twitter
    For Quick Alerts
    ALLOW NOTIFICATIONS  
    For Daily Alerts

    ಟ್ರೈಲರ್ ಬಿಡುಗಡೆ: ಡೆಲಿವರಿ ಬಾಯ್‌ಗಳೇ ಇದೋ ಬರುತ್ತಿದೆ ನಿಮ್ಮದೇ ಸಿನಿಮಾ

    |

    ದಶಕದ ಹಿಂದೆ ಕಾಲ್ ಸೆಂಟರ್ ವರ್ಕರ್‌ಗಳ ದೊಡ್ಡ ಸಮುದಾಯ ಸೃಷ್ಟಿಯಾದ ಹಾಗೆ ಈಗ ಡೆಲಿವರಿ ಬಾಯ್‌ಗಳ ದೊಡ್ಡ ಸಮುದಾಯವೇ ಸೃಷ್ಟಿಯಾಗಿದೆ. ಅಮೆಜಾನ್, ಫ್ಲಿಪ್‌ಕಾರ್ಟ್, ಮಿಂತ್ರ, ಜೊಮ್ಯಾಟೊ, ಸ್ವಿಗ್ಗಿ, ಡೆನ್ಜೊ, ಜೆಸ್ಟೊ ಹೀಗೆ ಹತ್ತು ಹಲವು ಮಾದರಿಯ ಡೆಲಿವರಿ ಬೇಸ್ಡ್ ಉದ್ಯಮಗಳು ಕಾರ್ಯನಿರ್ವಹಿಸುತ್ತಿದ್ದು, ಇವಕ್ಕಾಗಿ ಲಕ್ಷಾಂತರ ಮಂದಿ ಯುವಕರು ಡೆಲಿವರಿ ಬಾಯ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ.

    ಡೆಲಿವರಿ ಬಾಯ್‌ಗಳ ದೊಡ್ಡ ಸಮಯದಾಯವನ್ನು ಗಮನದಲ್ಲಿಟ್ಟು ಸಿನಿಮಾ ಪ್ರಚಾರಗಳನ್ನು ಸಹ ಇತ್ತೀಚೆಗೆ ಮಾಡಲಾಗುತ್ತಿದೆ. ಇತ್ತೀಚೆಗಷ್ಟೆ ನಟ ಸತೀಶ್ ನೀನಾಸಂ ಡೆಲಿವರಿ ಬಾಯ್‌ ಅಂತೆ ವೇಷ ತೊಟ್ಟು ತಮ್ಮ ಸಿನಿಮಾದ ಪ್ರಚಾರ ಮಾಡಿದ್ದರು.

    ಇದೀಗ ಡೆಲಿವರಿ ಬಾಯ್‌ಗಳ ಕಷ್ಟದ ಜೀವನವನ್ನೇ ಕತೆಯಾಗಿಸಿಕೊಂಡಿರುವ ಹಿಂದಿ ಸಿನಿಮಾ ಒಂದು ತೆರೆಗೆ ಬರಲು ಸಿದ್ದವಾಗಿದೆ. ಸಿನಿಮಾದ ಟ್ರೈಲರ್ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದ್ದು, ಗಮನ ಸೆಳೆಯುತ್ತಿದೆ. ಅಂದಹಾಗೆ ಸಿನಿಮಾದ ಹೆಸರು 'ಜ್ವಿಗ್ಯಾಟೊ'! ಸ್ವಿಗ್ಗಿ ಹಾಗೂ ಜೊಮ್ಯಾಟೊ ಸೇರಿಸಿ ಈ ಹೆಸರು ಇಟ್ಟಿದ್ದಾರೆ ಚಿತ್ರದ ನಿರ್ದೇಶಕರು.

    'ಜ್ವಿಗ್ಯಾಟೊ' ಸಿನಿಮಾದಲ್ಲಿ ಹಾಸ್ಯನಟ ಕಪಿಲ್ ಶರ್ಮಾ ನಟಿಸಿದ್ದು, ಮೊದಲ ಬಾರಿಗೆ ಗಂಭೀರ ಪಾತ್ರದಲ್ಲಿ ಕಪಿಲ್ ಶರ್ಮಾ ಕಾಣಿಸಿಕೊಂಡಿದ್ದಾರೆ. ಕಪಿಲ್ ಶರ್ಮಾ ನಟಿಸಿದ್ದಾರೆಂದ ಮಾತ್ರಕ್ಕೆ ಇದು ಹಾಸ್ಯಪ್ರಧಾನ ಸಿನಿಮಾ ಅಲ್ಲ ಬದಲಿಗೆ ಗಂಭೀರ ಸಿನಿಮಾ. ಸಿನಿಮಾದಲ್ಲಿ ಸಾಕಷ್ಟು ಭಾವನಾತ್ಮಕ ಅಂಶಗಳು ಇವೆ ಎನ್ನುವುದು ಸಿನಿಮಾದ ಟ್ರೈಲರ್‌ನಲ್ಲಿಯೇ ಗೊತ್ತಾಗುತ್ತಿದೆ.

