twitter
    For Quick Alerts
    ALLOW NOTIFICATIONS  
    For Daily Alerts

    ಸತತ ಟ್ರೋಲ್‌ಗಳಿಂದ ಮಾನಸಿಕವಾಗಿ ಕುಗ್ಗಿ ಅಳುತ್ತಿದ್ದಾರೆ ಕರಣ್ ಜೋಹರ್

    |

    ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಎಲ್ಲ ದಿಕ್ಕುಗಳಿಂದಲೂ ವಾಗ್ದಾಳಿಗೆ ಒಳಗಾದವರು ನಿರ್ಮಾಪಕ ಕರಣ್ ಜೋಹರ್. ಕರಣ್ ಜೋಹರ್ ಈ ಹಿಂದೆ ಆಡಿದ್ದ ಮಾತುಗಳು, ಅವರ ವಿಡಿಯೋಗಳು ಎಲ್ಲವೂ ಮುನ್ನೆಲೆ ಬರುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಕರಣ್ ಹಿಗ್ಗಾಮುಗ್ಗಾ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ.

    ಸ್ಟಾರ್‌ಗಳ ಮಕ್ಕಳಿಗೆ ಬೆಂಬಲ ನೀಡುವ, ಹೊರಗಿನಿಂದ ಬಂದವರನ್ನು ಲೇವಡಿ ಮಾಡುವ, ಉದ್ದೇಶಪೂರ್ವಕವಾಗಿ ಅವರನ್ನು ಮಾನಸಿಕವಾಗಿ ಕುಗ್ಗಿಸುವಂತೆ ಮಾಡುವ ಆರೋಪ ಕರಣ್ ಜೋಹರ್ ಮೇಲೆ ಇದೆ. ಬಾಲಿವುಡ್‌ನಲ್ಲಿ ಚರ್ಚೆಯಾಗುತ್ತಿರುವ ಸ್ವಜನಪಕ್ಷಪಾತದ ಕೇಂದ್ರ ಬಿಂದು ಕರಣ್ ಜೋಹರ್. ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಕರಣ್ ಅವರ ಈ ವರ್ತನೆಯೂ ಒಂದು ಕಾರಣ ಎಂದು ಆರೋಪಿಸಲಾಗುತ್ತಿದೆ. ಇದರಿಂದ ಕರಣ್ ತೀವ್ರ ನೊಂದಿದ್ದಾರಂತೆ. ಮುಂದೆ ಓದಿ...

    ಬೆಂಬಲಕ್ಕೆ ಬಾರದ ಬಾಲಿವುಡ್: ಬೇಸೆತ್ತ ಕರಣ್ ಜೋಹರ್ 'ಮಾಮಿ' ಮಂಡಳಿಗೆ ರಾಜೀನಾಮೆ?ಬೆಂಬಲಕ್ಕೆ ಬಾರದ ಬಾಲಿವುಡ್: ಬೇಸೆತ್ತ ಕರಣ್ ಜೋಹರ್ 'ಮಾಮಿ' ಮಂಡಳಿಗೆ ರಾಜೀನಾಮೆ?

    ಹೈರಾಣಾಗಿದ್ದಾರೆ ಕರಣ್

    ಹೈರಾಣಾಗಿದ್ದಾರೆ ಕರಣ್

    ಸುಶಾಂತ್ ಸಾವಿನ ಬಳಿಕ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿರುವ ದ್ವೇಷ, ನಿಂದನೆ ಮತ್ತು ಟ್ರೋಲ್‌ಗಳನ್ನು ಕಂಡು ಕರಣ್ ಜೋಹರ್ ಕುಗ್ಗಿ ಹೋಗಿದ್ದಾರಂತೆ. ಈ ಹಿಂದೆಯೂ ಕರಣ್ ಅವರನ್ನು ವ್ಯಾಪಕ ಟ್ರೋಲ್ ಮಾಡಲಾಗುತ್ತಿತ್ತು. ಅವುಗಳನ್ನು ಅವರು ಲಘುವಾಗಿ ತೆಗೆದುಕೊಳ್ಳುತ್ತಿದ್ದರು. ಆದರೆ ಈಗ ಅವರ ಮೇಲೆ ನಿಂದನೆಗಳು ತೀವ್ರ ಪರಿಣಾಮ ಬೀರಿದೆ ಎಂದು ಕರಣ್ ಅವರ ಆಪ್ತ ಗೆಳೆಯರೊಬ್ಬರು ತಿಳಿಸಿದ್ದಾರೆ.

