twitter
    For Quick Alerts
    ALLOW NOTIFICATIONS  
    For Daily Alerts

    ಸಂಭಾವನೆ ತಾರತಮ್ಯ: ನಟಿಯರಿಗೆ ಕರಣ್ ಜೋಹರ್ ಗುಡ್ ನ್ಯೂಸ್

    |

    ಚಿತ್ರರಂಗದಲ್ಲಿ ಸಂಭಾವನೆ ತಾರತಮ್ಯದ ವಿರುದ್ಧ ಆಗಾಗ ನಟಿಯರು ಕೂಗು ಕೇಳುತ್ತದೆ. ನಟರಿಗಿಂತ ನಟಿಯರಿಗೆ ಕಡಿಮೆ ಸಂಭಾವನೆ ಯಾಕೆ ಎನ್ನುವ ಪ್ರಶ್ನೆ ಈಗಾಗಲೇ ಸಾಕಷ್ಟು ಬಾರಿ ಎದ್ದಿದೆ. ಕನ್ನಡದ ಅನೇಕ ನಟಿಯರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ಇದುವರೆಗೆ ಈ ಬಗ್ಗೆ ಯಾವ ನಿರ್ಮಾಣ ಸಂಸ್ಥೆ ಕೂಡ ನಿರ್ಧಾರ ತೆಗೆದುಕೊಂಡಿರಲಿಲ್ಲ.

    ಇದೀಗ ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಸಂಭಾವನೆ ತಾರತಮ್ಯದ ಬಗ್ಗೆ ಹೊಸ ಪ್ಲಾನ್ ಮಾಡಿದ್ದಾರೆ. ನಟರ ರೀತಿ ನಟಿಯರಿಗೂ ಸಿನಿಮಾದ ಗಳಿಕೆಯಲ್ಲಿ ಪಾಲು ನೀಡಲು ಮುಂದೆ ಬಂದಿದ್ದಾರೆ. ಅಕ್ಷಯ್ ಕುಮಾರ್ ನಟನೆಯ 'ಗುಡ್ ನ್ಯೂಜ್' ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಕರಣ್ ಜೋಹರ್ ಭಾಗಿಯಾಗಿದ್ದು, ಇಲ್ಲಿಯೇ ಗುಡ್ ನ್ಯೂಸ್ ಹೇಳಿದ್ದಾರೆ.

    ಸಂಭಾವನೆ ತಾರತಮ್ಯದ ಬಗ್ಗೆ ಮಾತನಾಡಿದ ಶೃತಿ ಹರಿಹರನ್ಸಂಭಾವನೆ ತಾರತಮ್ಯದ ಬಗ್ಗೆ ಮಾತನಾಡಿದ ಶೃತಿ ಹರಿಹರನ್

    ಕರಣ್ ಜೋಹರ್ ಈ ನಿರ್ಧಾರವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಸಂಭಾವನೆ ತಾರತಮ್ಯ ಬೇಡ ಎನ್ನುವ ನಟಿಯರ ಆಸೆಯನ್ನು ಈಡೇರಿಸುವ ಕಡೆಗೆ ಕರಣ್ ಒಂದು ಹೆಜ್ಜೆ ಇಟ್ಟಿದ್ದಾರೆ.

    ಸ್ಟಾರ್ ನಟರಿಗೆ ಸಿಗುತ್ತಿದೆ ಲಾಭದಲ್ಲಿ ಭಾಗ

    ಸ್ಟಾರ್ ನಟರಿಗೆ ಸಿಗುತ್ತಿದೆ ಲಾಭದಲ್ಲಿ ಭಾಗ

    ಬಾಲಿವುಡ್ ನಿಂದ ಸ್ಯಾಂಡಲ್ ವುಡ್ ವರೆಗೆ ಸ್ಟಾರ್ ನಟರಿಗೆ ಸಿನಿಮಾದ ಲಾಭದಲ್ಲಿ ಭಾಗ ಸಿಗುತ್ತಿದೆ. ದೊಡ್ಡ ಮಟ್ಟದ ಸಂಭಾವನೆ ಹೊಂದಿದ ನಟರು, ತಮ್ಮ ಸಂಭಾವನೆ ಬದಲಿಗೆ ಸಿನಿಮಾದ ಲಾಭದಲ್ಲಿ ಒಂದಷ್ಟು ಭಾಗ ಪಡೆಯುತ್ತಾರೆ. ಇದು ನಿರ್ಮಾಣ ಸಂಸ್ಥೆ ಮತ್ತು ನಟರ ನಡುವೆ ನಡೆಯುವ ಒಪ್ಪಂದ. ಉದಾಹರಣೆಗೆ ಅಮೀರ್ ಖಾನ್ 'ದಂಗಲ್' ಸಿನಿಮಾಗೆ 175 ಕೋಟಿ (ಲಾಭದಲ್ಲಿ ಪಾಲು) ಸಂಭಾವನೆಯಾಗಿ ಪಡೆದಿದ್ದರು.

