»   » ಕೊನೆಗೂ ನಿಂತೋಯ್ತು 'ಕಪಿಲ್ ಶರ್ಮಾ' ಕಾರ್ಯಕ್ರಮ

ಕೊನೆಗೂ ನಿಂತೋಯ್ತು 'ಕಪಿಲ್ ಶರ್ಮಾ' ಕಾರ್ಯಕ್ರಮ

Posted By:
Subscribe to Filmibeat Kannada

ಹಿಂದಿಯ ಜನಪ್ರಿಯ ಟಿವಿ ಕಾರ್ಯಕ್ರಮ 'ಕಪಿಲ್ ಶರ್ಮಾ ಶೋ' ತನ್ನ ಪ್ರದರ್ಶನವನ್ನ ನಿಲ್ಲಿಸಿದೆ. ಕಳೆದ ಕೆಲ ದಿನಗಳಿಂದ ಈ ಕಾರ್ಯಕ್ರಮ ಹಾಗೂ ನಿರೂಪಕ ಕಪಿಲ್ ಶರ್ಮಾ ಅವರ ವಿರುದ್ಧ ಹಲವು ಟೀಕೆಗಳು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಟಿ.ಆರ್.ಪಿ ಯಲ್ಲಿ ಟಾಪ್ ನಲ್ಲಿದ್ದ 'ಕಪಿಲ್ ಶರ್ಮಾ ಶೋ' ರದ್ದುಗೊಳಿಸಲಾಗಿದೆ.

ನಿರೂಪಕ ಕಪಿಲ್ ಶರ್ಮಾ ಅವರ ಆರೋಗ್ಯ ಸರಿಯಿಲ್ಲದ ಕಾರಣ, ಹೊಸ ಹೊಸ ಎಪಿಸೋಡ್ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸೋನಿ ಟಿವಿ ಈ ನಿರ್ಧಾರಕ್ಕೆ ಬಂದಿದ್ದು, ತಾತ್ಕಾಲಿಕವಾಗಿ ನಿಲ್ಲಿಸಲು ನಿರ್ಧರಿಸಿದೆ.

ಕೋಪಗೊಂಡ ಅಜಯ್ ದೇವಗನ್ 'ಕಪಿಲ್ ಶೋ'ನಿಂದ ಹೊರಹೋಗಿದ್ದೇಕೆ?

Kapil Sharma Show to go off in small Screen

ಪ್ರತಿ ವಾರಾಂತ್ಯ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿದ್ದ ಈ ಸ್ಥಳದಲ್ಲಿ ಈಗ 'ಡ್ರಾಮಾ ಕಂಪನಿ' ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಮೊದಲು 'ಡ್ರಾಮಾ ಕಂಪನಿ' ಕಾರ್ಯಕ್ರಮ 8 ಗಂಟೆಗೆ ಪ್ರಸಾರವಾಗುತ್ತಿತ್ತು. ಈಗ ಆ ಜಾಗಕ್ಕೆ 'ಸೂಪರ್ ಡ್ಯಾನ್ಸರ್' ಎಂಬ ಹೊಸ ಡ್ಯಾನ್ಸ್ ಕಾರ್ಯಕ್ರಮ ಪರಿಚಯಿಸುತ್ತಿದೆ.

ಇತ್ತೀಚೆಗಷ್ಟೇ ಶಾರೂಖ್ ಖಾನ್, ಅಮಿತಾಬ್ ಬಚ್ಚನ್, ಅಜಯ್ ದೇವಗನ್ ಅಂತಹ ಸ್ಟಾರ್ ನಟರ ಎಪಿಸೋಡ್ ಗಳನ್ನ ಕಪಿಲ್ ಶರ್ಮಾ ಚಿತ್ರೀಕರಣ ಮಾಡಲು ಸಾಧ್ಯವಾಗಿರಲಿಲ್ಲ. ಇದರಿಂದ ಟಿ.ಆರ್.ಪಿ ಕೂಡ ಕುಸಿತ ಕಂಡಿತ್ತು.

Kapil Sharma Show to go off in small Screen

ಈ ಎಲ್ಲ ಕಾರಣಗಳಿಂದ ಕಪಿಲ್ ಶರ್ಮಾ ಶೋವನ್ನ ನಿಲ್ಲಿಸಲಾಗಿದೆ. ಮುಂದಿನ ದಿನದಲ್ಲಿ ಮತ್ತೆ ಮರು ಚಾಲನೆ ನೀಡುತ್ತಾರಾ ಗೊತ್ತಿಲ್ಲ. ಆದ್ರೆ, ಇನ್ಮುಂದೆ ಅಂತೂ ಕಪಿಲ್ ಶೋ ಇಲ್ಲ.

English summary
The Kapil Sharma Show to go off air, The Drama Company to take its spot

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada