'ಕಾಂತಾರ' ಹಿಂದಿ ವರ್ಷನ್ 3 ದಿನದ ಒಟ್ಟು ಕಲೆಕ್ಷನ್ ಎಷ್ಟು? ಕಾರ್ತಿಕೇಯ 2 ಕಲೆಕ್ಷನ್ ಬ್ರೇಕ್ ಆದರೂ ‌ಆಶ್ಚರ್ಯವಿಲ್ಲ!

ಮೊದಲಿಗೆ ಕನ್ನಡದಲ್ಲಿ ಬಿಡುಗಡೆಯಾಗಿ ಅಬ್ಬರಿಸಿ ಬೊಬ್ಬಿರಿದ ಕಾಂತಾರ ಇದೀಗ ಹಿಂದಿ, ತೆಲುಗು ಹಾಗೂ ತಮಿಳು ಭಾಷೆಗಳಿಗೂ ಸಹ ಡಬ್ಬಿಂಗ್ ಆಗಿ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ.

ಕನ್ನಡದಲ್ಲಿ ಕಾಂತಾರ ಚಿತ್ರ ಬೃಹತ್ ವಿಮರ್ಶೆ ಪಡೆದುಕೊಂಡು ಬುಕ್ ಮೈ ಶೋ ಹಾಗೂ ಐಎಂಡಿಬಿಯಲ್ಲಿ ದಾಖಲೆ ಬರೆದಿದ್ದ ಸಲುವಾಗಿ ಚಿತ್ರದ ಮೇಲೆ ಹಿಂದಿ ಹಾಗೂ ತೆಲುಗು ಪ್ರೇಕ್ಷಕರಿಗೆ ಬೆಟ್ಟದಷ್ಟು ನಿರೀಕ್ಷೆ ಇತ್ತು. ಹೀಗಾಗಿ ಹಿಂದಿ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿಯೂ ಕಾಂತಾರ ದೊಡ್ಡಮಟ್ಟದಲ್ಲಿಯೇ ಬಿಡುಗಡೆಗೊಂಡಿತು. 2500ಕ್ಕೂ ಹೆಚ್ಚು ಪರದೆಗಳಲ್ಲಿ ಕಾಂತಾರ ಹಿಂದಿ ಅವತರಣಿಕೆ ಬಿಡುಗಡೆಗೊಂಡಿತು.

ಬಿಡುಗಡೆಯ ದಿನ ( ಅಕ್ಟೋಬರ್ 14 ) 1.27 ಕೋಟಿ ಗಳಿಕೆ ಮಾಡಿದ್ದ ಕಾಂತಾರ ಹಿಂದಿ ಅವತರಣಿಕೆ ಎರಡನೇ ದಿನ 2.75 ಕೋಟಿ ಕಲೆಕ್ಷನ್ ಮಾಡಿತು. ಈ ಮೂಲಕ ಕಾಂತಾರ ಹಿಂದಿ ಅವತರಣಿಕೆ ಮೊದಲ ದಿನಕ್ಕಿಂತ ಎರಡನೇ ದಿನ ಹೆಚ್ಚು ಕಲೆಕ್ಷನ್ ಮಾಡಿ ಪಿಕ್ ಆಗಿತ್ತು. ಇನ್ನು ಮೂರನೇ ದಿನ ಭಾನುವಾರವಾದ್ದರಿಂದ ಕಾಂತಾರ ಹಿಂದಿ ಮತ್ತಷ್ಟು ಹೆಚ್ಚಿನ ಕಲೆಕ್ಷನ್ ಮಾಡಲಿದೆ ಎಂಬ ನಿರೀಕ್ಷೆಯನ್ನು ಬಾಕ್ಸ್ ಆಫೀಸ್ ಪಂಡಿತರು ವ್ಯಕ್ತಪಡಿಸಿದ್ದರು.

 ಕಾಂತಾರ ಹಿಂದಿ ಮೊದಲ 3 ದಿನ ಗಳಿಸಿದ್ದೆಷ್ಟು?

ಕಾಂತಾರ ಹಿಂದಿ ಮೊದಲ 3 ದಿನ ಗಳಿಸಿದ್ದೆಷ್ಟು?

ಇನ್ನು ಕಾಂತಾರ ಹಿಂದಿ ಅವತರಣಿಕೆ ಮೊದಲನೇ ದಿನ 1.27 ಕೋಟಿ, ಎರಡನೇ ದಿನ 2.75 ಕೋಟಿ ಹಾಗೂ ಮೂರನೇ ದಿನ 4.28 ಕೋಟಿ ಗಳಿಕೆ ಮಾಡಿದ್ದು, ಮೊದಲ 3 ದಿನಗಳಲ್ಲಿ ಒಟ್ಟು 8.30 ಕೋಟಿ ರೂಪಾಯಿಗಳನ್ನು ಗಳಿಸಿದೆ. ಹೀಗೆ ಕಾಂತಾರ ನಿಧಾನವಾಗಿ ಹಿಂದೆ ಬೆಲ್ಟ್ ನಲ್ಲಿ ಪಿಕ್ ಆಗಿದೆ.

