For Quick Alerts
  ALLOW NOTIFICATIONS  
  For Daily Alerts

  ಕರಣ್ ಜೋಹರ್ ಪಾರ್ಟಿಯಲ್ಲಿ ರಶ್ಮಿಕಾ-ವಿಜಯ್ ದೇವರಕೊಂಡ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ ಯಾಕೆ?

  |

  ಬಾಲಿವುಡ್‌ನಲ್ಲಿ ಕರಣ್‌ ಜೋಹರ್ ಬರ್ತ್‌ಡೇ ಪಾರ್ಟಿ ಅದ್ಧೂರಿಯಾಗಿ ನಡೆದಿದೆ. ಕರಣ್‌ ಜೋಹರ್ ತನ್ನ 50ನೇ ವರ್ಷದ ಹುಟ್ಟುಹಬ್ಬವನ್ನು ಸೆಲೆಬ್ರೆಟಿಗಳ ಸಮ್ಮುಖದಲ್ಲಿ ಗ್ರ್ಯಾಂಡ್ ಆಗಿ ಆಚರಿಸಿಕೊಂಡಿದ್ದಾರೆ. ಬಾಲಿವುಡ್‌ ಸೇರಿದಂತೆ ದಕ್ಷಿಣ ಭಾರತದ ಸೆಲೆಬ್ರೆಟಿಗಳೂ ಕೂಡ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಅದರಲ್ಲಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರು.

  ರಶ್ಮಿಕಾ ಮಂದಣ್ಣ ಬ್ಲ್ಯಾಕ್ ಗ್ಲಾಮರಸ್ ಡ್ರೆಸ್ ತೊಟ್ಟು ಕರಣ್‌ ಜೋಹರ್ ಬರ್ತ್‌ ಡೇ ಪಾರ್ಟಿಗೆ ಎಂಟ್ರಿ ಕೊಟ್ಟಿದ್ದರು. ಇದೇ ಪಾರ್ಟಿಗೆ 'ಲೈಗರ್' ಸ್ಟಾರ್ ವಿಜಯ್ ದೇವರಕೊಂಡ ಕೂಡ ಕಾಣಿಸಿಕೊಂಡಿದ್ದರು. ಕರಣ್ ಪಾರ್ಟಿಯಲ್ಲಿ ಕಂಡಿದ್ದ ದಕ್ಷಿಣ ಭಾರತದ ನಟಿ ನಟಿಯರಲ್ಲಿ ಈ ಜೋಡಿ ಕೂಡ ಒಂದು.

   ಹಿಜಾಬ್ ಧರಿಸಿ ಮುಸ್ಲಿಂ ಮಹಿಳೆಯರ ಪಾತ್ರ ಮಾಡುತ್ತಿರುವ ಸ್ಟಾರ್ ನಟಿಯರಿವರು ಹಿಜಾಬ್ ಧರಿಸಿ ಮುಸ್ಲಿಂ ಮಹಿಳೆಯರ ಪಾತ್ರ ಮಾಡುತ್ತಿರುವ ಸ್ಟಾರ್ ನಟಿಯರಿವರು

  Recommended Video

  ತನ್ನ ವಿಚಿತ್ರ ಬಟ್ಟೆಯಿಂದಲೇ ಪೇಚಿಗೆ ಸಿಲುಕಿದ ನ್ಯಾಷನಲ್ ಕ್ರಶ್ | #RashmikaMandanna #KaranJohar

  ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರೂ ಮುಂಬೈನಲ್ಲಿ ಇದ್ದಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಈ ಹಿಂದೆ ಕೂಡ ಅಲ್ಲಿ ಕ್ಯಾಮರಾ ಕಣ್ಣಿಗೂ ಸಿಕ್ಕಿಬಿದ್ದರು. ಆದರೆ, ಈ ಪಾರ್ಟಿಯಲ್ಲಿ ಮಾತ್ರ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇದು ಟ್ರೋಲಿಗರ ತಲೆಗೆ ಹುಳ ಬಿಟ್ಟಂತಾಗಿದೆ.

  ಬೆಂಗಳೂರಿಗೆ ಕಾಲಿಟ್ಟ ಕೂಡಲೇ ಗಣಪನ ದರ್ಶನ ಪಡೆದ ರಶ್ಮಿಕಾ ಮಂದಣ್ಣ! ಬೆಂಗಳೂರಿಗೆ ಕಾಲಿಟ್ಟ ಕೂಡಲೇ ಗಣಪನ ದರ್ಶನ ಪಡೆದ ರಶ್ಮಿಕಾ ಮಂದಣ್ಣ!

  ರಶ್ಮಿಕಾ-ವಿಜಯ್ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ

  ರಶ್ಮಿಕಾ-ವಿಜಯ್ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ

  50ನೇ ವರ್ಷದ ಹುಟ್ಟುಹಬ್ಬಕ್ಕೆ ಕರಣ್ ಜೋಹರ್ ಅದ್ಧೂರಿ ಪಾರ್ಟಿಯನ್ನು ನಿನ್ನೆ ( ಮೇ 25) ರಂದು ಆಯೋಜಿಸಿದ್ದರು. ಈ ಪಾರ್ಟಿಗೆ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ನಟ-ನಟಿಯರಿಗೂ ಆಹ್ವಾನ ನೀಡಲಾಗಿತ್ತು. ಹೀಗಾಗಿ ಕರಣ್ ಜೋಹರ್‌ಗೆ ಹುಟ್ಟುಹಬ್ಬ ಶುಭಾಶಯಗಳನ್ನು ತಿಳಿಸಲು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡು ಕೂಡ ಬರ್ತ್‌ಡೇ ಪಾರ್ಟಿಗೆ ಹೋಗಿದ್ದರು. ಆದರೆ, ಇಬ್ಬರೂ ಪ್ರತ್ಯೇಕವಾಗಿ ಎಂಟ್ರಿ ಕೊಟ್ಟಿದ್ದು, ಟ್ರೋಲಿಗರ ಕಣ್ಣು ಕುಕ್ಕುತ್ತಿದೆ.

