ನಾವು ಇಬ್ಬರೂ ಯಾರಿಗೆ ಹುಟ್ಟಿದ್ದು..? ಅವಳಿ ಮಕ್ಕಳ ಪ್ರಶ್ನೆಗೆ ಹೈರಾಣಾದ ಕರಣ್ ಜೋಹರ್...!
ಬಾಲಿವುಡ್ ಫೇಮಸ್ ನಿರ್ಮಾಪಕ ಕಮ್ ನಿರ್ದೇಶಕ ಕರಣ್ ಜೋಹರ್ ಬಿ ಟೌನಿನ ಮಂದಿಗಾಗಿ ಪಾರ್ಟಿಗಳನ್ನು ಆಯೋಜಿಸುವುದರಲ್ಲಿ ಎತ್ತಿದ ಕೈ. ಸಿನಿಮಾ ಹಿಟ್ ಆಗಲಿ, ಫ್ಲಾಪ್ ಆಗಲಿ ಅವರು ಪಾರ್ಟಿ ಆಯೋಜನೆ ಮಾಡುತ್ತಲೇ ಇರುತ್ತಾರೆ. ಹೀಗಾಗಿಯೇ ಕರಣ್ ಜೋಹರ್ ಮೇಲೆ ಬಾಲಿವುಡ್‌ನಲ್ಲಿ ಅನೇಕರಿಗೆ ವಿಪರೀತವಾದ ಪ್ರೀತಿ. ಅದರಲ್ಲಿಯೂ ಸ್ಟಾರ್ ಕಿಡ್‌ಗಳಿಗಂತೂ ಕರಣ್ ಜೋಹರ್ ಅಚ್ಚು ಮೆಚ್ಚಿನ ವ್ಯಕ್ತಿ. ಇಷ್ಟೇ ಅಲ್ಲ ಅನೇಕರ ಪಾಲಿನ ಗಾಡ್ ಫಾದರ್ ಕೂಡ ಹೌದು. ಇಂಥಾ ಕರಣ್ ಜೋಹರ್ ಈಗ ಅವರ ಇಬ್ಬರೂ ಮುದ್ದಾದ ಮಕ್ಕಳು ಕೇಳುವ ಪ್ರಶ್ನೆಗಳಿಂದ ಚಿಂತೆಗೀಡಾಗಿದ್ದಾರೆ. ಉತ್ತರಿಸಲಾಗದೇ ಕೌನ್ಸೆಲಿಂಗ್ ಗೆ ಕೂಡ ಹೋಗುತ್ತಿದ್ದಾರೆ.
ಹೌದು, ಅಸಲಿಗೆ.. ಇನ್ನೂ ಮದ್ವೆಯಾಗದ ಕರಣ್ ಜೋಹರ್, 2017ರಲ್ಲಿ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳಿಗೆ ತಂದೆಯಾಗಿದ್ದರು. ಅಲ್ಲಿಂದ ಇಲ್ಲಿವರೆಗೆ ತನ್ನೆರಡು ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತಿರುವ ಕರಣ್ ಜೋಹರ್‌ಗೆ ಈಗ ಅವರ ಮಕ್ಕಳಾದ ಯಶ್ ಮತ್ತು ರೂಹಿ ತಮ್ಮ ತಾಯಿಯ ಬಗ್ಗೆ ಪ್ರಶ್ನೆಯನ್ನು ಕೇಳಲು ಶುರುಮಾಡಿದ್ದಾರೆ. ತಮ್ಮ ಜನ್ಮ ರಹಸ್ಯವನ್ನು ಕೇಳಲು ಪ್ರಾರಂಭಿಸಿದ್ದಾರೆ. ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಖುದ್ದು ಹೇಳಿರುವ ಕರಣ್ ಜೋಹರ್, ಮಕ್ಕಳ ಈ ಪ್ರಶ್ನೆಗಳಿಗೆ ಉತ್ತರಿಸಲು ಅಗತ್ಯ ಮಾರ್ಗದರ್ಶನವನ್ನೂ ತೆಗೆದುಕೊಳ್ಳುವುದು ಅವಶ್ಯಕ ಹೀಗಾಗಿ ನಾನೇ ಈಗ ಕೌನ್ಸೆಲಿಂಗ್‌ಗೆ ಹೋಗುತ್ತಿದ್ದೇನೆ ಎಂದಿದ್ದಾರೆ. ಪೋಷಕರಾಗಿರುವುದು ಎಂದಿಗೂ ಸುಲಭವಲ್ಲ ಎಂದಿದ್ದಾರೆ.

