"ನೀವು ಸಲಿಂಗ ಕಾಮಿನಾ?": ನೆಟ್ಟಿಗನ ಬಹಿರಂಗ ಪ್ರಶ್ನೆಗೆ ಕರಣ್ ಜೋಹರ್ ಉತ್ತರ ಏನು?
ಬಾಲಿವುಡ್ ನಿರ್ದೇಶಕ, ನಿರ್ಮಾಪಕ, ನಿರೂಪಕ ಕರಣ್ ಜೋಹರ್ ಇತ್ತೀಚೆಗೆ ಕೊಂಚ ಸೈಲೆಂಟ್ ಆಗಿದ್ದಾರೆ. ಒಂದ್ಕಾಲದಲ್ಲಿ 'ಕುಚ್ ಕುಚ್ ಹೋತಾ ಹೈ', 'ಮೈ ನೇಮ್ ಈಸ್ ಖಾನ್', 'ಸ್ಟೂಡೆಂಡ್ ಆಫ್ ದಿ ಇಯರ್' ರೀತಿಯ ಹಿಟ್ ಸಿನಿಮಾಗಳನ್ನು ಕೊಟ್ಟ ಕರಣ್ ಈಗ ಅಷ್ಟಾಗಿ ಸಿನಿಮಾ ನಿರ್ದೇಶನ ಮಾಡುತ್ತಿಲ್ಲ. ಬದಲಿಗೆ ಹೆಚ್ಚು ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ.
ಕರಣ್ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಊಹಾಪೋಹಗಳಿವೆ. ಆತ ಮದುವೆ ಮಾಡಿಕೊಂಡಿಲ್ಲ. ಸರೋಗಸಿ ವಿಧಾನದ ಮೂಲಕ ಇಬ್ಬರು ಮಕ್ಕಳಿಗೆ ತಂದೆಯಾಗಿದ್ದಾರೆ. ಮಗನ ಹೆಸರು ಯಶ್, ಮಗಳ ಹೆಸರು ರೂಹಿ. ಈ ಮಕ್ಕಳ ತಾಯಿ ಯಾರು ಎಂಬುದು ತಿಳಿದಿಲ್ಲ. ಕರಣ್ ಜೋಹರ್ ಯಾಕೆ ಮದುವೆ ಮಾಡಿಕೊಳ್ಳಲಿಲ್ಲ? ಎನ್ನುವುದರ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಈ ಬಗ್ಗೆ ಏನೇನೋ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತದೆ.

ಸದ್ಯ ಫೇಸ್ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಂ, ಕೂ ನಂತರ ಥ್ರೆಡ್ಸ್ ಸೋಶಿಯಲ್ ಮೀಡಿಯಾ ಪ್ರಪಂಚಕ್ಕೆ ಎಂಟ್ರಿ ಕೊಟ್ಟಿದೆ. ಈಗಾಗಲೇ ಕೆಲ ಸೆಲೆಬ್ರೆಟಿಗಳು ಥ್ರೆಡ್ಸ್ ಅಕೌಂಟ್ ಕ್ರಿಯೇಟ್ ಮಾಡಿದ್ದಾರೆ. ಅದೇ ರೀತಿ ಕರಣ್ ಜೋಹರ್ ಕೂಡ ಅದಕ್ಕೆ ಎಂಟ್ರಿ ಕೊಟ್ಟಿದ್ದು ಅಭಿಮಾನಿಗಳ ಜೊತೆ ಚಾಟ್ ಮಾಡಿದ್ದಾರೆ. 10 ನಿಮಿಷಗಳ ಸಮಯ. ಏನಾದರೂ ಪ್ರಶ್ನೆ ಕೇಳಿ ಉತ್ತರಿಸುತ್ತೇನೆ ಎಂದಿದ್ದಾರೆ.
ನೆಟ್ಟಿಗನೊಬ್ಬ ಏಕಾಏಕಿ "ನೀವು ಸಲಿಂಗ ಕಾಮಿ ಅಲ್ವೇ? ಎಂದು ಬಹಿರಂಗವಾಗಿ ಕೇಳಿಬಿಟ್ಟಿದ್ದಾನೆ. ಅದಕ್ಕೆ ಕರಣ್ ಜೋಹರ್ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. "ನಿಮಗೆ ಆಸಕ್ತಿ ಇದೆಯೇ?" ಎಂದು ಆ ನೆಟ್ಟಿಗನಿಗೆ ಕರಣ್ ಮರುಪ್ರಶ್ನೆ ಹಾಕಿದ್ದಾರೆ. ಸದ್ಯ ಈ ಪ್ರಶ್ನೆಗೆ ಕರಣ್ ನೀಡಿರುವ ಉತ್ತರ ಅಚ್ಚರಿ ಮೂಡಿಸಿದೆ. ಅವರು ತಾವು ಸಲಿಂಗ ಕಾಮಿ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಈ ಪ್ರಶ್ನೋತ್ತರದ ಸ್ಕ್ರೀನ್ ಶಾಟ್ ವೈರಲ್ ಆಗ್ತಿದೆ.
ಕರಣ್ ಜೋಹರ್ ಸದ್ಯ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರಕ್ಕೆ ಆಖ್ಷನ್ ಕಟ್ ಹೇಳುತ್ತಿದ್ದಾರೆ. ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಲೀಡ್ ರೋಲ್‌ಗಳಲ್ಲಿ ನಟಿಸ್ತಿದ್ದು ಜುಲೈ 28ರಂದು ಸಿನಿಮಾ ತೆರೆಗೆ ಬರಲಿದೆ. ಇನ್ನುಳಿದಂತೆ 'ಯೋಧ', 'ಸಿಂಗಂ ಅಗೇನ್', 'ಬೇದಾದಕ್' ಸೇರಿದಂತೆ ಒಂದಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರಕ್ಕೂ ಕರಣ್ ಬಮಡವಾಳ ಹೂಡಿದ್ದಾರೆ.


Click it and Unblock the Notifications











