For Quick Alerts
  ALLOW NOTIFICATIONS  
  For Daily Alerts

  ಕನಸಿನ ಪ್ರಾಜೆಕ್ಟ್‌ 'ತಖ್ತ್' ಕೈಬಿಟ್ಟ ಕರಣ್ ಜೋಹರ್, ಕಾರಣವೇನು?

  |

  ಐದು ವರ್ಷದ ಹಿಂದೆ ನಿರ್ಮಾಪಕ ಕರಣ್ ಜೋಹರ್ ದೊಡ್ಡ ಪ್ರಾಜೆಕ್ಟ್‌ವೊಂದನ್ನು ಘೋಷಣೆ ಮಾಡಿದರು. ಈ ಚಿತ್ರದಲ್ಲಿ ರಣ್ವೀರ್ ಸಿಂಗ್, ಕರೀನಾ ಕಪೂರ್ ಖಾನ್, ಆಲಿಯಾ ಭಟ್, ವಿಕ್ಕಿ ಕೌಶಲ್, ಭೂಮಿ ಪಡ್ನೆಕರ್ ಹಾಗೂ ಜಾಹ್ನವಿ ಕಪೂರ್ ಅವರನ್ನು ಕಲಾವಿದರಾಗಿ ಆಯ್ಕೆ ಮಾಡಿಕೊಂಡರು.

  ಎಲ್ಲಾ ಪೂರ್ವ ತಯಾರಿ ನಡೆದು ಚಿತ್ರೀಕರಣಕ್ಕೆ ಪ್ಲಾನ್ ಸಹ ಆಯಿತು. ಇನ್ನೇನೂ ಶೂಟಿಂಗ್ ಶುರು ಮಾಡಬೇಕು ಎನ್ನುವ ಸಮಯದಲ್ಲಿ ಕೊರೊನಾ ವೈರಸ್ ಸಂಕಷ್ಟ ಎದುರಾಯಿತು. ಚಿತ್ರೀಕರಣದ ಯೋಜನೆ ಅಲ್ಲಿಗೆ ನಿಂತಿತು. ಸುಮಾರು ಎರಡು ವರ್ಷ ಅದರಿಂದ ಹಾಳಾಯಿತು. ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಮೇಲೆ ಸೆಟ್ಟೇರಬಹುದು ಎಂಬ ನಿರೀಕ್ಷೆ ಇತ್ತು. ಆದ್ರೀಗ, ಈ ಪ್ರಾಜೆಕ್ಟ್‌ನ್ನು ಕೈಬಿಡಲು ಕರಣ್ ನಿರ್ಧರಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಕನಸಿನ ಚಿತ್ರದಿಂದ ನಿರ್ಮಾಪಕ ಕರಣ್ ಹಿಂದೆ ಸರಿದಿದ್ದು ಏಕೆ? ಮುಂದೆ ಓದಿ...

  ಹಣದ ಸಮಸ್ಯೆಯಾಗಬಹುದು

  ಹಣದ ಸಮಸ್ಯೆಯಾಗಬಹುದು

  ತಖ್ತ್ ಸಿನಿಮಾ ಮೊಘಲ್ ಇತಿಹಾಸದ ಕಥಾ ಹಂದರ ಹೊಂದಿದೆ. ಈ ಕಥೆ ವಿವಾದಕ್ಕೂ ಗುರಿಯಾಗಬಹುದು ಎಂಬ ಮುನ್ಸೂಚನೆ ನಿರ್ಮಾಪಕರಿಗಿದೆ. ಜೊತೆಗೆ ವೇಷಭೂಷಣ, ಸೆಟ್ ಎಲ್ಲವೂ ಲೆಕ್ಕಾಚಾರ ನೋಡಿದ್ರೆ ಭಾರಿ ಬಜೆಟ್‌ನಲ್ಲಿ ನಿರ್ಮಾಣ ಮಾಡಬೇಕಿದೆ. ಹಾಗಾಗಿ, ಹಣದ ಸಮಸ್ಯೆ ಎದುರಾಗುತ್ತದೆ ಎಂಬ ಮುಂದಾಲೋಚನೆಯಿಂದ ಕರಣ್ ಜೋಹರ್ ಈ ಪ್ರಾಜೆಕ್ಟ್ ಕೈ ಬಿಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

  ವಕೀಲರೊಬ್ಬರ ಜೀವನ ಆಧರಿಸಿದ ಸಿನಿಮಾ ಘೋಷಿಸಿದ ಕರಣ್: ಯಾರೀ ವಕೀಲ?ವಕೀಲರೊಬ್ಬರ ಜೀವನ ಆಧರಿಸಿದ ಸಿನಿಮಾ ಘೋಷಿಸಿದ ಕರಣ್: ಯಾರೀ ವಕೀಲ?

