ಮೊದಲ ಭೇಟಿಯಲ್ಲೇ ಶಾರುಖ್ ಖಾನ್‌ಗೆ ಶರ್ಟ್ ಗುಂಡಿ ತೆಗೆಯಲು ಹೇಳಿದ್ದ ಕರಣ್ ಜೋಹರ್, ಶಾರುಖ್ ಪ್ರತಿಕ್ರಿಯೆ ಇದು!

By ಫಿಲ್ಮಿಬೀಟ್ ಡೆಸ್ಕ್

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಮತ್ತು ನಟ ಶಾರುಖ್ ಖಾನ್ ಅವರ ಸ್ನೇಹ ಎಷ್ಟು ಗಾಢವಾದದ್ದು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಅವರ ಮೊದಲ ಭೇಟಿಯಲ್ಲಿ ಕರಣ್ ಜೋಹರ್ ಪೇಚಿಗೆ ಸಿಲುಕಿದ್ದರು ಎಂಬುದು ಎಷ್ಟು ಮಂದಿಗೆ ಗೊತ್ತಿದೆ?. ಎಸ್...ಈ ಬಗ್ಗೆ ಕರನ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಆದಿತ್ಯ ಚೋಪ್ರಾ ಅವರ ಸೂಪರ್ ಹಿಟ್ ಸಿನಿಮಾ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದ ಸೆಟ್‌ನಲ್ಲಿ ಶಾರುಖ್ ಖಾನ್- ಕರಣ್ ಜೋಹರ್ ಇಬ್ಬರು ಮೊದಲ ಬಾರಿಗೆ ಭೇಟಿಯಾಗಿದ್ದರು. ಈ ಸಿನಿಮಾದಲ್ಲಿ ನಿರ್ದೇಶಕ ಕರಣ್ ಸಹಾಯಕ ನಿರ್ದೇಶಕರಾಗಿದ್ದರು. ಹೀಗಿದ್ದಾಗ ಅವರು ನಾಯಕ ಶಾರುಖ್‌ಗೆ ಫ್ಯಾಷನ್ ಟಿಪ್ಸ್ ನೀಡಿದ್ದರಂತೆ!.

Karan Johar advised Shah Rukh Khan to unbutton his shirt on their first meeting

ಶರ್ಟ್ ಬಟನ್ ತೆಗೆ ಎಂದಿದ್ದ ಕರಣ್!

ಫ್ಯಾಶನ್ ಡಿಸೈನರ್ ಪ್ರಬಲ್ ಗುರುಂಗ್ ಅವರೊಂದಿಗಿನ ಸಂಭಾಷಣೆಯಲ್ಲಿ, ಕರಣ್ ಜೋಹರ್ ಅವರು ಡಿಡಿಎಲ್‌ಜೆ ಸೆಟ್‌ನಲ್ಲಿ ಶಾರುಖ್ ಖಾನ್ ಜೊತೆಗಿನ ಫಜೀತಿಯನ್ನು ನೆನಪಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ತಾವು, ನಟನಿಗೆ ಕೆಲವು ಫ್ಯಾಷನ್ ಟಿಪ್ಸ್ ನೀಡಿದ್ದು, ಅವರ ಶರ್ಟ್‌ನ ಬಟನ್‌ಗಳನ್ನು ತೆರೆಯುವಂತೆ ಸಲಹೆ ನೀಡಿದ್ದನ್ನು ಹೇಳಿದ್ದಾರೆ.

ಮೊದಲ ಭೇಟಿಯಲ್ಲಿ ಕರಣ್ ಹೇಳಿದ್ದೇನು?

"ನಾನು ಶಾರುಖ್ ಖಾನ್ ಅವರೊಂದಿಗಿನ ನನ್ನ ಮೊದಲ ಭೇಟಿಯನ್ನು ನೆನಪಿಸಿಕೊಳ್ಳುವುದಾದರೇ, ನಾನು ಡಿಡಿಎಲ್‌ಜೆ ಸಿನಿಮಾಗೆ ಸಹಾಯಕನಾಗಿದ್ದೆ. ಈ ವೇಳೆ ನಾಯಕ ಶಾರುಖ್‌ನನ್ನು ನೋಡಿ, ಓಹ್, ನೀನು ರಾಂಗ್ಲರ್ ಜೀನ್ಸ್ ತೊಟ್ಟಿದ್ದೀಯ ಗೊತ್ತಾ..? ನೀವು ಲೆವಿ ಜೀನ್ಸ್ ಧರಿಸಬೇಕು' ಎಂದು ಹೇಳಿದೆ. ನನಗೆ ಆಗ ಅದನ್ನು ಹೇಳಲು ನನ್ನ ಅರ್ಹತೆ ಏನು ಎಂಬುದು ತಿಳಿದಿರಲಿಲ್ಲ.