    ಡೆಲಿವರಿ ಬಾಯ್‌ಗಳ ಕತೆ ಹೊಂದಿರುವ 'ಜ್ವಿಗ್ಯಾಟೊ'

    ಡೆಲಿವರಿ ಬಾಯ್‌ಗಳ ಕತೆ ಹೊಂದಿರುವ 'ಜ್ವಿಗ್ಯಾಟೊ'

    'ಜ್ವಿಗ್ಯಾಟೊ' ಸಿನಿಮಾದಲ್ಲಿ ಕಪಿಲ್ ಶರ್ಮಾ, 'ಜ್ವಿಗ್ಯಾಟೊ' ಹೆಸರಿನ ಆಹಾರ ಡೆಲಿವರಿ ನೀಡುವ ಸಂಸ್ಥೆಯೊಂದರ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುತ್ತಾರೆ. ಒಂದು ಸಣ್ಣ ಬಡ ಕುಟುಂಬ ಹೊಂದಿರುವ ನಾಯಕ, ಫ್ಯಾಕ್ಟರಿ ಕೆಲಸ ಬಿಟ್ಟು ಡೆಲಿವರಿ ಬಾಯ್ ಆಗಿ ಸೇರಿರುತ್ತಾನೆ. ಹೆಚ್ಚು ಹಣ ಸಿಗುತ್ತದೆ ಎಂಬ ಕಾರಣಕ್ಕೆ ದಿನಕ್ಕೆ ಹೆಚ್ಚು-ಹೆಚ್ಚು ಡೆಲಿವರಿ ಮಾಡುತ್ತಿರುತ್ತಾನೆ. ಆದರೆ ಹಣದ ಆಸೆ ತೋರಿಸಿ ಕಂಪೆನಿ ದುಡಿಸಿಕೊಳ್ಳುತ್ತದೆಯೇ ಹೊರತು ಆತನ ನಿರೀಕ್ಷಿಸಿದಷ್ಟು ಹಣ ಆತನ ಕೈ ಸೇರುತ್ತಿರುವುದಿಲ್ಲ.

    ಗಮನ ಸೆಳೆಯುತ್ತಿದೆ ಸಂಭಾಷಣೆ

    ಗಮನ ಸೆಳೆಯುತ್ತಿದೆ ಸಂಭಾಷಣೆ

    ಟ್ರೈಲರ್‌ನಲ್ಲಿ ಗಮನ ಸೆಳೆಯುವ ಸಂಭಾಷಣೆಗಳು ಹಲವಿವೆ. ಅದರಲ್ಲಿ ಒಂದು ಹೀಗಿದೆ; ''ರೇಟಿಂಗ್ಸ್ ಕಲೆಕ್ಟ್ ಮಾಡುವ ಭರದಲ್ಲಿ ಒಳ್ಳೆಯವರಾಗಿ ಇರುತ್ತೇವೆ, ಆತ್ಮಗೌರವ ಮಾರಿಕೊಂಡು ಕೆಲಸ ಮಾಡುತ್ತೇವೆ. ಆದರೆ ಈ ಸಂಸ್ಥೆಗಳು ಹೆಚ್ಚು ರೇಟಿಂಗ್ ಪಡೆದುಕೊಂಡರೆ ಇನ್‌ಸೆಂಟಿವ್ ಕೊಡುತ್ತೇವೆಂದು ಹೇಳಿ, ನಮ್ಮನ್ನು ಆತ್ಮಗೌರವ ಮಾರಿಕೊಳ್ಳುವಂತೆ ಮಾಡುತ್ತವೆ. ನಾವು ಇನ್‌ಸೆಂಟಿವ್‌ಗಳ ಸುತ್ತ ಸುತ್ತುವಂತೆ ಮಾಡುತ್ತಿರುತ್ತವೆ'' ಎನ್ನುತ್ತಾನೆ ನಾಯಕ. ಡೆಲಿವರಿ ಬಾಯ್‌ಗಳ ವೃತ್ತಿ ಬದುಕಿನ ಕಠು ಸತ್ಯವನ್ನು ಈ ಸಂಭಾಷಣೆ ಹೇಳುತ್ತಿದೆ.

