ಚಿತ್ರರಂಗಕ್ಕೆ ಬಂದ ಕಪಿಲ್ ದೇವ್ ಪುತ್ರಿ ಅಮಿಯಾ

ಸಾಮಾನ್ಯವಾಗಿ ಮಕ್ಕಳಿಗೆ ಚಿಕ್ಕವಯಸ್ಸಿನಿಂದ ನೋಡಿದ್ದ ಕ್ಷೇತ್ರದ ಮೇಲೆ ಆಸಕ್ತಿ ಬೆಳೆಯುತ್ತದೆ. ಅದೇ ಕಾರಣಕ್ಕೆ ಏನೋ ಸಿನಿಮಾದವರ ಮಕ್ಕಳು ಚಿತ್ರರಂಗಕ್ಕೆ ಬರುತ್ತಾರೆ.

ಎಷ್ಟೋ ಮಕ್ಕಳು ಅಪ್ಪ, ಅಮ್ಮನ ಕ್ಷೇತ್ರವನ್ನೇ ಮುಂದೆ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಒಂದಷ್ಟು ಮಕ್ಕಳು ತಂದೆ, ತಾಯಿಗಿಂತ ವಿಭಿನ್ನ ರೀತಿಯ ಕ್ಷೇತ್ರವನ್ನು ಆರಿಸಿಕೊಂಡು ತಮ್ಮ ಜೀವನ ಶುರು ಮಾಡುತ್ತಾರೆ. ಅದೇ ರೀತಿ ಕ್ರಿಕೆಟ್ ಆಟಗಾರ ಕಪಿಲ್ ದೇವ್ ಪುತ್ರಿ ಕೂಡ ಚಿತ್ರರಂಗದಲ್ಲಿ ಕೆಲಸ ಶುರು ಮಾಡಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕನಾಗಿರುವ ಕಪಿಲ್ ದೇವ್ ಸಾಧನೆ ಬಗ್ಗೆ ಹೆಚ್ಚು ಹೇಳುವ ಅಗತ್ಯ ಇಲ್ಲ. ಅವರು ಕ್ರಿಕೆಟ್ ನ ದಂತಕಥೆಗಳಲ್ಲಿ ಒಬ್ಬರು. ಈ ರೀತಿ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಸಾಧನಕ ಪುತ್ರಿ ಈಗ ಸಿನಿಮಾರಂಗಕ್ಕೆ ಬಂದಿದ್ದಾರೆ. ಮುಂದೆ ಓದಿ...

ಕಪಿಲ್ ದೇವ್ ಪುತ್ರಿ ಅಮಿಯಾ

ಕಪಿಲ್ ದೇವ್ ಪುತ್ರಿ ಅಮಿಯಾ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರ ಪುತ್ರಿ ಅಮಿಯಾ ದೇವ್ ಬಾಲಿವುಡ್ ಸಿನಿಮಾದ ಮೂಲಕ ತಮ್ಮ ಕೆಲಸ ಶುರು ಮಾಡಿದ್ದಾರೆ. ಅಮಿಯಾ ಇಲ್ಲಿ ಹೀರೋಯಿನ್ ಆಗಿಲ್ಲ. ಬದಲಿಗೆ ಒಂದು ಸಿನಿಮಾಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆರಿಯರ್ ಪ್ರಾರಂಭ ಮಾಡಿದ್ದಾರೆ.

'83' ಸಿನಿಮಾಗೆ ಅಸಿಸ್ಟೆಂಟ್ ಡೈರೆಕ್ಟರ್

'83' ಸಿನಿಮಾಗೆ ಅಸಿಸ್ಟೆಂಟ್ ಡೈರೆಕ್ಟರ್

1983 ವರ್ಷವನ್ನು ಇಡೀ ಭಾರತದ ಜನ ಎಂದಿಗೂ ಮರೆಯುವುದಿಲ್ಲ. ಅದು ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಎತ್ತಿ ಹಿಡಿದ ದಿನ. ಆ ವೇಳೆ ಭಾರತ ತಂಡದ ನಾಯಕನಾಗಿದ್ದು, ಕಪಿಲ್ ದೇವ್. ಈ ಐತಿಹಾಸಿಕ ಗೆಲುವಿನ ಬಗ್ಗೆ '83' ಹೆಸರಿನಲ್ಲಿ ಸಿನಿಮಾ ಬರುತ್ತಿದೆ. ಆ ಸಿನಿಮಾಗೆ ಕಪಿಲ್ ದೇವ್ ಪುತ್ರಿಯೇ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದಾರೆ.

ಕಪಿಲ್ ದೇವ್ ಪಾತ್ರದಲ್ಲಿ ರಣ್ವೀರ್

ಕಪಿಲ್ ದೇವ್ ಪಾತ್ರದಲ್ಲಿ ರಣ್ವೀರ್

ಸಿನಿಮಾದಲ್ಲಿ ಕಪಿಲ್ ದೇವ್ ಪಾತ್ರದಲ್ಲಿ ರಣ್ವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಕಪಿಲ್ ಸಹ ಈ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದು, ರಣ್ವೀರ್ ಗೆ ಟ್ರೈನಿಂಗ್ ನೀಡುತ್ತಿದ್ದಾರೆ. 'ಭಜರಂಗಿ ಭಾಯಿಜಾನ್' ಖ್ಯಾತಿಯ ಕಬೀರ್ ಖಾನ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ.

10 ಏಪ್ರಿಲ್ 2020ಕ್ಕೆ ಬಿಡುಗಡೆ

10 ಏಪ್ರಿಲ್ 2020ಕ್ಕೆ ಬಿಡುಗಡೆ

ಚಿತ್ರದಲ್ಲಿ ಡೈರೆಕ್ಷನ್ ಟೀಮ್ ನಲ್ಲಿ ಕೆಲಸ ಮಾಡುತ್ತಿರುವ ಅಮಿಯಾ ನಟರಿಗೆ ತರಬೇತಿ ಹಾಗೂ ಕಾಸ್ಟೂಮ್ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ವಿಶೇಷ ಅಂದರೆ, ಸಿನಿಮಾದ ಕ್ಲೈಮ್ಯಾಕ್ಸ್ ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ನಡೆಯಲಿದೆ. '83' ಸಿನಿಮಾ 10 ಏಪ್ರಿಲ್ 2020ಕ್ಕೆ ಬಿಡುಗಡೆ ಆಗಲಿದೆ.

More from Filmibeat

English summary
Indian cricket team former captain Kapil Dev daughter Amiya Dev become assistant director for '83' movie. '83' movie is based on 1983 Cricket World Cup.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X