  ಸಹ ನಿರ್ಮಾಪಕರ ಜೊತೆಗಿನ ವೈಮನಸ್ಸು

  ಸಹ ನಿರ್ಮಾಪಕರ ಜೊತೆಗಿನ ವೈಮನಸ್ಸು

  ಅಂದ್ಹಾಗೆ, ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ ಜೊತೆ ಫಾಕ್ಸ್ ಸ್ಟಾರ್ ಸಂಸ್ಥೆ ಈ ಚಿತ್ರ ನಿರ್ಮಾಣಕ್ಕೆ ಕೈ ಹಾಕಿತ್ತು. ಆದ್ರೀಗ, ಫಾಕ್ಸ್ ಸ್ಟಾರ್ ಬ್ಯಾನರ್ ಈ ಚಿತ್ರದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದರಂತೆ. ಸಹಜವಾಗಿ ಕರಣ್ ಜೋಹರ್‌ಗೆ ಆರ್ಥಿಕ ಸಮಸ್ಯೆ ಎದುರಾಗುವ ಆಲೋಚನೆಯಿಂದ ತಖ್ತ್ ನಿಲ್ಲಿಸಲು ಮುಂದಾಗಿದ್ದಾರೆ.

  ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ

  ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ

  ತಖ್ತ್ ಚಿತ್ರವನ್ನು ಪೂರ್ಣವಾಗಿ ಕೈ ಬಿಟ್ಟ ಕರಣ್ ಜೋಹರ್ ಹೊಸ ಚಿತ್ರದ ಗಮನ ಹರಿಸಲು ಮುಂದಾಗಿದ್ದಾರೆ. ಇತ್ತೀಚಿಗಷ್ಟೆ 'ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ' ಎಂಬ ಸಿನಿಮಾ ಅನೌನ್ಸ್ ಮಾಡಿದ್ದು, ಈ ಚಿತ್ರದಲ್ಲಿ ರಣ್ವೀರ್ ಸಿಂಗ್, ಆಲಿಯಾ ಭಟ್, ಜಯಾ ಬಚ್ಚನ್, ಧರ್ಮೇಂದ್ರ, ಶಬಾನಾ ಅಜ್ಮಿ ಅಂತಹ ಕಲಾವಿದರು ನಟಿಸುತ್ತಿದ್ದಾರೆ.

  ಕಾರ್ತಿಕ್ ಬದಲು ಸ್ಟಾರ್ ನಟನ ಜೊತೆ ಆನಂದ್ ಎಲ್ ರೈ ಸಿನಿಮಾ?ಕಾರ್ತಿಕ್ ಬದಲು ಸ್ಟಾರ್ ನಟನ ಜೊತೆ ಆನಂದ್ ಎಲ್ ರೈ ಸಿನಿಮಾ?

  ಹೋಟೆಲ್ ಸಪ್ಲೇಯರ್ ಗೆ ಹೊಡೆದ ದರ್ಶನ್ ಅಂಡ್ ಗ್ಯಾಂಗ್ : ಇಂದ್ರಜಿತ್ ಲಂಕೇಶ್ | Filmibeat Kannada
  ತಖ್ತ್ ನಿಂತಿಲ್ಲ, ಮುಂದೂಡಿಕೆಯಾಗಿದೆ?

  ತಖ್ತ್ ನಿಂತಿಲ್ಲ, ಮುಂದೂಡಿಕೆಯಾಗಿದೆ?

  ಇದೇ ವರ್ಷದ ಆರಂಭದಲ್ಲಿ ಕರಣ್ ಜೋಹರ್ ಈ ಸಂಬಂಧ ಪ್ರತಿಕ್ರಿಯೆ ನೀಡಿದ ವೇಳೆ, ತಖ್ತ್ ಸಿನಿಮಾ ನಿಂತಿಲ್ಲ ಸದ್ಯಕ್ಕೆ ಮುಂದೂಡಿದ್ದೇವೆ ಎಂದಿದ್ದರು. ಆದ್ರೀಗ ಈ ಪ್ರಾಜೆಕ್ಟ್‌ ಪೂರ್ಣ ಪ್ರಮಾಣದಲ್ಲಿ ಕೈ ಬಿಡಲಾಗಿದೆ ಎಂಬ ಸುದ್ದಿ ಚರ್ಚೆಯಲ್ಲಿದೆ. ಅಂದ್ಹಾಗೆ, 2016ರಲ್ಲಿ 'ಹೇ ದಿಲ್ ಹೈ ಮುಷ್ಕಿಲ್' ಸಿನಿಮಾ ಬಳಿಕ ಈ ಸಿನಿಮಾ ಘೋಷಣೆ ಮಾಡಿದ್ದರು.

  English summary
  Bollywood Producer Karan Johar has finally decided to shelve Takht project due to financial pitfalls.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X