ನೆಪೋಟಿಸಂ ಆರೋಪ: ಜಾಹ್ನವಿ ಕಪೂರ್ ಸಿನಿಮಾದ ಟ್ರೈಲರ್ ನಲ್ಲಿಲ್ಲ ಕರಣ್ ಜೋಹರ್ ಹೆಸರು

By ಫಿಲ್ಮ್ ಡೆಸ್ಕ್

ಬಾಲಿವುಡ್ ನಲ್ಲಿ ನೆಪೋಟಿಸಂ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ ನ ಕರಾಳ ಮುಖ ಬಹಿರಂಗವಾಗಿದೆ. ಬಾಲಿವುಡ್ ನ ಪ್ರಭಾವಿ ವ್ಯಕ್ತಿಗಳ ವಿರುದ್ಧ ನೆಪೋಟಿಸಂ ಆರೋಪ ಕೇಳಿ ಬರುತ್ತಿದೆ. ಅದರಲ್ಲೂ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್, ಮಹೇಶ್ ಭಟ್, ಆದಿತ್ಯ ಚೋಪ್ರಾ ಸೇರಿದ್ದಂತೆ ಸಾಕಷ್ಟು ಮಂದಿಯ ವಿರುದ್ಧ ಸ್ವಜನಪಕ್ಷಪಾತದ ಆರೋಪ ಕೇಳಿಬರುತ್ತಿದೆ.

Recommended Video

ಇನ್ಮುಂದೆ ಸೇನೆಯ ಬಗ್ಗೆ ಸಿನಿಮಾ ಮಾಡೋದು ಅಷ್ಟು ಸುಲಭ ಇಲ್ಲ | Filmibeat Kannada

ಅದರಲ್ಲೂ ಕರಣ್ ಜೋಹರ್ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಕರಣ್ ಅವರನ್ನು ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಈ ನಡುವೆ ಕರಣ್ ನಿರ್ಮಾಣದ ಗುಂಜನ್ ಸಕ್ಸೇನಾ- ದಿ ಕಾರ್ಗಿಲ್ ಗರ್ಲ್ ಸಿನಿಮಾ ರಿಲೀಸ್ ಆಗುತ್ತಿದೆ. ಈಗಾಗಲೆ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಆದರೆ ಸಿನಿಮಾದ ಟ್ರೈಲರ್ ನಲ್ಲಿ ಅಥಾವ ಪೋಸ್ಟರ್ ನಲ್ಲಿ ಕರಣ್ ಜೋಹರ್ ಹೆಸರೇ ಇಲ್ಲ. ಕಾರಣ ಏನು ಅಂದರೆ ನೆಪೋಟಿಸಂ ಎಂದು ಹೇಳಲಾಗುತ್ತಿದೆ. ಮುಂದೆ ಓದಿ...

ಗುಂಜನ್ ಸಕ್ಸೇನಾ ಸಿನಿಮಾದಲ್ಲಿಲ್ಲ ಕರಣ್ ಹೆಸರು

ಗುಂಜನ್ ಸಕ್ಸೇನಾ ಸಿನಿಮಾದಲ್ಲಿಲ್ಲ ಕರಣ್ ಹೆಸರು

ಬಾಲಿವುಡ್ ನಲ್ಲಿ ಹಲವು ಸ್ಟಾರ್ ಮಕ್ಕಳನ್ನು ಪರಿಚಯಿಸಿದ್ದೆ ಕರಣ್ ಜೋಹರ್. ಆದರೀಗ ಕರಣ್ ಗೆ ಅದೆ ಮುಳುವಾಗಿದೆ. ಕೇವಲ ಸ್ಟಾರ್ ಮಕ್ಕಳನ್ನೇ ಪರಿಚಯಿಸುತ್ತಿದ್ದಾರೆ, ಹೊರಗಿನಿಂದ ಬಂದವರನ್ನು ತುಳಿಯುತ್ತಿದ್ದಾರೆ ಎನ್ನುವ ಆರೋಪ ಕರಣ್ ವಿರುದ್ಧ ಕೇಳಿ ಬರುತ್ತಿದೆ. ಹಾಗಾಗಿ ಗುಂಜನ್ ಸಕ್ಸೇನಾ ಸಿನಿಮಾದಲ್ಲಿ ಕರಣ್ ಹೆಸರು ಕಾಣಿಸಿಕೊಂಡಿರೆ ಮತ್ತೆ ಸಮಸ್ಯೆಯಾಗಬಹುದು ಎನ್ನುವ ಕಾರಣಕ್ಕೆ ಸಿನಿಮಾಲ್ಲಿ ಕರಣ್ ಹೆಸರನ್ನುತೆಗೆದುಹಾಕಿದ್ದಾರೆ. ನೆಪೋಟಿಸಂ ಚರ್ಚೆ ಪ್ರಾರಂಭವಾಗುವ ಮೊದಲು ರಿಲೀಸ್ ಆದ ಪೋಸ್ಟರ್ ನಲ್ಲಿ ಧರ್ಮ ಪ್ರೊಡಕ್ಷನ್ ಹೆಸರಿದೆ. ಆದರೀಗ ರಿಲೀಸ್ ಆದ ಆದ ಪೋಸ್ಟರ್ ನಲ್ಲಿ ಕರಣ್ ಹೆಸರು ಮಿಸ್ ಆಗಿದೆ.

