ನನ್ನ ಜೀವನ ಸಿನಿಮಾ ಆಗುವುದು ಇಷ್ಟವಿರಲಿಲ್ಲ: ಕಪಿಲ್ ದೇವ್

ಖ್ಯಾತ ಕ್ರಿಕೆಟಿಗ, ವಿಶ್ವಕಪ್ ವಿಜೇತ ಕ್ಯಾಪ್ಟನ್ ಕಪಿಲ್ ದೇವ್ ಜೀವನ ಆಧಾರಿತ ಸಿನಿಮಾ '83' ಬಿಡುಗಡೆಗೆ ಸಿದ್ಧವಾಗಿದೆ.

ರಣ್ವೀರ್ ಸಿಂಗ್ ಕಪಿಲ್ ದೇವ್ ಪಾತ್ರದಲ್ಲಿ ನಟಿಸಿದ್ದಾರೆ. ಕಪಿಲ್ ದೇವ್ ಪತ್ನಿ ಪಾತ್ರದಲ್ಲಿ ರಣ್ವೀರ್ ಸಿಂಗ್ ಪತ್ನಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.

ಆದರೆ ತಮ್ಮ ಜೀವನದ ಕತೆ ಸಿನಿಮಾ ಆಗುವುದು ಮಾಜಿ ಕ್ರಿಕೆಟರ್ ಕಪಿಲ್ ದೇವ್‌ಗೆ ಇಷ್ಟವಿರಲಿಲ್ಲವಂತೆ. ಅದರಲ್ಲಿಯೂ ರಣ್ವೀರ್ ಸಿಂಗ್-ದೀಪಿಕಾ ಪಡುಕೋಣೆ ತಮ್ಮ ಹಾಗೂ ತಮ್ಮ ಪತ್ನಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಗೊತ್ತಾದಾಗ ಆತಂಕಗೊಂಡಿದ್ದರಂತೆ ಕಪಿಲ್ ದೇವ್.

ತುಸು ತಡವಾಗಿ ಸಿನಿಮಾ ಮಾಡಿ ಎಂದ್ದಿದ್ದರು ಕಪಿಲ್

ತುಸು ತಡವಾಗಿ ಸಿನಿಮಾ ಮಾಡಿ ಎಂದ್ದಿದ್ದರು ಕಪಿಲ್

'ನಾನು ಬದುಕಿರುವಾಗಲೇ ನನ್ನ ಕತೆಯನ್ನು ಸಿನಿಮಾ ಮಾಡುವುದು ನನಗೆ ಸರಿಬಂದಿರಲಿಲ್ಲ. ನನ್ನ ಕತೆ ಹಲವರಿಗೆ ಗೊತ್ತಿದೆ, ಆದರೆ ಸಿನಿಮಾ ಮೂಲಕ ನನ್ನನ್ನು 'ಹೀರೋ' ಮಾದರಿಯಲ್ಲಿ ಪ್ರೊಜೆಕ್ಟ್ ಮಾಡುವುದು ಮುಜುಗರ ತರುತ್ತದೆ' ಎಂದು ಕಪಿಲ್, ಚಿತ್ರತಂಡದ ಬಳಿ ಆರಂಭದಲ್ಲಿಯೇ ಹೇಳಿದ್ದರಂತೆ.