    ಕರಣ್ ಆರೋಗ್ಯದ ಮೇಲೆ ಪರಿಣಾಮ

    ಕರಣ್ ಆರೋಗ್ಯದ ಮೇಲೆ ಪರಿಣಾಮ

    ಹಲವು ವರ್ಷಗಳಿಂದಲೂ ಕರಣ್ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ಬೇರೆಯವರ ಕಾಳೆಯುತ್ತಿದ್ದ ಕರಣ್, ತಮ್ಮ ಮೇಲಿನ ಟೀಕೆಗಳಿಗೆ ಗಾಸಿಗೊಳ್ಳದಷ್ಟು ದಪ್ಪ ಚರ್ಮ ಬೆಳೆಸಿಕೊಂಡಿದ್ದರು. ಹೀಗಾಗಿ ಅವರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗ ಅವರ ಮೇಲೆ ನಡೆಯುತ್ತಿರುವ ದಾಳಿಯ ಪರಿ ಅವರನ್ನು ತೀವ್ರವಾಗಿ ನಿಂದಿಸಿದೆ. ಆರೋಗ್ಯದ ಮೇಲೆಯೂ ಪರಿಣಾಮ ಬೀರಿದೆ ಎಂದು ಅವರು ಸ್ನೇಹಿತ ಹೇಳಿದ್ದಾರೆ.

    ಅನುಷ್ಕಾ ಶೆಟ್ಟಿ ಡೇಟಿಂಗ್ ರೂಮರ್: ಕರಣ್ ಜೋಹರ್ ವಿರುದ್ಧ ಕಿಡಿಕಾರಿದ್ದ ಪ್ರಭಾಸ್ಅನುಷ್ಕಾ ಶೆಟ್ಟಿ ಡೇಟಿಂಗ್ ರೂಮರ್: ಕರಣ್ ಜೋಹರ್ ವಿರುದ್ಧ ಕಿಡಿಕಾರಿದ್ದ ಪ್ರಭಾಸ್

    ಸಂಬಂಧವಿಲ್ಲದವರ ಮೇಲೂ ದಾಳಿ

    ಸಂಬಂಧವಿಲ್ಲದವರ ಮೇಲೂ ದಾಳಿ

    ಕರಣ್ ತೀರಾ ಹತಾಶರಾಗಿದ್ದಾರೆ. ಈ ಹಿಂದೆ ಅವರನ್ನು ಮಾತ್ರ ಟ್ರೋಲ್ ಮಾಡಲಾಗುತ್ತಿತ್ತು. ಈಗ ಅವರಿಗೆ ಆಪ್ತರಾಗಿರುವವರ ವಿರುದ್ಧವೂ ದಾಳಿ ನಡೆಯುತ್ತಿದೆ. ಅವರ ಮೂರು ಮಕ್ಕಳಿಗೆ ಜೀವ ಬೆದರಿಕೆ ಬರುತ್ತಿವೆ. ಸುಶಾಂತ್ ಘಟನೆಗೆ ಸಂಬಂಧವೇ ಇಲ್ಲದ ಅನನ್ಯಾ ಪಾಂಡೆಯಂತಹ ನಟಿಯರನ್ನು ಟೀಕಿಸಲಾಗುತ್ತಿದೆ. ಸುಶಾಂತ್ ಸಾವಿಗೆ ಪರಿಹಾರ ನೀಡಲು ಆತ್ಮಹತ್ಯೆ ಮಾಡಿಕೊಳ್ಳಿ ಎಂದು ಆಕೆಗೆ ಬೆದರಿಸಲಾಗುತ್ತಿದೆ ಎಂದು ಕರಣ್ ನೊಂದಿದ್ದಾರಂತೆ.

