದಿದೆ. 75 ಲಕ್ಷ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಆ ಮೂಲಕ ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ 'ಕಾಂತಾರ' ಪಾತ್ರವಾಗಿದೆ. ಕನ್ನಡ ಚಿತ್ರಕ್ಕೆ ಒಂದು ಶೋ ಸಿಕ್ಕರೆ ಸಾಕು ಎನ್ನುವ ದೇಶಗಳಲ್ಲಿ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

ಗುರುವಾರ ಮಲಯಾಳಂ ವರ್ಷನ ರಿಲೀಸ್

ಗುರುವಾರ ಮಲಯಾಳಂ ವರ್ಷನ ರಿಲೀಸ್

ಕನ್ನಡದಲ್ಲೇ 'ಕಾಂತಾರ' ದೇಶ ವಿದೇಶಗಳಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ಡಬ್ ಮಾಡುವಂತೆ ಬೇಡಿಕೆ ಶುರುವಾಗಿದ್ದರಿಂದ ಬೇರೆ ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡಲಾಗಿದೆ. ಹಿಂದಿ, ತೆಲುಗು, ತಮಿಳು ವರ್ಷನ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದ್ದು, ಗುರುವಾರ(ಅಕ್ಟೋಬರ್ 20) ಮಲಯಾಳಂ ವರ್ಷನ್ ಕೂಡ ಕೇರಳದಲ್ಲಿ ಬಿಡುಗಡೆಯಾಗಲಿದೆ. ಅದಕ್ಕೂ ಒಳ್ಳೆ ರೆಸ್ಪಾನ್ಸ್ ಸಿಗುವ ನಿರೀಕ್ಷೆ ಇದೆ.

More from Filmibeat

English summary
Kantara hindi 1st Monday collections are better than 1st Friday. The Hindi dub of the film is garnering praise from the audience, so much so that it has left new Bollywood releases behind. know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X