For Quick Alerts
  ALLOW NOTIFICATIONS  
  For Daily Alerts

  ತೆರೆಮೇಲೆ ಬರಲಿದೆ 'ದಾದಾ' ಸೌರವ್ ಗಂಗೂಲಿ ಬಯೋಪಿಕ್!

  |

  ಬಾಲಿವುಡ್ ಇಂಡಸ್ಟ್ರಿಯಲ್ಲಿ ಕ್ರಿಕೆಟ್ ಆಟಗಾರರ ಬಯೋಪಿಕ್ ಚಿತ್ರಗಳು ಹೆಚ್ಚಾಗುತ್ತಿದೆ. ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ಮೊಹಮ್ಮದ್ ಅಜರುದ್ದಿನ್ ಅಂತವರು ಬಯೋಪಿಕ್ ಬಳಿಕ 1983 ವಿಶ್ವಕಪ್ ಕುರಿತು ಸಿನಿಮಾ ಬರ್ತಿದೆ.

  '83' ಹೆಸರಿನಲ್ಲಿ ಸಿನಿಮಾ ತಯಾರಾಗಿದ್ದು, ರಣ್ವೀರ್ ಸಿಂಗ್ ತೆರೆಮೇಲೆ ಕಪಿಲ್ ದೇವ್ ಆಗಿ ನಟಿಸಿದ್ದಾರೆ. ಏಪ್ರಿಲ್ 10 ರಂದು ಈ ಚಿತ್ರ ಬಿಡುಗಡೆಯಾಗುತ್ತಿದೆ. ಇದೀಗ, ಭಾರತ ಕ್ರಿಕೆಟ್ ತಂಡ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಬಯೋಪಿಕ್ ಮೂಡಿ ಬರಲಿದೆ ಎಂಬ ವಿಷಯ ಹೊರಬಿದ್ದಿದೆ. ಮುಂದೆ ಓದಿ....

  ಕರಣ್ ಜೋಹರ್ ಪ್ಲಾನ್

  ಕರಣ್ ಜೋಹರ್ ಪ್ಲಾನ್

  ಪ್ರಸ್ತುತ ಬಿಸಿಸಿಐ (ಭಾರತೀಯ ಕ್ರಿಕೆಟ್ ಮಂಡಳಿ) ಅಧ್ಯಕ್ಷ ಸೌರವ್ ಗಂಗೂಲಿ ಅವರ ಜೀವನಕಥೆಯನ್ನು ತೆರೆಮೇಲೆ ತರಲು ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಸಜ್ಜಾಗಿದ್ದಾರೆ. ಈ ಕುರಿತು ಗಂಗೂಲಿ ಅವರನ್ನು ಕರಣ್ ಭೇಟಿ ಮಾಡಿ ಚರ್ಚಿಸಿದ್ದಾರಂತೆ.

  ಬೂಮ್ರಾಗೆ ಬೋಲ್ಡ್ ಆದ 'ಧೋನಿ' ನಾಯಕಿ ದಿಶಾಬೂಮ್ರಾಗೆ ಬೋಲ್ಡ್ ಆದ 'ಧೋನಿ' ನಾಯಕಿ ದಿಶಾ

  ಗಂಗೂಲಿ ಪಾತ್ರದಲ್ಲಿ ಹೃತಿಕ್ ರೋಷನ್

  ಗಂಗೂಲಿ ಪಾತ್ರದಲ್ಲಿ ಹೃತಿಕ್ ರೋಷನ್

  ಸದ್ಯದ ಟಾಕ್ ಪ್ರಕಾರ ಸೌರವ್ ಗಂಗೂಲಿ ಪಾತ್ರಕ್ಕಾಗಿ ಬಿಟೌನ್ ಸ್ಟಾರ್ ನಟನನ್ನು ಕರೆತರುವ ಮಾತುಕತೆ ಆಗುತ್ತಿದೆಯಂತೆ. ಎಲ್ಲ ಅಂದುಕೊಂಡಂತೆ ಆದರೆ ಹೃತಿಕ್ ರೋಷನ್, ತೆರೆಮೇಲೆ ಗಂಗೂಲಿಯಾಗಲಿದ್ದಾರೆ ಎನ್ನಲಾಗುತ್ತಿದೆ.

  ಯುವರಾಜ್ ಸಿಂಗ್ ಬಯೋಪಿಕ್ ಗೆ ತಯಾರಿ: ಯಾರಾಗ್ತಾರೆ 'ಸಿಕ್ಸರ್ ಕಿಂಗ್'?ಯುವರಾಜ್ ಸಿಂಗ್ ಬಯೋಪಿಕ್ ಗೆ ತಯಾರಿ: ಯಾರಾಗ್ತಾರೆ 'ಸಿಕ್ಸರ್ ಕಿಂಗ್'?

  ಯುವರಾಜ್ ಸಿಂಗ್ ಬಯೋಪಿಕ್!

  ಯುವರಾಜ್ ಸಿಂಗ್ ಬಯೋಪಿಕ್!

  ಗಂಗೂಲಿ ಬಯೋಪಿಕ್ ಚಿತ್ರಕ್ಕೂ ಮುಂಚೆ ಭಾರತದ ಮತ್ತೊಬ್ಬ ಸ್ಟಾರ್ ಕ್ರಿಕೆಟರ್ ಯುವರಾಜ್ ಸಿಂಗ್ ಅವರ ಬಯೋಪಿಕ್ ಬರುತ್ತೆ ಎಂಬ ಸುದ್ದಿ ಸದ್ದು ಮಾಡಿತ್ತು. ಈ ಕುರಿತು ಸ್ವತಃ ಯುವರಾಜ್ ಸಿಂಗ್ ಆಸಕ್ತಿ ನೀಡಿದ್ದು ನಂಬಿಕಸ್ಥ ನಿರ್ಮಾಣ ಸಂಸ್ಥೆಯ ಹುಡುಕಾಟದಲ್ಲಿದ್ದಾರಂತೆ.

  'ಶಬಾಷ್ ಮಿಥು' ಫಸ್ಟ್ ಲುಕ್: ಫೋಟೋ ಶೇರ್ ಮಾಡಿ ನಟಿ ತಾಪ್ಸಿ ಹೇಳಿದ್ದೇನು?'ಶಬಾಷ್ ಮಿಥು' ಫಸ್ಟ್ ಲುಕ್: ಫೋಟೋ ಶೇರ್ ಮಾಡಿ ನಟಿ ತಾಪ್ಸಿ ಹೇಳಿದ್ದೇನು?

  ಮಿಥಾಲಿ ರಾಜ್ ಬಯೋಪಿಕ್

  ಮಿಥಾಲಿ ರಾಜ್ ಬಯೋಪಿಕ್

  ಮತ್ತೊಂದೆಡೆ ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಅವರ ಬಯೋಪಿಕ್ ಸಿನಿಮಾ ಆಗುತ್ತಿದೆ. 'ಶಭಾಶ್ ಮಿಥು' ಎಂದು ಚಿತ್ರಕ್ಕೆ ಹೆಸರಿಟ್ಟಿದ್ದು, ಮಿಥಾಲಿ ರಾಜ್ ಪಾತ್ರದಲ್ಲಿ ತಾಪ್ಸಿ ಪನ್ನು ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Bollywood producer Karan Johar planning to do Sourav Ganguly biopic. may be hrithik roshan playing dada role on screen.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X