    ಫೋನ್‌ನಲ್ಲಿ ಅಳುತ್ತಾರೆ

    ಫೋನ್‌ನಲ್ಲಿ ಅಳುತ್ತಾರೆ

    ಕರಣ್ ಜೋಹರ್ ಸದ್ಯ ಮಾತನಾಡುವ ಸ್ಥಿತಿಯಲ್ಲಿಲ್ಲ. ಅವರು ಸುಧಾರಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಫೋನ್‌ನಲ್ಲಿ ನನ್ನ ಜತೆ ಮಾತನಾಡುವಾಗ ಈ ಸನ್ನಿವೇಶದಿಂದ ನೊಂದಿರುವುದಾಗಿ ಬಿಕ್ಕಿ ಬಿಕ್ಕಿ ಅಳುತ್ತಾರೆ. ಈ ರೀತಿ ಆಗಲು ತಾವು ಮಾಡಿರುವ ತಪ್ಪಾದರೂ ಏನು ಎಂದು ಕೇಳುತ್ತಾರೆ ಎಂದು ಅವರ ಸ್ನೇಹಿತ ತಿಳಿಸಿದ್ದಾರೆ.

    ಬಾಲಿವುಡ್‌ನಲ್ಲಿ ಸಿಗದ ಬೆಂಬಲ

    ಬಾಲಿವುಡ್‌ನಲ್ಲಿ ಸಿಗದ ಬೆಂಬಲ

    ಸುಶಾಂತ್ ಸಾವಿನ ಬಳಿಕ ತೀವ್ರ ಟೀಕೆಗೆ ಒಳಗಾಗಿರುವ ಕರಣ್ ಜೋಹರ್ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಇದುವರೆಗೂ ಯಾವುದೇ ಪೋಸ್ಟ್ ಹಾಕಿಲ್ಲ. ಅವರು ಫಾಲೋ ಮಾಡುತ್ತಿದ್ದ ಖಾತೆಗಳ ಸಂಖ್ಯೆಯನ್ನೂ ಕಡಿಮೆ ಮಾಡಿದ್ದಾರೆ. ಬಾಲಿವುಡ್‌ನಲ್ಲಿ ಯಾರೂ ಅವರ ಬೆಂಬಲಕ್ಕೆ ಬರುತ್ತಿಲ್ಲ ಎಂಬ ಬೇಸರ ಅವರಲ್ಲಿ ಮೂಡಿದೆ ಎನ್ನಲಾಗಿದೆ. ಅದಕ್ಕಾಗಿ ಇತ್ತೀಚೆಗೆ ಮುಂಬೈ ಚಿತ್ರೋತ್ಸವದ ಮಂಡಳಿಗೂ ರಾಜೀನಾಮೆ ನೀಡಿದ್ದರು.

    ಕರಣ್ ಜೋಹರ್ ಬೆಂಬಲಕ್ಕೆ ಬಂದ ಶತ್ರುಘ್ನ ಸಿನ್ಹಾ, ಸ್ವರ ಭಾಸ್ಕರ್: ನೆಟ್ಟಿಗರ ಛೀಮಾರಿಕರಣ್ ಜೋಹರ್ ಬೆಂಬಲಕ್ಕೆ ಬಂದ ಶತ್ರುಘ್ನ ಸಿನ್ಹಾ, ಸ್ವರ ಭಾಸ್ಕರ್: ನೆಟ್ಟಿಗರ ಛೀಮಾರಿ

    English summary
    Karan Johar's friend reveals that, Karan is shattered after social media attack for Sushant Singh Rajput's demise.
    Wednesday, July 8, 2020, 12:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X