ಕರಣ್ ಜೋಹರ್ ಬರ್ತ್ ಡೇ: ರಶ್ಮಿಕಾ, ಯಶ್ ಮತ್ತು ಸೌತ್ ಸ್ಟಾರ್ಸ್ ಭಾಗಿ!

ಕರಣ್ ಜೋಹರ್ ಬಾಲಿವುಡ್‌ನ ಹೆಸರಾಂತ ನಿರ್ಮಾಪಕ. ಇವರನ್ನು ಸ್ಟಾರ್ ನಿರ್ಮಾಪಕ ಅಂತಲೇ ಕರೆಯಲಾಗುತ್ತದೆ. ಕರಣ್ ಜೋಹರ್ ದೊಡ್ಡ, ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಬಾಲಿವುಡ್‌ನಲ್ಲಿ ಹಲವಾರು ಸ್ಟಾರ್‌ಗಳನ್ನು ಕರಣ್ ಜೋಹರ್ ಹುಟ್ಟು ಹಾಕಿದ್ದಾರೆ. ಹಾಗಾಗಿ ಕರಣ್ ಹುಟ್ಟು ಹಬ್ಬ ಅಂದರೆ ಅದು ಇಡೀ ಬಾಲಿವುಡ್‌ಗೆ ಅತ್ಯಂತ ವಿಶೇಷ. ಈ ಬಾರಿ ಕರಣ್ ಜೋಹರ್ ತಮ್ಮ 50ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಾ ಇದ್ದಾರೆ.

50ನೇ ವರ್ಷದ ಹುಟ್ಟು ಹಬ್ಬ ಆದ ಕಾರಣ ಇದು ಕರಣ್ ಜೋಹರ್‌ಗೆ ಅತ್ಯಂತ ವಿಶೇಷ. ಜೊತೆಗೆ ಈ ಬಾರಿ ದೊಡ್ಡ ಮಟ್ಟದಲ್ಲಿ ಪಾರ್ಟಿಯನ್ನು ಆಯೋಜಿಸಲಾಗಿದೆಯಂತೆ. ಬಾಲಿವುಡ್ ಜೊತೆಗೆ ಈ ಬಾರಿ ಸೌತ್‌ನ ಹಲವು ಕಲಾವಿದರು ಪಾರ್ಟಿಯನ್ನು ಭಾಗಿ ಆಗಲಿದ್ದಾರೆ.

Recommended Video

ಸೌತ್‌ನ ಯಾವೆಲ್ಲ ನಟರು ಇರಲಿದ್ದಾರೆ ಕರಣ್ ಪಾರ್ಟಿಯಲ್ಲಿ? | #KaranJohar

ಕರಣ್ ಜೋಹರ್ ಹುಟ್ಟು ಹಬ್ಬದಲ್ಲಿ ಯಶ್ ಭಾಗಿ!

ಕರಣ್ ಜೋಹರ್ ಹುಟ್ಟು ಹಬ್ಬದಲ್ಲಿ ಯಶ್ ಭಾಗಿ!

ಕರಣ್ ಜೋಹರ್ ಹುಟ್ಟು ಹಬ್ಬದಲ್ಲಿ ಸಿನಿಮಾ ರಂಗದ ಹಲವು ಸಿನಿಮಾ ಗಣ್ಯರು ಭಾಗಿ ಆಗುತ್ತಾರೆ. ಈ ಸಂಭ್ರಮಾಚರಣೆಗೆ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್‌ಗೆ ಆಹ್ವಾನ ಬಂದಿದೆ ಎನ್ನಲಾಗಿದೆ. ಹಾಗಾಗಿ ಇಂದು ಕರಣ್ ಜೋಹರ್ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಭಾಗಿ ಆಗುವ ಸಾಧ್ಯತೆ ಇದೆ.

ಮುಂಬೈನಲ್ಲಿ ರಶ್ಮಿಕಾ, ವಿಜಯ್ ದೇವರಕೊಂಡ!

ಮುಂಬೈನಲ್ಲಿ ರಶ್ಮಿಕಾ, ವಿಜಯ್ ದೇವರಕೊಂಡ!