 ಕಾಂತಾರ ಹಿಂದಿ ಮೊದಲ 3 ದಿನ ಗಳಿಸಿದ್ದೆಷ್ಟು?

ಕಾಂತಾರ ಹಿಂದಿ ಮೊದಲ 3 ದಿನ ಗಳಿಸಿದ್ದೆಷ್ಟು?

ಇನ್ನು ಕಾಂತಾರ ಹಿಂದಿ ಅವತರಣಿಕೆ ಮೊದಲನೇ ದಿನ 1.27 ಕೋಟಿ, ಎರಡನೇ ದಿನ 2.75 ಕೋಟಿ ಹಾಗೂ ಮೂರನೇ ದಿನ 4.28 ಕೋಟಿ ಗಳಿಕೆ ಮಾಡಿದ್ದು, ಮೊದಲ 3 ದಿನಗಳಲ್ಲಿ ಒಟ್ಟು 8.30 ಕೋಟಿ ರೂಪಾಯಿಗಳನ್ನು ಗಳಿಸಿದೆ. ಹೀಗೆ ಕಾಂತಾರ ನಿಧಾನವಾಗಿ ಹಿಂದೆ ಬೆಲ್ಟ್ ನಲ್ಲಿ ಪಿಕ್ ಆಗಿದೆ.

 ಕಾರ್ತಿಕೇಯ 2 ಕಲೆಕ್ಷನ್ ಬ್ರೇಕ್ ಆಗಬಹುದು

ಕಾರ್ತಿಕೇಯ 2 ಕಲೆಕ್ಷನ್ ಬ್ರೇಕ್ ಆಗಬಹುದು

ತೆಲುಗಿನ ಕಾರ್ತಿಕೇಯ 2 ಚಿತ್ರ ಕೂಡ ಹಿಂದಿಗೆ ಡಬ್ ಆಗಿ ಇದೇ ರೀತಿ ನಿಧಾನವಾಗಿ ಪಿಕ್ ಆಗಿ ಅಬ್ಬರಿಸಿತ್ತು. ಕಾರ್ತಿಕೇಯ 2 ಹಿಂದಿ ವರ್ಷನ್ ಒಟ್ಟಾರೆ 31.05 ಕೋಟಿ ಕಲೆಕ್ಷನ್ ಮಾಡಿತ್ತು. ಇನ್ನು ಕಾರ್ತಿಕೇಯ 2 ಹಿಂದಿ ಅವತರಣಿಕೆ ಮೊದಲ 3 ದಿನಗಳಲ್ಲಿ 2 ಕೋಟಿಯನ್ನು ಕೂಡ ತಲುಪಿರಲಿಲ್ಲ. ಆದರೆ ಇತ್ತ ಕಾಂತಾರ ಮೊದಲ 3 ದಿನಗಳಲ್ಲಿ 8 ಕೋಟಿ ತಲುಪಿದ್ದು, ಸುಲಭವಾಗಿ ಕಾರ್ತಿಕೇಯ 2 ಚಿತ್ರದ ಒಟ್ಟಾರೆ ಕಲೆಕ್ಷನ್ ಅನ್ನು ಬ್ರೇಕ್ ಮಾಡಲಿದೆ ಎನ್ನುತ್ತಿದ್ದಾರೆ ಬಾಕ್ಸಾಫೀಸ್ ಪರಿಣಿತರು.

 ಬುಕ್ ಮೈ ಶೋ ರೇಟಿಂಗ್ ಕೂಡ ಸೂಪರ್

ಬುಕ್ ಮೈ ಶೋ ರೇಟಿಂಗ್ ಕೂಡ ಸೂಪರ್

ಇನ್ನು ಕಾಂತಾರ ಹಿಂದಿ ಅವತರಣಿಕೆಯ ಬುಕ್ ಮೈ ಶೋ ರೇಟಿಂಗ್ ಮೂರು ದಿನದ ಅಂತ್ಯಕ್ಕೆ 21000 ಮತಗಳನ್ನು ಪಡೆದುಕೊಂಡಿದೆ. 10 ಅಂಕಗಳಿಗೆ 9.5 ಅಂಕಗಳನ್ನು ಪಡೆದುಕೊಂಡಿರುವ ಕಾಂತಾರ ಈ ವರ್ಷ ಬಿಡುಗಡೆಗೊಂಡ ಎಲ್ಲಾ ಚಿತ್ರಗಳಿಗಿಂತ ಹೆಚ್ಚಿನ ರೇಟಿಂಗ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಹೀಗೆ ಹೆಚ್ಚಿನ ಸಂಖ್ಯೆಯ ವೀಕ್ಷಕರಿಂದ ವೀಕ್ಷಿಸಲ್ಪಡುತ್ತಿರುವ ಕಾಂತಾರ ಹಿಂದಿ ಬಾಲಿವುಡ್ ಗಲ್ಲಾಪೆಟ್ಟಿಗೆಯಲ್ಲಿ ತನ್ನದೇ ಆದ ಮೈಲಿಗಲ್ಲನ್ನು ಸೃಷ್ಟಿಸುವುದು ಖಚಿತ.

More from Filmibeat

English summary
Kantara Hindi Box Office report: Movie collected 8.30 crores in first 3 days . Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X