ಹೆಣ್ಣು ಮಗುವಿಗೆ ತಂದೆಯಾದ ಕಪಿಲ್ ಶರ್ಮಾ

ಬಾಲಿವುಡ್ ನಟ, ಕಿರುತೆರೆಯ ನಿರೂಪಕ ಕಪಿಲ್ ಶರ್ಮಾ ಕುಟುಂಬದಲ್ಲಿ ಸಂತೋಷದ ಘಳಿಗೆ ಬಂದಿದೆ. ಕಪಿಲ್ ಶರ್ಮಾ ಇದೀಗ ಹೆಣ್ಣು ಮಗುವಿಗೆ ತಂದೆ ಆಗಿದ್ದಾರೆ.

ಕಪಿಲ್ ಶರ್ಮಾ ಪತ್ನಿ ಗಿನ್ನಿ ಚತ್ರಥ್ ಇಂದು (ಡಿಸೆಂಬರ್ 10) ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗಳು ಹುಟ್ಟಿದ ಖುಷಿಯನ್ನು ಟ್ವಿಟ್ಟರ್ ನಲ್ಲಿ ಕಪಿಲ್ ಶರ್ಮಾ ಹಂಚಿಕೊಂಡಿದ್ದಾರೆ. ಕಪಿಲ್ ಶರ್ಮಾ ಟ್ವೀಟ್ ಗೆ ಸಾಕಷ್ಟು ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.

ಡಿಸೆಂಬರ್ 12, 2018 ರಂದು ಕಪಿಲ್ ಶರ್ಮಾ ಹಾಗೂ ಗಿನ್ನಿ ಚತ್ರಥ್ ವಿವಾಹ ನಡೆದಿತ್ತು. ಈಗ ಈ ಜೋಡಿಯ ಜೀವನಕ್ಕೆ ಹೊಸ ಸದಸ್ಯರ ಆಗಮನ ಆಗಿದೆ. ಕಪಿಲ್ ಮನೆಗೆ ಮಹಾಲಕ್ಷ್ಮಿ ಬಂದಿದ್ದಾರೆ. ವಿವಾಹ ವಾರ್ಷಿಕೋತ್ಸವದ ಸಂಭ್ರಮ ಇನ್ನು ಎರಡು ದಿನಗಳಲ್ಲಿ ಇದ್ದು, ಈ ನಡುವೆ ಈ ಶುಭ ಸುದ್ದಿ ಬಂದಿದೆ.

Kapil Sharma And His Wife Ginni Chatrath Blessed With Baby Girl

ಚಿತ್ರರಂಗದ ಸ್ನೇಹಿತರು, ರಾಜಕೀಯ ಗಣ್ಯರು ಈ ತಾರ ಜೋಡಿಗೆ ವಿಶ್ ಮಾಡಿದ್ದಾರೆ. ನಟಿ ರಕುಲ್ ಪ್ರೀತ್ ಸಿಂಗ್ ಸಹ ಶುಭಾಶಯ ತಿಳಿಸಿದ್ದಾರೆ.

ಕಪಿಲ್ ಶರ್ಮಾ 'ದಿ ಕಪಿಲ್ ಶರ್ಮಾ ಶೋ', 'ಕಾಮಿಡಿ ನೈಟ್ಸ್ ವಿತ್ ಕಪಿಲ್' ಹಾಗೂ 'ಕಾಮಿಡಿ ಸರ್ಕಲ್' ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

More from Filmibeat

English summary
Actor and Comedian Kapil Sharma and his wife Ginni Chatrath blessed with baby girl.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X