ಅಕ್ಟೋಬರ್ 30ರಂದು 'ಕಾಂತಾರ ಹಿಂದಿ' ಗಳಿಕೆ ಎಷ್ಟು? ಕೆಜಿಎಫ್ ದಾಖಲೆ ಮುರಿಯಲು ಇನ್ನೆಷ್ಟು ಬೇಕು?

ಕಾಂತಾರ ಅಬ್ಬರ ದಿನದಿಂದ ದಿನಕ್ಕೆ ಜೋರಾಗುತ್ತಿದೆಯೇ ಹೊರತು ತಗ್ಗುತ್ತಿಲ್ಲ. ಮೊದಲಿಗೆ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿ ಮೊದಲ ದಿನ ಒಂದು ಕೋಟಿ ಗಳಿಕೆ ಮಾಡುವ ಮೂಲಕ ಪುಟ್ಟ ಓಪನಿಂಗ್ ಪಡೆದುಕೊಂಡಿದ್ದ ಕಾಂತಾರ ಚಿತ್ರ ಮುಂದೊಂದು ದಿನ ಇನ್ನೂರು ಕೋಟಿ ಕ್ಲಬ್ ಸೇರುತ್ತೆ ಎಂದು ಬಹುಶಃ ಯಾರೂ ಊಹಿಸಿರಲಿಲ್ಲ. ಹೌದು, ಕೋಟಿಯೊಂದಿಗೆ ಕಲೆಕ್ಷನ್ ಆರಂಭಿಸಿದ್ದ ಕಾಂತಾರ ಈಗ ಇನ್ನೂರು ಕೋಟಿ ಕ್ಲಬ್ ಸೇರಿರುವ ಸಿನಿಮಾ.

ಒಂದೊಳ್ಳೆ ಕಂಟೆಂಟ್ ಇರುವ ಸಿನಿಮಾಗಳು ಇಷ್ಟು ಗಳಿಕೆ ಮಾಡುವುದು ಇತ್ತೀಚೆಗಿನ ದಿನಗಳಲ್ಲಿ ಸಾಮಾನ್ಯ. ಆದರೆ ಕಾಂತಾರ ಈ ವಿಷಯದಲ್ಲಿ ತುಸು ವಿಭಿನ್ನ. ಏಕೆಂದರೆ ಇತರೆ ಸಿನಿಮಾಗಳ ಹಾಗೆ ದೊಡ್ಡ ಬಜೆಟ್ ಆಗಲಿ ಅಥವಾ ಹೈಪ್ ಆಗಲಿ ಚಿತ್ರಕ್ಕಿರಲಿಲ್ಲ. ಈ ಚಿತ್ರ ಮುಂದೊಂದು ದಿನ ದೊಡ್ಡ ಹಿಟ್ ಆಗಿ ದೊಡ್ಡ ಕಲೆಕ್ಷನ್ ಮಾಡುತ್ತೆ ಎಂಬ ಊಹೆಯೂ ಇರಲಿಲ್ಲ.

ಕಾಂತಾರ ಕನ್ನಡದಲ್ಲಿ ಮಾತ್ರ ಬಿಡುಗಡೆಗೊಂಡ ಬಳಿಕ ವ್ಯಕ್ತವಾದ ಅಭೂತಪೂರ್ವ ಪ್ರತಿಕ್ರಿಯೆಯಿಂದ ಚಿತ್ರ ಪರಭಾಷೆಗಳಿಗೂ ಡಬ್ ಆಗಿ ಪ್ಯಾನ್ ಇಂಡಿಯಾ ಸಿನಿಮಾವಾಯಿತು. ಅದರಲ್ಲೂ ತೆಲುಗು ಹಾಗೂ ಹಿಂದಿಯಲ್ಲಿ ಚಿತ್ರ ದೊಡ್ಡ ಮಟ್ಟದ ಯಶಸ್ಸು ಸಾಧಿಸಿತು. ಸದ್ಯಕ್ಕೆ ನಮ್ಮತನವನ್ನು ಹೊಂದಿರುವ ಚಿತ್ರಗಳನ್ನು ಹೆಚ್ಚಾಗಿ ಬೆನ್ನುತಟ್ಟಿ ಮೆಚ್ಚಿಕೊಳ್ಳುತ್ತಿರುವ ಹಿಂದಿ ಪ್ರೇಕ್ಷಕರು ಕಾಂತಾರ ಚಿತ್ರಕ್ಕೂ ಜೈ ಎನ್ನುತ್ತಿದ್ದಾರೆ. ಸದ್ಯ ಕಾಂತಾರ ಹಿಂದಿ ಅವತರಣಿಕೆ ಬೃಹತ್ ಕಲೆಕ್ಷನ್ ಮಾಡುತ್ತಿದ್ದು, ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ದಾಖಲೆ ಮುರಿಯುವ ಸನಿಹದಲ್ಲಿದೆ. ಹಾಗಿದ್ದರೆ ಕಾಂತಾರ ಹಿಂದಿ ಇಲ್ಲಿಯವರೆಗೂ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಅಕ್ಟೋಬರ್ 30ರಂದು ಕಾಂತಾರ ಹಿಂದಿ ಗಳಿಸಿದ್ದೆಷ್ಟು?

