ನಿರ್ದೇಶಕ ಕರಣ್ ಜೋಹರ್ ಮನೆಯಲ್ಲಿ ಇಬ್ಬರಿಗೆ ಕೊರೊನಾ

ಬಾಲಿವುಡ್ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ನಿವಾಸದಲ್ಲಿ ಕೆಲಸ ಮಾಡುವ ಇಬ್ಬರಿಗೆ ಕೊರೊನಾ ಪಾಸಿಟಿವ್ ಆಗಿದೆ.

ನಿನ್ನೆ ಟ್ವೀಟ್ ಮಾಡಿರುವ ಕರಣ್ ಜೋಹರ್ ಈ ವಿಷಯವನ್ನು ಬಹಿರಂಗಗೊಳಿಸಿದ್ದು, ಮನೆಗೆಲಸ ಮಾಡುವ ಇಬ್ಬರು ವ್ಯಕ್ತಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಹೇಳಿದ್ದಾರೆ.

ಮನೆಗೆಲಸದವರಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ ಕರಣ್ ಜೋಹರ್ ಸೇರಿದಂತೆ ಕರಣ್ ಮನೆಯಲ್ಲಿರುವವರ ಗಂಟಲು ದ್ರವ ಮಾದರಿ ತೆಗೆದು ಪರೀಕ್ಷೆ ಮಾಡಿಸಿದ್ದು, ಎಲ್ಲರಿಗೂ ನೆಗೆಟಿವ್ ವರದಿ ಬಂದಿದೆ.

ಮನೆಯವರಿಗೆ ಕೊರೊನಾ ಪಾಸಿಟಿವ್ ಬಂದಿರುವ ಕಾರಣ ಕರಣ್ ಜೋಹರ್ ಕುಟುಂಬವು 14 ದಿನ ಕ್ವಾರಂಟೈನ್‌ನಲ್ಲಿರಬೇಕಾಗಿದೆ. ವಿಶೇಷವೆಂದರೆ ನಿನ್ನೆಯೇ (ಮೇ 25) ಕರಣ್ ಜೋಹರ್ ಹುಟ್ಟುಹಬ್ಬ.

ಕರಣ್ ವಾಸಿಸುವ ಬಿಲ್ಡಿಂಗ್ ಸ್ಯಾನಿಟೈಸ್‌

ಕರಣ್ ವಾಸಿಸುವ ಬಿಲ್ಡಿಂಗ್ ಸ್ಯಾನಿಟೈಸ್‌

ಮನೆಗೆಲಸದವರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಗೊತ್ತಾದ ಕೂಡಲೇ ಅವರನ್ನು ಪ್ರತ್ಯೇಕವಾಗಿ ಇಡಲಾಯಿತು. ಮುಂಬೈ ಪಾಲಿಕೆಯವರು ಇಡೀಯ ಬಿಲ್ಡಿಂಗ್ ಅನ್ನು ಸ್ಯಾನಿಟೈಸ್ ಮಾಡಿದರು ಎಂದು ಕರಣ್ ಹೋಹರ್ ಟ್ವೀಟ್‌ ನಲ್ಲಿ ಬರೆದಿದ್ದರು.

ಕರಣ್ ಮನೆಯಲ್ಲಿ ಮಕ್ಕಳು, ವಯಸ್ಸಾದವರೂ ಇದ್ದಾರೆ

ಕರಣ್ ಮನೆಯಲ್ಲಿ ಮಕ್ಕಳು, ವಯಸ್ಸಾದವರೂ ಇದ್ದಾರೆ

ಕರಣ್ ಜೋಹರ್ ಮನೆಯಲ್ಲಿ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ವಯಸ್ಸಾದ ತಾಯಿಯೂ ಇದ್ದಾರೆ. ಮಕ್ಕಳು ಮತ್ತು ವಯಸ್ಸಾದವರಿಗೆ ಕೊರೊನಾ ಬೇಗನೇ ಆವರಿಸುವ ಭಯವಿದೆ. ಹಾಗಾಗಿ ಶಿಸ್ತಿನ ಕ್ವಾರಂಟೈನ್‌ ಅನ್ನು ಕರಣ್ ಜೋಹರ್ ಪಾಲಿಸುವ ನಿರೀಕ್ಷೆ ಇದೆ.

ಜಾನ್ಹವಿ ಕಪೂರ್ ಮನೆಯಲ್ಲೂ ಹೀಗೆಯೇ ಆಗಿದೆ

ಜಾನ್ಹವಿ ಕಪೂರ್ ಮನೆಯಲ್ಲೂ ಹೀಗೆಯೇ ಆಗಿದೆ

ಕೆಲವು ದಿನಗಳ ಹಿಂದೆಯಷ್ಟೆ ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್ ಮನೆಯಲ್ಲೂ ಮನೆಗೆಲಸದವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ನಂತರ ಮತ್ತೂ ಇಬ್ಬರು ಮನೆಗೆಲಸದವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಪ್ರಸ್ತುತ ಜಾನ್ಹವಿ ಕಪೂರ್ ಮನೆಯವರು ಕ್ವಾರಂಟೈನ್‌ನಲ್ಲಿದ್ದಾರೆ.

ಮುಂಬೈ ಒಂದರಲ್ಲೇ 21,972 ಪ್ರಕರಣ

ಮುಂಬೈ ಒಂದರಲ್ಲೇ 21,972 ಪ್ರಕರಣ

ಮಹಾರಾಷ್ಟ್ರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಬಹಳ ಹೆಚ್ಚಾಗಿವೆ. ಮಹಾರಾಷ್ಟ್ರ ಒಂದರಲ್ಲೇ 52,667 ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಮುಂಬೈ ಒಂದೇ ನಗರದಲ್ಲಿ 31,972 ಪ್ರಕರಣಗಳು ದಾಖಲಾಗಿವೆ. ಸಾವಿರಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ.

More from Filmibeat

English summary
Director Karan Johar's two house staff test positive for COVID-19. Karan Johar has no symptoms yet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X