    ನಟಿಯರಿಗೂ ಲಾಭದ ಹಣ ನೀಡುತ್ತೇನೆ ಎಂದ ಕರಣ್

    ನಟಿಯರಿಗೂ ಲಾಭದ ಹಣ ನೀಡುತ್ತೇನೆ ಎಂದ ಕರಣ್

    ಚಿತ್ರರಂಗದಲ್ಲಿ ಅದರಲ್ಲಿಯೂ ಹಿಂದಿಯಲ್ಲಿ ಸಾಕಷ್ಟು ಮಹಿಳಾ ಪ್ರಧಾನ ಸಿನಿಮಾಗಳು ಬರುತ್ತವೆ. ಒಬ್ಬ ಸ್ಟಾರ್ ನಟ ಒಂದು ಪಾತ್ರಕ್ಕೆ, ಒಂದು ಸಿನಿಮಾಗೆ ಹೇಗೆ ಕಷ್ಟ ಪಡುತ್ತಾನೋ, ಅಷ್ಟೇ ಕಷ್ಟವನ್ನು ನಟಿಯರು ಕೂಡ ಪಡುತ್ತಾರೆ. ಹೀಗಾಗಿ ಇನ್ನು ಮುಂದೆ ಮಹಿಳಾ ಪ್ರಧಾನ ಸಿನಿಮಾ ಮಾಡುವಾಗ ನಟಿಯರಿಗೂ ಲಾಭದಲ್ಲಿ ಭಾಗ ನೀಡುತ್ತೇನೆ ಎಂದು ಕರಣ್ ಜೋಹರ್ ತಿಳಿಸಿದ್ದಾರೆ.

    ಸಿನಿಮಾ ಗೆದ್ರೂ ನಟಿಯರಿಗೇನು ಉಪಯೋಗ ಇಲ್ಲ ಎಂದ ಪ್ರಿಯಾಮಣಿಸಿನಿಮಾ ಗೆದ್ರೂ ನಟಿಯರಿಗೇನು ಉಪಯೋಗ ಇಲ್ಲ ಎಂದ ಪ್ರಿಯಾಮಣಿ

    ಸಂಭಾವನೆ ಮಾತ್ರ ನಟಿಯರ ಕೈ ಸೇರುತ್ತಿತ್ತು

    ಸಂಭಾವನೆ ಮಾತ್ರ ನಟಿಯರ ಕೈ ಸೇರುತ್ತಿತ್ತು

    ಇದುವರೆಗೆ ಸ್ಟಾರ್ ನಟರಿಗೆ ಇದ್ದ ಹಾಗೆ, ಲಾಭದಲ್ಲಿ ಭಾಗ ನೀಡುವ ಅವಕಾಶ ನಟಿಯರಿಗೆ ಇರುತ್ತಿರಲಿಲ್ಲ. ಒಂದು ಸಿನಿಮಾದ ಒಂದಷ್ಟು ಸಂಭಾವನೆ ಫಿಕ್ಸ್ ಆದ್ರೆ, ಅಷ್ಟು ಮಾತ್ರ ಅವರ ಕೈ ಸೇರುತ್ತಿತ್ತು. ಬಾಲಿವುಡ್ ನಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ಕೂಡ ನೂರು, ಇನ್ನೂರು ಕೋಟಿ ಹಣ ಮಾಡುತ್ತವೆ. ಆದರೂ, ನಟಿಯರಿಗೆ ಲಾಭದಲ್ಲಿ ಭಾಗ ನೀಡುತ್ತಿರಲಿಲ್ಲ.

    ಇದು ಒಳ್ಳೆಯ ಬೆಳವಣಿಗೆ

    ಇದು ಒಳ್ಳೆಯ ಬೆಳವಣಿಗೆ

    ನಟಿಯರ ದೃಷ್ಟಿಯಿಂದ ಇದು ಒಂದು ರೀತಿಯಲ್ಲಿ ಸಹಾಯ ಮಾಡಿದರೆ, ಮತ್ತೊಂದು ಕಡೆ ನಿರ್ಮಾಣ ಸಂಸ್ಥೆ ಹಾಗೂ ನಿರ್ದೇಶಕರ ದೃಷ್ಟಿಯಿಂದ ಕೂಡ ಈ ನಿಯಮ ಒಳ್ಳೆಯದು. ಅನೇಕ ಸ್ಟಾರ್ ಗಳು ಒಂದು ಸಿನಿಮಾಗೆ ಸಂಭಾವನೆ ಪಡೆದ ನಂತರ, ತಮ್ಮ ಕೆಲಸ ಮುಗಿಯಿತು ಎಂದು ಮನೆಗೆ ಹೋಗುತ್ತಾರೆ. ಆದರೆ, ಲಾಭದಲ್ಲಿ ಭಾಗ ಎನ್ನುವ ನಿಯಮ ಇದ್ದಾಗ, ಆ ಸಿನಿಮಾದ ಗೆಲುವಿನ ಬಗ್ಗೆ ಇನ್ನಷ್ಟು ಗಮನ ನೀಡುತ್ತಾರೆ.

    English summary
    Bollywood Producer Karan Johar new policy for remuneration discrimination.
    Tuesday, November 19, 2019, 11:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X