For Quick Alerts
  ALLOW NOTIFICATIONS  
  For Daily Alerts

  ಮಾರಾಟಕ್ಕಿರುವ ಪ್ರತಿಷ್ಟಿತ 'ಆರ್.ಕೆ.ಸ್ಟುಡಿಯೋಸ್' ಎಷ್ಟು ಬೆಲೆ ಬಾಳುತ್ತೆ ಗೊತ್ತೇ.?

  By Harshitha
  |

  ಬಾಲಿವುಡ್ ನ 'ಶೋಮ್ಯಾನ್' ರಾಜ್ ಕಪೂರ್ ಅವರ ಕನಸಿನ ಕೂಸು 'ಆರ್.ಕೆ.ಸ್ಟುಡಿಯೋಸ್' ಮಾರಾಟಕ್ಕಿರುವ ಸುದ್ದಿ ನಿಮಗೆಲ್ಲಾ ಗೊತ್ತೇ ಇದೆ. ಪ್ರತಿಷ್ಟಿತ 'ಆರ್.ಕೆ.ಸ್ಟುಡಿಯೋಸ್'ನಲ್ಲಿ ಕಳೆದ ವರ್ಷ ಬೆಂಕಿ ಅವಘಡ ಸಂಭವಿಸಿದ ಮೇಲೆ ಕಪೂರ್ ಕುಟುಂಬಕ್ಕೆ ನಷ್ಟ ಉಂಟಾಗಿತ್ತು.

  'ಆರ್.ಕೆ.ಸ್ಟುಡಿಯೋಸ್'ನಲ್ಲಿದ್ದ ಬಾಲಿವುಡ್ ನ ಸ್ಮರಣೀಯ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದವು. ಸ್ಟುಡಿಯೋನ ನವೀಕರಿಸಲು ಕಪೂರ್ ಕುಟುಂಬ ಪ್ರಯತ್ನ ಪಟ್ಟರೂ, ಸಾಧ್ಯವಾಗಲಿಲ್ಲ.

  ಬಿಳಿ ಆನೆಯನ್ನ ಸಾಕಿದಂತಾಗಿದ್ದ 'ಆರ್.ಕೆ.ಸ್ಟುಡಿಯೋಸ್'ನ ಮಾರಾಟ ಮಾಡಲು ಕಪೂರ್ ಕುಟುಂಬ ಒಮ್ಮತದ ನಿರ್ಧಾರ ಕೈಗೊಂಡಿದೆ. ಎರಡು ಎಕರೆ ಪ್ರದೇಶದಲ್ಲಿ ತಲೆ ಎತ್ತಿರುವ 'ಆರ್.ಕೆ.ಸ್ಟುಡಿಯೋಸ್'ನ ಬೆಲೆ ಎಷ್ಟು ಗೊತ್ತಾ.? ಸರಿ ಸುಮಾರು 500 ಕೋಟಿ.!

  ಕಪೂರ್ ಕುಟುಂಬ ಒಡೆತನದ ಆರ್.ಕೆ ಸ್ಟುಡಿಯೋಸ್ ಮಾರಾಟಕ್ಕಿದೆ.!ಕಪೂರ್ ಕುಟುಂಬ ಒಡೆತನದ ಆರ್.ಕೆ ಸ್ಟುಡಿಯೋಸ್ ಮಾರಾಟಕ್ಕಿದೆ.!

  ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ... ಮುಂಬೈನ ಚೆಂಬೂರ್ ನಲ್ಲಿ ಇರುವ 'ಆರ್.ಕೆ.ಸ್ಟುಡಿಯೋಸ್'ನ ಮಾರ್ಕೆಟ್ ಮೌಲ್ಯ 500 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

  ಎಪ್ಪತ್ತು ವರ್ಷಗಳ ಹಿಂದೆ ಚಿತ್ರರಂಗಕ್ಕೆ ಸಹಕಾರಿ ಆಗಲಿ ಎಂದು ರಾಜ್ ಕಪೂರ್ ಸಾಲ ಪಡೆದು 'ಆರ್.ಕೆ.ಸ್ಟುಡಿಯೋಸ್' ನಿರ್ಮಿಸಿದ್ದರು. 'ಆಗ್', 'ಬರ್ಸಾತ್', 'ಆವಾರಾ', 'ಜಾಗ್ತೇ ರಹೋ' ಸೇರಿದಂತೆ ಹಲವು ಸಿನಿಮಾಗಳ ಚಿತ್ರೀಕರಣ ಇಲ್ಲಿಯೇ ನಡೆದಿತ್ತು.

  ಗಣೇಶೋತ್ಸವ ಹಾಗೂ ಹೋಳಿ ಸಂಭ್ರಮವನ್ನ ಕಪೂರ್ ಕುಟುಂಬ ಇದೇ ಸ್ಟುಡಿಯೋದಲ್ಲಿಯೇ ಆಚರಿಸುತ್ತಿತ್ತು.

  ನರ್ಗಿಸ್ ರಿಂದ ಹಿಡಿದು ವೈಜಯಂತಿಮಾಲಾ ವರೆಗೂ ಎಲ್ಲಾ ರಾಜ್ ಕಪೂರ್ ನಾಯಕಿಯರ ಕಾಸ್ಟ್ಯೂಮ್ಸ್, 'ಮೇರಾ ನಾಮ್ ಜೋಕರ್' ಮಾಸ್ಕ್, 'ಅವಾರಾ' ಸಿನಿಮಾದಲ್ಲಿ ಬಳಸಿದ ಪಿಯಾನೋ ಸೇರಿದಂತೆ ಎಷ್ಟೋ ಸ್ಮರಣೀಯ ವಸ್ತುಗಳು 'ಆರ್.ಕೆ.ಸ್ಟುಡಿಯೋಸ್'ನಲ್ಲಿತ್ತು. ಆದ್ರೆ, ಕಳೆದ ವರ್ಷ ಬೆಂಕಿ ಅವಘಡದಲ್ಲಿ ಅವೆಲ್ಲವೂ ಸುಟ್ಟು ಭಸ್ಮವಾಗಿತ್ತು.

  ಈಗ ಸ್ಟುಡಿಯೋ ನಿರ್ವಹಣೆ ಕಷ್ಟವಾಗಿರುವ ಕಾರಣ, ಅದನ್ನ ಮಾರಲು ಕಪೂರ್ ಕುಟುಂಬ ತೀರ್ಮಾನಿಸಿದೆ. 500 ಕೋಟಿ ರೂಪಾಯಿ ಬೆಲೆ ಬಾಳುವ 'ಆರ್.ಕೆ.ಸ್ಟುಡಿಯೋಸ್'ನ ಯಾರು ಖರೀದಿ ಮಾಡ್ತಾರೋ, ನೋಡಬೇಕು.

  English summary
  According to the reports, Kapoor Family's Iconic RK Studios will fetch more than Rs 500 crores.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X