ಅಕ್ಟೋಬರ್ 30ರಂದು ಕಾಂತಾರ ಹಿಂದಿ ಗಳಿಸಿದ್ದೆಷ್ಟು?

ಅಕ್ಟೋಬರ್ 14ರಂದು ಕಾಂತಾರ ಹಿಂದಿ ಅವತರಣಿಕೆ ಬಿಡುಗಡೆಗೊಂಡು ಮೊದಲ ದಿನ ಕೇವಲ 1.28 ಕೋಟಿ ಗಳಿಕೆ ಮಾಡಿತ್ತು. ಹೀಗೆ ಮೊದಲ ದಿನ ಸಾಮಾನ್ಯ ಗಳಿಕೆ ಕಂಡಿದ್ದ ಕಾಂತಾರ ಅಕ್ಟೋಬರ್ 30ರಂದು (17ನೇ ದಿನ) 4.4 ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಕಾಂತಾರ ಹಿಂದಿ ಗಳಿಕೆ ಒಟ್ಟಾರೆ 42.95 ಕೋಟಿ ತಲುಪಿದೆ.

ಕೆಜಿಎಫ್ ಚಾಪ್ಟರ್ 1 ದಾಖಲೆ ಮುರಿಯುವತ್ತ ಕಾಂತಾರ

ಕೆಜಿಎಫ್ ಚಾಪ್ಟರ್ 1 ದಾಖಲೆ ಮುರಿಯುವತ್ತ ಕಾಂತಾರ

ಇನ್ನು ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಗೊಂಡಿತ್ತು. ಕೆಜಿಎಫ್ ಚಾಪ್ಟರ್ 1 ಹಿಂದಿ ಅವತರಣಿಕೆ ಒಟ್ಟು 44.09 ಕೋಟಿ ಗಳಿಕೆ ಮಾಡಿತ್ತು. ಸದ್ಯ ಕಾಂತಾರ 42.95 ಕೋಟಿ ಗಳಿಸಿದ್ದು ಕನ್ನಡ ರಾಜ್ಯೋತ್ಸವದ ಸಮಯಕ್ಕೆ ಕೆಜಿಎಫ್ ಚಾಪ್ಟರ್ 1 ಹಿಂದಿ ಅವತರಣಿಕೆಯ ಲೈಫ್‌ಟೈಮ್ ಕಲೆಕ್ಷನ್ ಅನ್ನು ಹಿಂದಿಕ್ಕಲಿದೆ.

ತೆಲುಗಿನಲ್ಲಿ ಅರ್ಧಶತಕ ಖಚಿತ

ತೆಲುಗಿನಲ್ಲಿ ಅರ್ಧಶತಕ ಖಚಿತ

ಇನ್ನು ಕಾಂತಾರ ಹಿಂದಿಯಲ್ಲಷ್ಟೇ ಅಲ್ಲ ತೆಲುಗಿನಲ್ಲೂ ಸಹ ಅಬ್ಬರಿಸುತ್ತಿದೆ. ಅಕ್ಟೋಬರ್ 15ರಂದು ಬಿಡುಗಡೆಗೊಂಡ ಕಾಂತಾರ ತೆಲುಗು ಅವತರಣಿಕೆ ಅಕ್ಟೋಬರ್ 30ರ ಸಮಯಕ್ಕೆ 38 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಹೀಗೆ ತೆಲುಗಿನಲ್ಲೂ ತನ್ನ ಅಬ್ಬರದ ಕಲೆಕ್ಷನ್ ಮುಂದುವರಿಸಿರುವ ಕಾಂತಾರ ಅಲ್ಲಿಯೂ ಅರ್ಧಶತಕ ಬಾರಿಸುವುದು ಖಚಿತ.

More from Filmibeat

English summary
Kantara is all set to beat KGF Chapter 1 lifetime collection in Hindi belt. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X