ಕರಣ್ ಜೋಹರ್ 50ನೇ ಬರ್ತ್‌ಡೇ ಪಾರ್ಟಿ: 55 ಮಂದಿಗೆ ಕೊರೊನಾ?

ಇತ್ತೀಚಿಗೆ ಬಾಲಿವುಡ್‌ನಲ್ಲಿ ಎಲ್ಲಾ ಸ್ಟಾರ್‌ಗಳು ಒಂದೇ ಸೂರಿನಲ್ಲಿ ಕಾಣಿಸಿಕೊಂಡಿದ್ದರು. ಬಹುತೇಕ ಸ್ಟಾರ್ ನಟ ನಟಿಯರು, ನಿರ್ದೇಶಕ ನಿರ್ಮಾಪಕರು, ಕಲಾವಿದರು ಒಟ್ಟಾಗಿ ಒಂದೇ ಸೂರಿನಡಿ ಮಿಂಚಿದ್ದರು. ಅದು ಮತ್ತೇನು ಅಲ್ಲ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಹುಟ್ಟುಹಬ್ಬ. ಕರಣ್ ಜೋಹರ್ ಹುಟ್ಟುಹಬ್ಬ ಎಷ್ಟು ಅದ್ಧೂರಿಯಾಗಿ ನೆರವೇರಿದೆ ಎಂಬುದರ ಬಗ್ಗೆ ಎಲ್ಲರಿಗೂ ಗೊತ್ತಿದೆ.

ಇನ್ನು ಕರಣ್ ಜೋಹರ್ ಬರ್ತಡೇ ಪಾರ್ಟಿ ಎಂದರೆ ಪ್ರತಿಬಾರಿಯೂ ಅಷ್ಟೇ ಅದ್ಧೂರಿತನ ಇದ್ದೇ ಇರುತ್ತೆ. ಜೊತೆಗೆ ಪಾರ್ಟಿಯ ಬಗ್ಗೆ ವಿವಾದ ಹರಿದಾಡುತ್ತವೆ. ಆದರೆ ಈ ಬಾರಿ ಆ ರೀತಿಯ ಯಾವುದೇ ಗಾಸಿಪ್‌ಗಳು ಕೇಳಿ ಬಂದಿರಲಿಲ್ಲ. ಆದರೀಗ ಕೊನೆಗೂ ಕರಣ್ ಜೋಹರ್ ಪಾರ್ಟಿಗೆ ಕಳಂಕ ಬಂದುಬಿಟ್ಟಿದೆ.

ಅದು ಮತ್ತೇನು ಅಲ್ಲ ಕೊರೊನಾ ಕಳಂಕ. ಹೌದು, ಕರಣ್ ಜೋಹರ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗಿಯಾಗಿದ್ದ ಹಲವು ಸಿನಿಮಾ ತಾರೆಯರಿಗೆ ಕೊರೊನಾ ಕಾಣಿಸಿಕೊಂಡಿದೆಯಂತೆ. ಬರೋಬ್ಬರಿ 55 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆಯಂತೆ.

Karan Johar 50th Birthday Party leaves 55 guests Covid infected

ಸದ್ಯ ಈ ಸುದ್ದಿ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಕರಣ್ ಪಾರ್ಟಿಗೆ ಹೋದ 55 ಮಂದಿಗೆ ಕೊರೊನಾ ಬಂದಿದೆ. ಆದರೆ ಈ ವಿಚಾರವನ್ನು ಗುಟ್ಟಾಗಿ ಇಡಲಾಗಿದೆ ಎಂದು ವರದಿಯಾಗಿದೆ. ಆದರೆ ಈ ಪಾರ್ಟಿಯಲ್ಲಿ ಕಾಣಿಸಿಕೊಂಡ ಕಾರಣಕ್ಕೆ ಕೊರೊನಾ ಬಂತು ಎಂದು ಯಾರೋಬ್ಬರು ಹೇಳಿಕೊಂಡಿಲ್ಲ. ಈ ಬಗ್ಗೆ ಕರಣ್ ಜೋಹರ್ ಕೂಡ ಪ್ರತಿಕ್ರಿಯೆ ನೀಡಿಲ್ಲ.

Karan Johar 50th Birthday Party leaves 55 guests Covid infected

ಇನ್ನು ಕರಣ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಬಾಲಿವುಡ್ ತಾರೆಯರು ಮಾತ್ರವಲ್ಲ, ಸೌತ್ ಚಿತ್ರರಂಗದ ನಟಿ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ, ಚಾರ್ಮಿ ಸೇರಿದಂತೆ ಹಲವರು ಭಾಗಿ ಆಗಿದ್ದರು. ಇನ್ನು ಬಾಲಿವುಡ್‌ ಕಡೆಯಿಂದ ಕರೀನಾ ಕಪೂರ್, ಸೈಫ್ ಅಲಿ ಖಾನ್, ಶಾರುಖ್ ಖಾನ್ ದಂಪತಿ, ಹೃತಿಕ್ ರೋಷನ್, ರವೀನಾ ಟಂಡನ್, ಮಲೈಕಾ ಅರೋರಾ, ಜಾಹ್ನವಿ ಕಪೂರ್, ಅನನ್ಯ ಪಾಂಡೆ, ಕಾಜೊಲ್ ಸೇರಿದಂತೆ ಹಲವು ತಾರೆಯರು ಭಾಗಿ ಆಗಿದ್ದರು.

More from Filmibeat

English summary
Karan Johar 50th Birthday Party leaves 55 guests Covid infected, Know More Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X