»   » ಕಪಿಲ್ ಶರ್ಮಾ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ಕಪಿಲ್ ಶರ್ಮಾ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

Posted By:
Subscribe to Filmibeat Kannada

ಖ್ಯಾತ ಟಿವಿ ನಿರೂಪಕ ಮತ್ತು ನಟ ಕಪಿಲ್ ಶರ್ಮಾ ಕಳೆದ ಕೆಲವು ದಿನಗಳ ಹಿಂದಷ್ಟೆ ರಕ್ತದೊತ್ತಡ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಮತ್ತೆ ಅವರು ತೀವ್ರವಾಗಿ ಅಸ್ವಸ್ಥಗೊಂಡು 'ದಿ ಕಪಿಲ್ ಶರ್ಮಾ ಶೋ' ಚಿತ್ರೀಕರಣ ಸೆಟ್ ನಲ್ಲಿ ಕುಸಿದು ಬಿದ್ದಿರುವ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂಲಗಳ ಪ್ರಕಾರ ಕಪಿಲ್ ಶರ್ಮಾ ರವರು 'ಜಬ್ ಹ್ಯಾರಿ ಮೆಟ್ ಸಜಲ್' ಚಿತ್ರದ ನಿರ್ದೇಶಕ ಇಮ್ತಿಯಾಜ್ ಅಲಿ, ಶಾರುಖ್ ಖಾನ್ ಮತ್ತು ಅನುಷ್ಕಾ ಶರ್ಮಾ ಅವರೊಂದಿಗಿನ ಸಂಚಿಕೆಯನ್ನು ಶೂಟ್ ಮಾಡಬೇಕಿತ್ತು. ಆದರೆ ಅಂದೇ ಚಿತ್ರೀಕರಣ ಆರಂಭವಾಗುವ ಮುನ್ನ ಅವರು ಸೆಟ್ ನಲ್ಲಿ ಅಸ್ವಸ್ಥಗೊಂಡ ಕಾರಣ ಶೀಘ್ರವಾಗಿ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದಿದೆ.

Kapil Sharma Faints On The Kapil Sharma Show Sets; Hospitalised Again

ಕಪಿಲ್ ಶರ್ಮಾ ಸದ್ಯದಲ್ಲಿ ತಮ್ಮ ಕಿರುತೆರೆ ಕಾರ್ಯಕ್ರಮ 'ದಿ ಕಪಿಲ್ ಶರ್ಮಾ' ಜೊತೆಗೆ 'ಫಿರಂಗಿ' ಎಂಬ ಚಿತ್ರೀಕರಣದಲ್ಲೂ ತೊಡಗಿಕೊಂಡಿದ್ದಾರೆ. ಆದ್ದರಿಂದ ಬಿಡುವಿಲ್ಲದಂತೆ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಕಾರಣ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ ಎಂದು ವರದಿಯಾಗಿದೆ.

English summary
Kapil Sharma Faints On The Kapil Sharma Show Sets; Hospitalised Again

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada