For Quick Alerts
  ALLOW NOTIFICATIONS  
  For Daily Alerts

  ನಟ ಕಾರ್ತಿಕ್ ಆರ್ಯನ್ ನಿಂದ ಕರಣ್ ಜೋಹರ್ ಧರ್ಮ ಸಂಸ್ಥೆಗೆ ಇಷ್ಟೊಂದು ನಷ್ಟ ಆಗಿದ್ಯಾ?

  |

  ಬಾಲಿವುಡ್ ಸ್ಟಾರ್ ನಟರ ಸಾಲಿನಲ್ಲಿರುವ ನಟ ಕಾರ್ತಿಕ್ ಆರ್ಯನ್ ಬಹುನಿರೀಕ್ಷೆಯ ದೋಸ್ತಾನ-2 ಸಿನಿಮಾದಿಂದ ಹೊರಬಂದಿದ್ದಾರೆ. ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ ನಲ್ಲಿ ಮೂಡಿಬರುತಿದ್ದ ಈ ಸಿನಿಮಾದಿಂದ ಕಾರ್ತಿಕ್ ಆರ್ಯನ್ ನನ್ನು ಹೊರಹಾಕಿದ್ದಾರೆ.

  ಈ ಬಗ್ಗೆ ಧರ್ಮ ಸಂಸ್ಥೆ ಅಧಿಕೃತವಾಗಿ ಮಾಹಿತಿ ಬಹಿರಂಗ ಪಡಿಸಿದೆ. ವೃತ್ತಿಪರತೆ ಇಲ್ಲ ಎನ್ನುವ ಕಾರಣ ಕಾರ್ತಿಕ್ ಆರ್ಯನ್ ಅವರನ್ನು ಸಿನಿಮಾದಿಂದ ಹೊರಹಾಕಲಾಗಿದೆ ಎನ್ನುವ ಮಾಹಿತಿ ಕೇಳಿಬರುತ್ತಿದೆ. ಸಿನಿಮಾದ ಸ್ಕ್ರಿಪ್ಕ್ ವಿಚಾರದಲ್ಲಿ ಹೆಚ್ಚು ಕೈಯಾಡಿಸುತ್ತಿದ್ದರು ಎನ್ನುವ ಆರೋಪ ಕೇಳಿಬರುತ್ತಿದೆ.

  ಈ ಬಗ್ಗೆ ಬಾಲಿವುಡ್ ನಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ತರಹವೇವಾರಿ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಕಾರ್ತಿಕ್ ಆರ್ಯನ್ ನಿಂದ ಧರ್ಮ ಸಂಸ್ಥೆಗೆ ಕೋಟಿ ಕೋಟಿನಷ್ಟವಾಗಿದೆ ಎನ್ನುವ ಸುದ್ದಿ ಹೊರಬಿದ್ದಿದೆ. ಆಂಗ್ಲ ವೆಬ್ ಸೈಟ್ ಒಂದು ವರದಿ ಮಾಡಿರುವ ಪ್ರಕಾರ ಕಾರ್ತಿಕ್ ಆರ್ಯನ್ ನಿಂದ ಬರೋಬ್ಬರಿ 20 ಕೋಟಿ ರೂ. ನಷ್ಟವಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

  ಬಾಲಿವುಡ್ ನ ಅತೀ ದೊಡ್ಡ ಪ್ರೊಡಕ್ಷನ್ ಕಂಪನಿಗಳಲ್ಲಿ ಒಂದಾಗಿರುವ ಧರ್ಮ ಸಂಸ್ಥೆಗೆ ಈ ನಷ್ಟ ದೊಡ್ಡದೇನಲ್ಲ. ಆದರೆ ಕಾರ್ತಿಕ್ ಆರ್ಯನ್ ನಿಂದ ಆಗಿರುವುದು ಸಿನಿಮಾಗೆ ತೊಂದರೆ ಆಗಿದೆ ಎನ್ನಲಾಗುತ್ತಿದೆ. ಇಷ್ಟು ದೊಡ್ಡ ಮೊತ್ತ ನಷ್ಟವಾಗುತ್ತೆ ಎಂದು ಗೊತ್ತಿದ್ದರೂ ಕಾರ್ತಿಕ್ ಆರ್ಯನನ್ನು ಸಿನಿಮಾದಿಂದ ಹೊರಹಾಕಿರುವುದು ಅಚ್ಚರಿ ಮೂಡಿಸಿದೆ.

  ದೋಸ್ತಾನ-2 ಸಿನಿಮಾ ಸೆಟ್ಟೇರಿ ಎರಡು ವರ್ಷಗಳಾಗಿದೆ. ಈಗಾಗಲೇ ಕೆಲವು ದೃಶ್ಯಗಳ ಚಿತ್ರೀಕರಣ ನಡೆದಿದೆ. ಆದರೀಗ ಮತ್ತೆ ಹೊಸದಾಗಿ ಚಿತ್ರೀಕರಣ ಮಾಡಬೇಕಾಗಿದೆ. ಕಾರ್ತಿಕ್ ಜಾಗಕ್ಕೆ ಯಾರು ಎಂಟ್ರಿ ಕೊಡುತ್ತಾರೆ ಎನ್ನುವುದು ಮತ್ತೊಂದು ಕುತೂಹಲ ಮೂಡಿದೆ.

  ಈ ವರ್ಷದ ಮ್ಯೂಸಿಕಲ್ ಹಿಟ್ ಸಿನಿಮಾ ರಾಬರ್ಟ್ | Filmibeat Kannada

  ದೋಸ್ತಾನ-2 ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ಗೆ ನಾಯಕಿಯಾಗಿ ಜಾಹ್ನವಿ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ. ಕಾಲಿನ್ ಡಿ ಕುನ್ಹಾ ಸಾರಥ್ಯದಲ್ಲಿ ಸಿನಿಮಾ ಮೂಡಿಬರುತ್ತಿದೆ. ದೋಸ್ತಾನ ಮೊದಲ ಭಾಗದಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ಮಿಂಚಿದ್ದರು. ಜಾನ್ ಅಬ್ರಹಾಂ ಮತ್ತು ಅಭಿಷೇಕ್ ಬಚ್ಚನ್ ಮುಖ್ಯ ಭೂಮಿಕೆಯಲ್ಲಿದ್ದರು. ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿದ್ದ ಈ ಸಿನಿಮಾದ 2ನೇ ಆವೃತ್ತಿ ತೆರೆಮೇಲೆ ಬರಲು ಸಜ್ಜಾಗಿತ್ತು. ಆದರೀಗ ನಾಯಕನ ಬದಲಾವಣೆಯಿಂದ ಮತ್ತಷ್ಟು ತಡವಾಗುವ ಸಾಧ್ಯತೆ ಇದೆ.

  English summary
  Karan Johar's Dharma productions loss worth 20 crore after exit Kartik Aaryan from Dostana-2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X