ಆದರೂ, ಮುಂದುವರೆದ ನಾನು "ಓಹ್, ನೀವು ಆಡಮ್ ಆಪಲ್ ಹೊಂದಿದ್ದೀರಾ?" ಎಂದು ಕೇಳಿದೆ. ಇಷ್ಟೇ ಅಲ್ಲದೇ, ನಿಮ್ಮ ಅಂಗಿಯ 2 ರಿಂದ 3 ಗುಂಡಿಗಳನ್ನು ತೆರೆಯಬೇಕು" ಎಂದು ಸಲಹೆ ನೀಡಿದೆ. ತಕ್ಷಣ ನನ್ನ ಮಾತಿನಿಂದ ದಿಗ್ಭ್ರಮೆಗೊಂಡ ಅವರು, ತಲೆಯಾಡಿಸುತ್ತಲೇ ಇದ್ದರು. ಬಳಿಕ "ನೀವು ನನಗೆ ಸ್ವಲ್ಪ ಸಮಯ ಕೊಡುತ್ತೀರಾ, ನೀವು ಆದಿಯನ್ನು ಕರೆಯಬಹುದೇ? (ನಿರ್ದೇಶಕ ಆದಿತ್ಯ ಚೋಪ್ರಾ) ಎಂದು ಹೇಳಿದರು ಎಂದು ತಿಳಿಸಿದ್ದಾರೆ.

Karan Johar advised Shah Rukh Khan to unbutton his shirt on their first meeting

ಇನ್ನು, ಮುಂದೆ ಏನಾಯಿತು ಎಂದು ಹೇಳಿರುವ ಅವರು, "ಅವರು ಯಾರು...? ಅವರು ನನ್ನ ಆಡಮ್ ಆಪಲ್ ಬಗ್ಗೆ ಏಕೆ ಮಾತನಾಡುತ್ತಿದ್ದಾರೆ" ಎಂದು ನಿರ್ದೇಶಕ ಆದಿತ್ಯ ಚೋಪ್ರಾ ಆವರನ್ನು ಕೇಳಿದ್ದರು. ಅದಕ್ಕೆ ಅವರು ಸಮಜಾಯಿಷಿ ಕೊಟ್ಟರು. ಇದಾದ ನಂತರ ನಾನು ಅವರ ಜೊತೆಗೆ ತುಂಬಾ ಪ್ರಾಮಾಣಿಕನಾಗಿದ್ದೆ. ಒಮ್ಮೆ ಶಾರುಖ್ ಖಾನ್ ನೀನು ಏನು ಆಗಬೇಕು ಎಂದುಕೊಂಡಿದ್ದಿಯಾ ಎಂದು ಕೇಳಿದ್ದರು. ಆಗ ನಾನು ಡಿಸೈನರ್ ಆಗಬೇಕು ಎಂದು ಹೇಳಿದ್ದೆ ಎಂದು ಕರಣ್ ಜೋಹರ್ ತಿಳಿಸಿದ್ದಾರೆ.

ಫ್ಯಾಷನ್ ಡಿಸೈನರ್ ಆಗಬೇಕಿದ್ದ ಕರಣ್ ಜೋಹರ್ ಚಲನಚಿತ್ರ ನಿರ್ಮಾಪಕ, ನಿರ್ದೇಶಕರಾದರು. ಮೊದಲ ಭೇಟಿಯಲ್ಲೇ ಪೇಚಿಗೆ ಸಿಲುಕಿದ್ದ ಇಬ್ಬರು ಬಳಿಕ ಹಲವು ಸಿನಿಮಾಗಳಲ್ಲಿ ಜೊತೆಯಾದರು. ಕರಣ್ ಜೋಹರ್, ಶಾರುಖ್ ಖಾನ್ ಜೊತೆಗೆ ಕುಚ್ ಕುಚ್ ಹೋತಾ ಹೈ (1998), ಕಭಿ ಖುಷಿ ಕಭಿ ಗಮ್... (2001), ಕಭಿ ಅಲ್ವಿದಾ ನಾ ಕೆಹನಾ (2006), ಮೈ ನೇಮ್ ಈಸ್ ಖಾನ್ (2010) ಸಿನಿಮಾಗಳನ್ನು ಮಾಡಿದ್ದಾರೆ. ಜೊತೆಗೆ ಕರಣ್ ಜೋಹರ್ ಅವರ ಏ ದಿಲ್ ಹೈ ಮುಷ್ಕಿಲ್ (2016) ಚಿತ್ರದಲ್ಲಿ ಶಾರುಖ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

More from Filmibeat

English summary
Karan Johar advised Shah Rukh Khan to unbutton his shirt on their first meeting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X