ಇನ್ನು ನಟಿ ರಶ್ಮಿಕಾ ಮಂದಣ್ಣ ಕೂಡ ಈಗಾಗಲೇ ಬಾಲಿವುಡ್‌ ಮಂದಿಗೆ ಹತ್ತಿರ ಆಗಿದ್ದಾರೆ. ಹಾಗಾಗಿ ರಶ್ಮಿಕಾ ಮಂದಣ್ಣ ಕೂಡ ಕರಣ್ ಬರ್ತ್ ಡೆ ಪಾರ್ಟಿಯಲ್ಲಿ ಭಾಗಿ ಆಗುತ್ತಿದ್ದಾರೆ. ರಶ್ಮಿಕಾ ಜೊತೆಗೆ ವಿಜಯ್ ದೇವರಕೊಂಡ ಕೂಡ ಭಾಗಿ ಆಗಲಿದ್ದು, ಇಬ್ಬರು ಈಗಾಗಲೇ ಏರ್ಪೋರ್ಟ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.

ಕರಣ್ ಬರ್ತ್‌ಡೇಗೆ ಬರುವ ಸೌತ್ ಸ್ಟಾರ್‌ಗಳು!

ಕರಣ್ ಬರ್ತ್‌ಡೇಗೆ ಬರುವ ಸೌತ್ ಸ್ಟಾರ್‌ಗಳು!

ಇನ್ನು ಸೌತ್ ಸಿನಿಮಾರಂಗದ ಹಲವು ಗಣ್ಯರನ್ನು ಕರಣ್ ಹುಟ್ಟು ಹಬ್ಬದ ಪಾರ್ಟಿಗೆ ಆಹ್ವಾನಿಸಲಾಗಿದೆ. ರಶ್ಮಿಕಾ, ಯಶ್, ವಿಜಯ್ ದೇವರಕೊಂಡ ಬಿಟ್ಟರೆ, ನಟಿ ಸಮಂತಾ, ಪೂಜಾ ಹೆಗ್ಡೆ, ಜೂ.ಎನ್‌ಟಿಆರ್, ರಾಮ್‌ ಚರಣ್ ಮತ್ತು ಅಲ್ಲು ಅರ್ಜುನ್ ಸೌತ್ ಸಿನಿಮಾರಂಗದಿಂದ ಕರಣ್ ಹುಟ್ಟು ಹಬ್ಬದಲ್ಲಿ ಭಾಗಿ ಆಗುವ ಪ್ರಮುಖ ಗಣ್ಯರು.

ಕರಣ್ ಬರ್ತ್‌ಡೆಗೆ ಬರುವ ಬಾಲಿವುಡ್ ಸ್ಟಾರ್ಸ್!

ಕರಣ್ ಬರ್ತ್‌ಡೆಗೆ ಬರುವ ಬಾಲಿವುಡ್ ಸ್ಟಾರ್ಸ್!

ಇನ್ನು ಬಾಲಿವುಡ್‌ನಲ್ಲಿ ಬಹುತೇಕ ಸ್ಟಾರ್ ನಟ, ನಟಿಯರು ಕರಣ್ ಜೋಹರ್‌ಗೆ ಆಪ್ತರೆ. ಹಾಗಾಗಿ ಎಲ್ಲಾ ಸ್ಟಾರ್‌ಗಳು ಕೂಡ ಭಾಗಹಿಸುವ ಸಾಧ್ಯತೆ ಇದೆ. ಇದರಲ್ಲಿ ಪ್ರಮುಖ ಅತಿಥಿಗಳ ಹೆರಸು ರಿವೀಲ್ ಆಗಿದೆ. ದೀಪಿಕಾ ಪಡುಕೋಣೆ, ಕರಣ್ ಜೋಹರ್, ಶಾರುಖ್ ಖಾನ್, ಕರೀನಾ ಕಪೂರ್, ರಾಣಿ ಮುಖರ್ಜಿ, ಕಾಜೊಲ್, ಆಲಿಯಾ ಭಟ್, ರಣ್ಬೀರ್ ಕಪೂರ್, ರಣ್ವೀರ್ ಸಿಂಗ್, ವರುಣ್ ಧವನ್ ಸಿದ್ಧಾರ್ಥ್ ಮಲ್ಹೋತ್ರಾ ಸೇರಿದಂತೆ ಹಲವು ಕಲಾವಿದರು ಪಾರ್ಟಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

More from Filmibeat

English summary
Karan Johar 50th Birthday Who Are In Guest List From South, Know More Details,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X