ಮುಂದುವರೆದು ಸಂದರ್ಶನದಲ್ಲಿ ಮಾತನಾಡಿರುವ ಕರಣ್ ಜೋಹರ್, ನಮ್ಮ ಸಮಾಜ ಆಧುನಿಕವಾಗಿದೆ. ಆದರೆ ನಾನು ನನ್ನದೇ ಆದ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ ಎಂದಿದ್ದಾರೆ. ಇದೊಂದು ವಿಚಿತ್ರ ಸನ್ನಿವೇಶ ಎದುರಾಗಿದೆ. ನನ್ನ ಇಬ್ಬರು ಮಕ್ಕಳಿಂದ ನಾನಾ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತಿದೆ ಎಂದಿದ್ದಾರೆ. ನಾವು ಯಾರ ಹೊಟ್ಟೆಯಲ್ಲಿ ಹುಟ್ಟಿದ್ದು ? ನಮ್ಮ ಅಮ್ಮ ಯಾರು ಹೀಗೆ ಕೇಳಲಾಗುವ ಪ್ರಶ್ನೆಗಳಿಗೆ ಯಾವ ರೀತಿಯಲ್ಲಿ ಉತ್ತರಗಳನ್ನು ನೀಡಬೇಕೆಂದು ನನಗೆ ಅರ್ಥವಾಗುತ್ತಿಲ್ಲ ಹೀಗಾಗಿ ನಾನು ಅರ್ಥಮಾಡಿಕೊಳ್ಳಬೇಕಿದೆ ಎಂದಿದ್ದಾರೆ.
ಇನ್ನೂ ನನ್ನ ಮಗ ಸಕ್ಕರೆ ತಿನ್ನುವುದನ್ನು ನೋಡಿದಾಗ, ಅವನು ತೂಕ ಹೆಚ್ಚಾಗುತ್ತಿರುವುದನ್ನು ನೋಡಿದಾಗ ನನಗೆ ಆತಂಕ ಹೆಚ್ಚಾಗುತ್ತೆ ಎಂದಿರುವ ಕರಣ್ ಜೋಹರ್, ಈ ಕಾರಣಕ್ಕೆ ಒಮ್ಮೆ ನಾನು ಅವನ ಮೇಲೆ ತುಂಬಾ ಕೋಪಗೊಂಡಿದ್ದೆಎಂದು ಹೇಳಿದ್ದಾರೆ. ಆದರೆ ಆ ನಂತರ ನಾನು ಅವನಲ್ಲಿ ಕ್ಷಮೆಯಾಚಿಸಿದೆ. ಜೀವನವನ್ನು ಸಂತೃಪ್ತಿಯಿಂದ ಬದುಕಲು ಬಯಸುವ ವಯಸ್ಸು ಇದು. ಅವನು ಸಂತೋಷದಿಂದ ಮತ್ತು ಉತ್ಸಾಹದಿಂದ ಇರಬೇಕೆಂದು ನಾನು ಬಯಸುತ್ತೇನೆ. ನನ್ನ ಜೀವನದಲ್ಲಿ ನಾನು ಮಾಡಲು ಸಾಧ್ಯವಾಗದ ಎಲ್ಲವನ್ನೂ ಮಾಡಲು ನಾನು ಅವನಿಗೆ ಹೇಳುತ್ತೇನೆ ಎಂದಿದ್ದಾರೆ ಕರಣ್ ಜೋಹರ್.

ಅಂದ್ಹಾಗೇ ಕರಣ್ ಜೋಹರ್ ತಮ್ಮ ಇಬ್ಬರೂ ಮಕ್ಕಳ ಜೊತೆ ಅವರ ತಾಯಿ ಹಿರೂ ಜೋಹರ್ ಅವರ ಆರೈಕೆಯನ್ನೂ ಕೂಡ ಮಾಡುತ್ತಿದ್ದಾರೆ. ಕರಣ್ ಜೋಹರ್ ಅವರ ಮಕ್ಕಳಿಬ್ಬರ ಲಾಲನೆ-ಪಾಲನೆಯಲ್ಲಿ 81ರ ಪ್ರಾಯದ ಹಿರೂ ಅವರ ಪಾತ್ರ ತುಂಬಾನೇ ದೊಡ್ಡದು. ಹೀಗಾಗಿಯೇ ನನ್ನ ತಾಯಿ ನನ್ನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಆಕೆಯ ಬೆಂಬಲವಿಲ್ಲದೆ ನಾನು ಎಂದಿಗೂ ಇಂತಹ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹಿಂದೊಮ್ಮೆ ಹೇಳಿದ್ದ ಕರಣ್, ಈ ಸಂದರ್ಶನದಲ್ಲಿ ಕೂಡ ಮೊಮ್ಮಕ್ಕಳ ಮೇಲೆ ತಮ್ಮ ತಾಯಿಗೆ ಇರುವ ಪ್ರೀತಿಯ ಬಗ್ಗೆಯೂ ಮಾತನಾಡಿದ್ದಾರೆ.


Click it and Unblock the Notifications











