ರಶ್ಮಿಕಾ ಮಂದಣ್ಣ ಅನ್ನು ಭೇಟಿ ಆಗಬೇಕಂತೆ ಸ್ಟಾರ್ ಕಮಿಡಿಯನ್

ಕನ್ನಡತಿ, ನಟಿ ರಶ್ಮಿಕಾ ಮಂದಣ್ಣ ಖ್ಯಾತಿ ದಕ್ಷಿಣ ಭಾರತ ದಾಟಿ ಬಾಲಿವುಡ್‌ನಲ್ಲೂ ಹರಿದಾಡುತ್ತಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಎರೆಡೆರಡು ಟಾಪ್ ಪ್ರೊಡಕ್ಷನ್‌ನ ಬಾಲಿವುಡ್‌ ಸಿನಿಮಾಗಳನ್ನು ತೆಕ್ಕೆಗೆ ಹಾಕಿಕೊಂಡಿದ್ದಾರೆ ನಟಿ ರಶ್ಮಿಕಾ.

ಬಾಲಿವುಡ್ ಬಿಗ್‌ ಬಿ ಅಮಿತಾಬ್ ಬಚ್ಚನ್ ಜೊತೆ ನಟಿಸಲಿರುವ ರಶ್ಮಿಕಾ ಮಂದಣ್ಣ, ಸಿದ್ಧಾರ್ಥ್ ಮಲ್ಹೋತ್ರಾಗೂ ನಾಯಕಿಯಾಗಿ ನಟಿಸಲಿದ್ದಾರೆ.

ಈ ನಡುವೆ ಬಾಲಿವುಡ್‌ನಲ್ಲಿ ಸಾಕಷ್ಟು ಖ್ಯಾತಿ ಗಳಿಸಿರುವ ಕಮಿಡಿಯನ್ ಕಪಿಲ್ ಶರ್ಮಾ, ರಶ್ಮಿಕಾ ಮಂದಣ್ಣ ಅವರನ್ನು ಭೇಟಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

Kapil Sharma Wants To Meet Actress Rashmika Mandanna

ರಶ್ಮಿಕಾ ಮಂದಣ್ಣ ಅಭಿನಯಿಸಿರುವ 'ಟಾಪ್ ಟಕ್ಕರ್' ಆಲ್ಬಂ ಹಾಡಿನ ಪ್ರೊಮೊಷನ್‌ ಗೆಂದು ಗಾಯಕ ಬಾದ್‌ ಶಾ ಹಾಗೂ ಸುಖ್‌ಬೀರ್ ಕಪಿಲ್ ಶರ್ಮಾ ಶೋ ಗೆ ಹೋಗಿದ್ದರು. ಆಗ ಕಪಿಲ್ ಅವರು ರಶ್ಮಿಕಾ ಬಗ್ಗೆ ಕೇಳಿದ್ದಾರೆ.

'ಆಕೆ ಪ್ರತಿಭಾವಂತ ಹುಡುಗಿ, ಈಗಾಗಲೇ ಎರಡು ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ' ಎಂದಿದ್ದಾರೆ ಬಾದ್‌ ಶಾ. 'ಹಾಗಿದ್ದರೆ ಆಕೆಯನ್ನು ಭೇಟಿಯಾಗಲೇ ಬೇಕು' ಎಂದಿದ್ದಾರೆ ಕಪಿಲ್ ಶರ್ಮಾ.

ಅಮಿತಾಬ್ ಬಚ್ಚನ್, ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ಶಾರುಖ್ ಖಾನ್ ಹೀಗೆ ಹಲವು ಸ್ಟಾರ್‌ಗಳು ಕಪಿಲ್ ಶರ್ಮಾ ಅವರ 'ದಿ ಕಪಿಲ್ ಶರ್ಮಾ ಶೋ' ಗೆ ಅತಿಥಿಯಾಗಿ ಹೋಗಿದ್ದಾರೆ. ಯಾವುದೇ ಹೊಸ ಸಿನಿಮಾ ಬಂದರು ಅದರ ನಟ-ನಟಿ ನಿರ್ದೇಶಕರು ಕಪಿಲ್ ಶರ್ಮಾ ಶೋ ಗೆ ಭೇಟಿ ನೀಡುವುದು ಸಾಮಾನ್ಯ. ಕಪಿಲ್ ಶರ್ಮಾ ಸಹ ಯಾವುದೇ ಬಾಲಿವುಡ್‌ ಸ್ಟಾರ್‌ಗಳಿಗೆ ಕಡಿಮೆ ಇಲ್ಲದಂತೆ ಜನಪ್ರಿಯರಾಗಿದ್ದಾರೆ.

ರಶ್ಮಿಕಾ ನಟಿಸುತ್ತಿರುವ ಬಾಲಿವುಡ್ ಸಿನಿಮಾ ಬಿಡುಗಡೆ ವೇಳೆಗೆ ಪ್ರಮೋಷನ್‌ಗೆ ಕಪಿಲ್ ಶರ್ಮಾ ಶೋ ಗೆ ಭೇಟಿ ನೀಡಬಹುದು ರಶ್ಮಿಕಾ ಮಂದಣ್ಣ.

More from Filmibeat

English summary
Kapil Sharma wants to meet actress Rashmika Mandanna. She is acting in two bollywood movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X