ರಣ್ವೀರ್ ಸಿಂಗ್ ಬಗ್ಗೆ ಆತಂಕಹೊಂದಿದ್ದರು ಕಪಿಲ್

ರಣ್ವೀರ್ ಸಿಂಗ್ ಬಗ್ಗೆ ಆತಂಕಹೊಂದಿದ್ದರು ಕಪಿಲ್

ಅಷ್ಟೆ ಅಲ್ಲದೆ, ರಣ್ವೀರ್ ಸಿಂಗ್ ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ ಎಂದು ಗೊತ್ತಾದಾಗ ಸಹ ಆತಂಕಕೊಂಡಿದ್ದರಂತೆ. ಕ್ರೀಡಾಪಟುವಿಗೆ ಅದರಲ್ಲಿಯೂ ಕ್ರಿಕೆಟ್ ಆಟಗಾರನಿಗೆ ಆತನದ್ದೇ ಆದ ಶೈಲಿ ಇರುತ್ತದೆ, ಅದನ್ನು ನಟನೊಬ್ಬ ಹೇಗೆ ಅನುಕರಿಸಬಲ್ಲ, ಅನುಕರಿಸಿದರೂ ಅದು ಕೃತಕವಾಗುತ್ತದೆ. ರಣ್ವೀರ್ ಸ್ಟೈಲಿಶ್ ನಟ ಆತ ನನ್ನಂತೆ ಇಲ್ಲ ಎಂದು ಸಹ ಕಪಿಲ್ ದೇವ್‌ಗೆ ಎನ್ನಿಸಿತ್ತಂತೆ.

ದಿನದ ಎಂಟು ಗಂಟೆ ಆತ ಅಭ್ಯಾಸ ಮಾಡುತ್ತಿದ್ದ: ಕಪಿಲ್

ದಿನದ ಎಂಟು ಗಂಟೆ ಆತ ಅಭ್ಯಾಸ ಮಾಡುತ್ತಿದ್ದ: ಕಪಿಲ್

ಆದರೆ ರಣ್ವೀರ್‌ ಸಿಂಗ್ ಶ್ರಮ ನೋಡಿ ಈತನೇ ನನ್ನ ಪಾತ್ರಕ್ಕೆ ಸೂಕ್ತ ಎಂದುಕೊಂಡೆ, ಆತ ದಿನದ 8 ಗಂಟೆ ನೆಟ್ಸ್‌ನಲ್ಲಿ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದ. ನನ್ನಂತೆ ಬ್ಯಾಟ್ ಬೀಸುವುದು, ಬೌಲಿಂಗ್ ಹಾಕುವುದನ್ನು ತದೇಕಚಿತ್ತದಿಂದ ಅಭ್ಯಾಸ ಮಾಡುತ್ತಿದ್ದ. ಅವನ ಶ್ರಮ ನೋಡಿ, ನನ್ನ ಪಾತ್ರಕ್ಕೆ ರಣ್ವೀರ್ ಸೂಕ್ತ ಎಂದು ನನಗೆ ಎನಿಸಿತು ಎಂದಿದ್ದಾರೆ ಕಪಿಲ್.

Recommended Video

6 ತಿಂಗಳು ಲಾಕ್ ಡೌನ್ ನಲ್ಲಿ ಶಿವಣ್ಣ ಏನ್ ಮಾಡಿದ್ರು ಗೊತ್ತಾ? | Shivanna | Filmibeat Kannada
ಜಿಂಬಾಬ್ವೆ ಇನ್ನಿಂಗ್ಸ್ ನೋಡಲು ಕಾತರನಾಗಿದ್ದೇನೆ: ಕಪಿಲ್

ಜಿಂಬಾಬ್ವೆ ಇನ್ನಿಂಗ್ಸ್ ನೋಡಲು ಕಾತರನಾಗಿದ್ದೇನೆ: ಕಪಿಲ್

ಇಡೀಯ ಚಿತ್ರತಂಡ ಬಹಳ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ನಾನು ಸಹ ಸಿನಿಮಾ ನೋಡಲು ಕಾತುರನಾಗಿದ್ದೇನೆ. ಅದರಲ್ಲಿಯೂ 83 ರ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ಮೇಲೆ ನಾನು ಮಾಡಿದ ಬ್ಯಾಟಿಂಗ್‌ನ ಇನ್ನಿಂಗ್ಸ್ ನೋಡಲು ಕಾತರನಾಗಿದ್ದೇನೆ ಎಂದಿದ್ದಾರೆ ಕಪಿಲ್. ನಾನು ಅವರಿಗೆ ನನ್ನ ಕತೆ ಹೇಳಿದ್ದೇನೆ ಅಷ್ಟೆ, ಎಲ್ಲಾ ಶ್ರಮವೂ ಚಿತ್ರತಂಡದ್ದೇ, ನನ್ನದೇನೂ ಇಲ್ಲ ಎಂದಿದ್ದಾರೆ ಕಪಿಲ್.

More from Filmibeat

English summary
Former India Cricket team captain Kapil Dev against the movie 83 which is on his life and world cup win 1983.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X