    ಡೆಲಿವರಿ ಬಾಯ್‌ಗಳ ಕಷ್ಟಗಳ ಚಿತ್ರಣ

    ಡೆಲಿವರಿ ಬಾಯ್‌ಗಳ ಕಷ್ಟಗಳ ಚಿತ್ರಣ

    ಟ್ರೈಲರ್‌ನಲ್ಲಿ ಡೆಲಿವರಿ ಬಾಯ್‌ಗಳ ಜೀವನ, ಸಂಸಾರ, ಅವರ ಕಷ್ಟ, ಹತಾಶೆ, ಸಂಬಳ, ಕೆಲಸದ ವಿಧಾನ, ಕೆಲಸದ ನಡುವೆ ಡೆಲಿವರಿ ಬಾಯ್‌ಗಳು ಎದುರಿಸುವ ಕಷ್ಟಗಳು, ಗ್ರಾಹಕರುಗಳಿಂದ ಆಗುವ ಸಮಸ್ಯೆ, ಡೆಲಿವರಿ ಬಾಯ್‌ಗಳ ಭವಿಷ್ಯ, ಕನಸುಗಳು ಹಲವು ವಿಷಯಗಳ ಬಗ್ಗೆ ತೋರಿಸಲಾಗಿದೆ. ಸಿನಿಮಾದ ಬಗ್ಗೆ ಕುತೂಹಲ ಕೆರಳಿಸುವಂತೆ ಸಿನಿಮಾದ ಟ್ರೈಲರ್ ಇದೆ. ಸಿನಿಮಾದ ಟ್ರೈಲರ್ ಬಿಡುಗಡೆ ಆಗಿ ಈಗಾಗಲೇ ಮೂರು ದಿನಗಳಾಗಿದ್ದು ಸುಮಾರಿ 19 ಲಕ್ಷ ಬಾರಿ ಟ್ರೈಲರ್ ಅನ್ನು ವೀಕ್ಷಿಸಲಾಗಿದೆ.

    ನಂದಿತಾ ದಾಸ್ ನಿರ್ದೇಶನದ ಸಿನಿಮಾ

    ನಂದಿತಾ ದಾಸ್ ನಿರ್ದೇಶನದ ಸಿನಿಮಾ

    'ಜ್ವಿಗ್ಯಾಟೊ' ಸಿನಿಮಾವನ್ನು ನಂದಿತಾ ದಾಸ್ ನಿರ್ದೇಶನ ಮಾಡಿದ್ದು, ಸಿನಿಮಾದ ಮುಖ್ಯ ಪಾತ್ರದಲ್ಲಿ ಹಾಸ್ಯ ಕಲಾವಿದ ಕಪಿಲ್ ಶರ್ಮಾ ನಟಿಸಿದ್ದಾರೆ. ನಾಯಕಿಯ ಪಾತ್ರದಲ್ಲಿ ಸಹನಾ ಗೋಸ್ವಾಮಿ ನಟಿಸಿದ್ದಾರೆ. ಸಿನಿಮಾವನ್ನು ಅಪ್ಲೌಸ್ ಎಂಟರ್ಟೈನ್‌ಮೆಂಟ್ ನಿರ್ಮಾಣ ಮಾಡಿದೆ. ನಾಯಕ ನಟನಾಗಿ ಕಪಿಲ್ ಶರ್ಮಾಗೆ ಇದು ಮೂರನೇ ಸಿನಿಮಾ. ಈ ಮೊದಲು 'ಕಿಸ್ ಕಿಸ್ ಕೊ ಪ್ಯಾರ್ ಕರು', 'ಫಿರಂಗಿ' ಸಿನಿಮಾಗಳಲ್ಲಿ ಕಪಿಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

    English summary
    Kapil Sharma's Zwigato movie trailer impressing movie lovers. Movie is about delivery boys. Kapil Sharma played lead character. Nandita Das directed the movie.
    Friday, September 23, 2022, 12:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X