twitter
    For Quick Alerts
    ALLOW NOTIFICATIONS  
    For Daily Alerts

    ಕರಣ್ ಜೋಹರ್ ರಿಜೆಕ್ಟ್ ಮಾಡಿದ್ದ ಹುಡುಗ, ಈಗ ಸ್ಟಾರ್

    |

    ''ನಿನ್ನ ಮುಖ ಕ್ಯಾಮರಾಗೆ ಸೂಟ್ ಆಗಲ್ಲ'' ಈ ರೀತಿಯ ಮಾತು ಕೇಳಿಸಿಕೊಂಡ ಹುಡುಗ ಮುಂದೆ ತನ್ನ ನಟನೆಗಾಗಿಯೇ ರಾಷ್ಟ್ರ ಪ್ರಶಸ್ತಿಯನ್ನು ಪಡೆಯುತ್ತಾನೆ. ಆ ನಟನೇ ಆಯುಷ್ಮಾನ್ ಕುರಾನ್.

    ನಟ ಆಯುಷ್ಮಾನ್ ಕುರಾನ್ ಬಾಲಿವುಡ್ ಚಿತ್ರರಂಗದಲ್ಲಿ ತನ್ನದೆ ಶೈಲಿಯ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದಾರೆ. 'ದಮ್ ಲಗಾ ಕೆ ಹೈಶಾ', 'ಬದೈ ಹೋ', 'ಅಂಧಾದುನ್', 'ಆರ್ಟಿಕಲ್ 15', 'ಬಾಲ' ಹೀಗೆ ಒಂದರ ಮೇಲೆ ಒಂದು ಒಳ್ಳೆಯ ಸಿನಿಮಾಗಳನ್ನು ನೀಡುತ್ತಿದ್ದಾರೆ.

    ಭಿನ್ನ ಹಾದಿಯಲ್ಲಿ ಸಾಗುತ್ತಾ ಹೊಸ ಬಗೆಯ ಬಾಲಿವುಡ್ ಕಟ್ಟುತ್ತಿದ್ದಾರೆ 3 ಯುವರಾಜರುಭಿನ್ನ ಹಾದಿಯಲ್ಲಿ ಸಾಗುತ್ತಾ ಹೊಸ ಬಗೆಯ ಬಾಲಿವುಡ್ ಕಟ್ಟುತ್ತಿದ್ದಾರೆ 3 ಯುವರಾಜರು

    ಆಯುಷ್ಮಾನ್ ಕುರಾನ್ ಹಿಂದಿ ಚಿತ್ರರಂಗದಲ್ಲಿ ಸದ್ಯ ಸಂಚಲನ ಉಂಟು ಮಾಡಿದ್ದಾರೆ. ಅವರ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಹಣ ಮಾಡುವುದರ ಜೊತೆಗೆ ಒಳ್ಳೆಯ ವಿಷಯಗಳನ್ನು ಹೊಂದಿದೆ. ಪ್ರೇಕ್ಷಕ, ವಿಮರ್ಶಕ ಇಬ್ಬರಿಗೂ ಸಲ್ಲುವ ಸಿನಿಮಾ ಅವರ ಕಡೆಯಿಂದ ಬರುತ್ತಿದೆ. 'ಅಂಧಾದುನ್' ಆಯುಷ್ಮಾನ್ ಕುರಾನ್ ನಟನ ಸಾಮರ್ಥ್ಯವನ್ನು ಸಾಬೀತು ಮಾಡಿದೆ.

    ಈಗ ಆಯುಷ್ಮಾನ್ ನಟನೆ ನೋಡಿದವರು 'ವಾಟ್ ಎ ಆಕ್ಟರ್' ಎನ್ನುತ್ತಾರೆ. ಆದರೆ, ಇಂತಹ ಪ್ರತಿಭಾವಂತ ನಟ ಕೂಡ ಒಂದು ಸಮಯದಲ್ಲಿ ರಿಜೆಕ್ಟ್ ಆಗಿದ್ದರು. ಕ್ಯಾಮರಾ ಮುಂದೆ ನಿಲ್ಲಲು ಯೋಗ್ಯತೆ ಇಲ್ಲ ಎನ್ನುವ ಮಾತನ್ನು ಕೇಳಿದ್ದರು.