ಕರಣ್ ಹೆಸರಿದ್ದರೆ ಸಿನಿಮಾ ನೋಡುವುದೇ ಅನುಮಾನ

ಕರಣ್ ಹೆಸರಿದ್ದರೆ ಸಿನಿಮಾ ನೋಡುವುದೇ ಅನುಮಾನ

ಕರಣ್ ಹೆಸರಿದ್ದರೆ ವೀಕ್ಷಕರು ಸಿನಿಮಾ ನೋಡದೆ ಬ್ಯಾನ್ ಮಾಡುವ ಸಾಧ್ಯತೆ ಇದೆ. ಕರಣ್ ಹೆಸರು ಕೇಳಿದರೆ ಸಾಕು ಸಿಡಿದುಬೀಳುತ್ತಿರುವ ಈ ಸಮಯದಲ್ಲಿ, ಇನ್ನೂ ಕರಣ್ ಸಿನಿಮಾ ಬರ್ತಿದೆ ಅಂದರೆ ಸುಮ್ಮನಿರಲು ಸಾಧ್ಯವೆ ಇಲ್ಲ. ಹಾಗಾಗಿ ಸಿನಿಮಾದಿಂದ ಕರಣ್ ಹೆಸರನ್ನು ತೆಗೆಯುವುದೆ ಉತ್ತಮ ಎಂದು ನಿರ್ಧರಿಸಿ ನಿರ್ಮಾಣ ಸಂಸ್ಥೆಯ ಹೆಸರನ್ನು ತೆಗೆದುಹಾಕಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ನಿರ್ದೇಶಕರ ಹೆಸರು ಇಲ್ಲ

ನಿರ್ದೇಶಕರ ಹೆಸರು ಇಲ್ಲ

ಕರಣ್ ನಿರ್ಮಾಣದ ಧರ್ಮ ಪ್ರೊಡಕ್ಷನ್ ಹೆಸರು ಮಾತ್ರವಲ್ಲದೆ ನಿರ್ದೇಶಕ ಶರಣ್ ಶರ್ಮಾ ಹೆಸರನ್ನು ತೆಗೆಯಲಾಗಿದೆ. ಕರಣ್ ಹೆಸರು ಮಾತ್ರ ತೆಗೆದರೆ ಮತ್ತೆ ಪ್ರಶ್ನೆ ಎದುರಾಗಬಹುದು ಎನ್ನುವ ಕಾರಣ ನಿರ್ದೇಶಕರ ಹೆಸರನ್ನು ಕೈಬಿಡಲಾಗಿದೆ. ಸದ್ಯ ಕೇವಲ ನಾಯಕಿ ಜಾಹ್ನವಿ ಹೆಸರನ್ನು ಮುಂದಿಟ್ಟುಕೊಂಡು ಸಿನಿಮಾ ರಿಲೀಸ್ ಮಾಡಲಾಗತ್ತಿದೆ.

ಇದೇ ತಿಂಗಳು ಸಿನಿಮಾ ರಿಲೀಸ್

ಇದೇ ತಿಂಗಳು ಸಿನಿಮಾ ರಿಲೀಸ್

ಗಂಜನ್ ಸಕ್ಸೇನಾ ಸಿನಿಮಾ ಅಂದುಕೊಂಡಂತೆ ಆಗಿದ್ದಾರೆ ಈಗಾಗಲೆ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಲಾಕ್ ಡೌನ್ ಹಿನ್ನಲೆ ಸಿನಿಮಾ ಮುಂದಕ್ಕೆ ಹೋಗಿದೆ. ಅಲ್ಲದೆ ಚಿತ್ರರಂದಿರದ ಬದಲಿಗೆ ಸಿನಿಮಾ ನೆಟ್ ಫ್ಲಿಕ್ಸ್ ನಲ್ಲಿ ಇದೆ ತಿಂಗಳು ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿದೆ.

More from Filmibeat

English summary
Karan Johar name missing from Janhvi Kapoor starrer Gunjan Saxena trailer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X