  ರಶ್ಮಿಕಾ ಮಂದಣ್ಣ ಸಿಂಗಲ್ ಎಂಟ್ರಿ

  ರಶ್ಮಿಕಾ ಮಂದಣ್ಣ ಸಿಂಗಲ್ ಎಂಟ್ರಿ

  ಕರಣ್ ಜೋಹರ್ ಬ್ಯಾನರ್‌ನಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಸಿನಿಮಾ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಬಾಲಿವುಡ್‌ನಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡು ಇಬ್ಬರೂ ಕಪಲ್‌ ಅಂತಾನೇ ಅಂದುಕೊಂಡಿದ್ದರು. ಹೀಗಾಗಿಯೇ ಕರಣ್‌ ಜೋಹರ್ ಈ ಜೋಡಿಗೆ ವಿಶೇಷವಾಗಿ ಆಹ್ವಾನ ನೀಡಿದ್ದರಂತೆ. ಆದರೆ, ಬರ್ತ್‌ಡೇ ಪಾರ್ಟಿ ಕೇವಲ ರಶ್ಮಿಕಾ ಮಂದಣ್ಣ ಸಿಂಗಲ್ ಆಗಿ ಎಂಟ್ರಿ ಕೊಟ್ಟು ಅಚ್ಚರಿ ಮೂಡಿದ್ದಾರೆ.

  ಚಾರ್ಮಿ, ಪುರಿ ಜೊತೆ ವಿಜಯ್ ಎಂಟ್ರಿ

  ಚಾರ್ಮಿ, ಪುರಿ ಜೊತೆ ವಿಜಯ್ ಎಂಟ್ರಿ

  ವಿಜಯ್ ದೇವರಕೊಂಡ ಕೂಡ ರಶ್ಮಿಕಾ ಜೊತೆ ಕಾಣಿಸಿಕೊಂಡಿಲ್ಲ. 'ಲೈಗರ್' ಸಿನಿಮಾದ ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ಜೊತೆ ಪಾರ್ಟಿಗೆ ಎಂಟ್ರಿ ಕೊಟ್ಟಿದ್ದರು. ಹಾಗೇ ಪಾರ್ಟಿಯಲ್ಲೂ ಕೂಡ ಇಬ್ಬರೂ ಒಬ್ಬರನ್ನೊಬ್ಬರು ಭೇಟಿಯಾಗಿಲ್ಲ ಎಂದು ಬಾಲಿವುಡ್ ಮಾತಾಡಿಕೊಳ್ಳುತ್ತಿದೆ. ಈ ಕಾರಣಕ್ಕೆ ಇಬ್ಬರ ನಡುವೆ ಎಲ್ಲೋ, ಏನೋ ಎಡವಟ್ಟಾಗಿದೆ ಎಂದು ಬಾಲಿವುಡ್‌ ಮಾತಾಡಿಕೊಳ್ಳುತ್ತಿದೆ.

  ಒಟ್ಟಿಗೆ ಕಾಣಿಸಿಕೊಂಡಿದ್ದ ಜೋಡಿ ಇದು

  ಒಟ್ಟಿಗೆ ಕಾಣಿಸಿಕೊಂಡಿದ್ದ ಜೋಡಿ ಇದು

  ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಅಂತ ಬಾಲಿವುಡ್‌ ಮಂದಿಗೆ ಅನುಮಾನ. ಅಲ್ಲದೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡು ಮುಂಬೈನಲ್ಲಿ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಜಿಮ್‌ನಲ್ಲಿ ಕಾಣಿಸಿಕೊಂಡಿದ್ದರು. ಊಟಕ್ಕೆ ಒಟ್ಟಿಗೆ ಸೇರಿದ್ದರು. ಬಳಿಕ ಹೊಸ ವರ್ಷ ಸೆಲೆಬ್ರೆಟ್ ಮಾಡಲು ಗೋವಾಗೆ ಹೋಗಿದ್ದರು. ಸಂಕ್ರಾಂತಿ ಸೆಲೆಬ್ರೆಟ್ ಮಾಡಿದ್ದರು. ಈ ಕಾರಣಕ್ಕೆ ಇಬ್ಬರೂ ಡೇಟಿಂಗ್ ಮಾಡಿಕೊಳ್ಳುತ್ತಿದ್ದಾರೆಂಬ ಸುದ್ದಿ ಹರಿದಾಡಿತ್ತು. ಈಗ ಇಬ್ಬರೂ ಬೇರೆ ಬೇರೆಯಾಗಿ ಪಾರ್ಟಿ ಎಂಟ್ರಿ ಕೊಟ್ಟಿದ್ದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

  English summary
  Karan Johar's Birthday Party: Rashmika Mandanna And Vijay Devarakonda Came separately, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X