    ಸಿನಿಮಾಗೆ ಹೋಗುವ ದಾರಿ ತಿಳಿದಿರಲಿಲ್ಲ

    ಸಿನಿಮಾಗೆ ಹೋಗುವ ದಾರಿ ತಿಳಿದಿರಲಿಲ್ಲ

    ನಿಶಾಂತ್ ಕುರಾನ್, ಆಯುಷ್ಮಾನ್ ಕುರಾನ್ ಮೊದಲ ಹೆಸರು. ಚಂಡೀಗಡದ ಈ ಹುಡುಗನಿಗೆ ಚಿಕ್ಕವಯಸ್ಸಿನಿಂದ ನಟನೆ ಬಗ್ಗೆ ಆಸಕ್ತಿ ಇತ್ತು. ಅವರ ಅಜ್ಜಿ ದೇವನಂದ್ ಹಾಗೂ ರಾಜ್ ಕಪೂರ್ ರೀತಿ ಆಕ್ಟ್ ಮಾಡಿ ನಗಿಸುತ್ತಿದ್ದರು. ಹೆಚ್ಚು ಹೆಚ್ಚು ಸಿನಿಮಾಗಳನ್ನು ನೋಡುತ್ತಾ ಆಯುಷ್ಮಾನ್ ನಟನೆ ಬಗ್ಗೆ ಗಮನ ಹರಿಸಿದರು. ಆದರೆ, ಸಿನಿಮಾ ಹೋಗುವ ದಾರಿ ತಿಳಿದಿರಲಿಲ್ಲ.

    ದೇಹ, ರೂಪ, ತೂಕದ ಬಗ್ಗೆ ಬೇಸರ

    ದೇಹ, ರೂಪ, ತೂಕದ ಬಗ್ಗೆ ಬೇಸರ

    ಆಯುಷ್ಮಾನ್ ಆಗ ನಾನು ನೋಡಲು ಅಷ್ಟೊಂದು ಚೆನ್ನಾಗಿ ಇಲ್ಲ ಎನ್ನುವ ಭಾವನೆ ಹೊಂದಿದ್ದರು. ತಮ್ಮ ದೇಹ, ರೂಪ, ತೂಕದ ಮೇಲೆ ಅವರಿಗೆ ಬೇಸರ ಇತ್ತು. ನಾನು ಹೀರೋ ಆಗಲು ಸಾಧ್ಯವಿಲ್ಲ ಎಂದುಕೊಂಡಿದ್ದರು. ಆದರೆ, ತದನಂತರ 'ಪಾಪ್ ಸ್ಟಾರ್' ರಿಯಾಲಿಟಿ ಶೋದಲ್ಲಿ ತಮ್ಮ ಗಾಯನದಿಂದ ಆಯ್ಕೆ ಆದರು.

    ಪಾತ್ರಕ್ಕಾಗಿ ಪೂರ ಬದಲಾದರು ನಟ ಆಯುಷ್ಮಾನ್ ಕುರಾನ್ಪಾತ್ರಕ್ಕಾಗಿ ಪೂರ ಬದಲಾದರು ನಟ ಆಯುಷ್ಮಾನ್ ಕುರಾನ್

    ರಿಜೆಕ್ಟ್ ಮಾಡಿದ ಕರಣ್ ಜೋಹರ್

    ರಿಜೆಕ್ಟ್ ಮಾಡಿದ ಕರಣ್ ಜೋಹರ್

    ಕರಣ್ ಜೋಹರ್ ಹೊಸ ಹೊಸ ಟ್ಯಾಲೆಂಟ್ ಗಳನ್ನು ಲಾಂಚ್ ಮಾಡುವುದರಲ್ಲಿ ಎತ್ತಿದ ಕೈ. ಹೀಗಾಗಿ ಕರಣ್ ರನ್ನು ಸಂಪರ್ಕ ಮಾಡಲು ಆಯುಷ್ಮಾನ್ ಪ್ರಯತ್ನ ಮಾಡಿದರು. ನಟನೆಯ ಅನುಭವ ಪಡೆದ ಮೇಲೆ ಒಂದೆರಡು ಬಾರಿ ಕರೆ ಮಾಡಿದಾಗ 'ನಾನು ಹೀರೋಗಳ ಜೊತೆಯಷ್ಟೇ ಸಿನಿಮಾ ಮಾಡುವುದು' ಎಂದು ರಿಜೆಕ್ಟ್ ಮಾಡಿದರಂತೆ. ಮತ್ತೊಬ್ಬ ನಿರ್ದೇಶಕ 'ಕ್ಯಾಮರಾಗೆ ನಿಮ್ಮ ಮುಖ ಸೂಟ್ ಆಗಲ್ಲ' ಎಂದು ಅವಮಾನ ಮಾಡಿದರಂತೆ. ಇವುಗಳ ಜೊತೆ ಕಾಸ್ಟಿಂಗ್ ಕೌಚ್ ಸಮಸ್ಯೆ ಕೂಡ ಬಂತಂತೆ.

    ರಿಯಾಲಿಟಿ ಶೋಗಳಲ್ಲಿ ನಿರೂಪಕ

    ರಿಯಾಲಿಟಿ ಶೋಗಳಲ್ಲಿ ನಿರೂಪಕ

    ಆ ನಂತರ ಆಯುಷ್ಮಾನ್ ಧಾರಾವಾಹಿಗಳಲ್ಲಿ ನಟಿಸಿದರು. ರೇಡಿಯೋ ಜಾಕಿಯಾಗಿ ಕೆಲಸ ಮಾಡಿದರು. ಇಂಡಿಯಾ ಗಾಟ್ ಟ್ಯಾಲೆಂಟ್, ಜಸ್ಟ್ ಡ್ಯಾನ್ಸ್ ಕಾರ್ಯಕ್ರಮಗಳಲ್ಲಿ ನಿರೂಪಕರಾದರು. ಎಮ್ ಟಿವಿ ಯಲ್ಲಿ ಬರುವ ರೋಡೀಸ್ ಸೀಸನ್ 2 ವಿನ್ನರ್ ಆದರು. ಆ ಬಳಿಕ ಅವರ ಅದೃಷ್ಟ ಬದಲಾಯಿತು. 'ವಿಕ್ಕಿ ಡೋನರ್' ಸಿನಿಮಾ ಮೂಲಕ ಹೀರೋ ಆಗಿ ಲಾಂಚ್ ಆದರು. ಮೊದಲ ಸಿನಿಮಾದ ನಟನೆಗೆಯೇ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು.

    ರಾಷ್ಟ್ರ ಪ್ರಶಸ್ತಿ ಪಡೆದ ಆಯುಷ್ಮಾನ್

    ರಾಷ್ಟ್ರ ಪ್ರಶಸ್ತಿ ಪಡೆದ ಆಯುಷ್ಮಾನ್

    ಇತ್ತೀಚಿಗೆ ಬರುತ್ತಿರುವ ಸಿನಿಮಾಗಳು, ಆಯುಷ್ಮಾನ್ ರನ್ನು ದೊಡ್ಡ ಮಟ್ಟಕ್ಕೆ ಕರೆದುಕೊಂಡು ಹೋಗಿದೆ. 'ಅಂಧಾದುನ್', 'ಆರ್ಟಿಕಲ್ 15' ಚಿತ್ರಗಳ ಪಾತ್ರ ನಿರ್ವಹಣೆ ದೊಡ್ಡ ಹೆಸರು ತಂದು ಕೊಟ್ಟಿದೆ. 'ದಮ್ ಲಗಾ ಕೆ ಹೈಶಾ', 'ಬದೈ ಹೋ' ರೀತಿಯ ಸಿನಿಮಾಗಳ ಆಯ್ಕೆ ನಿಜಕ್ಕೂ ಮೆಚ್ಚುವಂತದ್ದು. ತಮ್ಮ ನಟನ ಶಕ್ತಿಯಿಂದ ಈ ಬಾರಿ ಆಯುಷ್ಮಾನ್ ಕುರಾನ್ ರಾಷ್ಟ್ರ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. ಎದ್ದು, ಬಿದ್ದ, ಕಷ್ಟಗಳ ನಡುವೆ ಸಾಗಿರುವ ಆಯುಷ್ಮಾನ್ ಸಿನಿ ಜರ್ಸಿ ಸ್ಫೂರ್ತಿದಾಯಕ.

    English summary
    Director Karan Johar had once rejected actor Ayushmann Khurrana.
    Tuesday, November 5, 2019, 15:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X