For Quick Alerts
  ALLOW NOTIFICATIONS  
  For Daily Alerts

  'ಬ್ರಹ್ಮಾಸ್ತ್ರ' ಮೊದಲ ದಿನದ ಕಲೆಕ್ಷನ್ ಇಷ್ಟೋಂದಾ! ಕರಣ್ ಜೋಹರ್ ಹಂಚಿಕೊಂಡ ಮಾಹಿತಿ

  |

  ರಣ್ಬೀರ್ ಕಪೂರ್-ಆಲಿಯಾ ಭಟ್ ನಟನೆಯ 'ಬ್ರಹ್ಮಾಸ್ತ್ರ' ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಬಹಳ ಒಳ್ಳೆಯ ವಿಮರ್ಶೆಗಳು ಕೇಳಿ ಬಂದಿಲ್ಲವಾದರೂ ಸಿನಿಮಾ ಬಹಳ ಒಳ್ಳೆಯ ಕಲೆಕ್ಷನ್ ಅನ್ನು ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ಮಾಡಿದೆ.

  ಕೆಲವು ಮಾಧ್ಯಮಗಳು 'ಬ್ರಹ್ಮಾಸ್ತ್ರ' ಸಿನಿಮಾವು ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ 35 ರಿಂದ 40 ಕೋಟಿ ಕಲೆಕ್ಷನ್ ಮಾಡಿದ ಎಂದಿವೆ. ಇದು ಸಾಧಾರಣ ಮೊತ್ತವೇನಲ್ಲ. ಆದರೆ ಸಿನಿಮಾದ ನಿರ್ಮಾಪಕರೂ ಆಗಿರುವ ಕರಣ್ ಜೋಹರ್, 'ಬ್ರಹ್ಮಾಸ್ತ್ರ' ಸಿನಿಮಾದ ಮೊದಲ ದಿನದ ಕಲೆಕ್ಷನ್ ಮಾಹಿತಿಯನ್ನು ಹಂಚಿಕೊಂಡಿದ್ದು, ಸಿನಿಮಾ ಪ್ರಿಯರ ಹಾಗೂ ಸಿನಿಮಾ ಬಾಕ್ಸ್ ಆಫೀಸ್ ಲೆಕ್ಕಾಚಾರ ಪರಿಣಿತರು ಆಶ್ಚರ್ಯಪಡಿಸುವಂತಿದೆ ಕರಣ್ ಹಂಚಿಕೊಂಡಿರುವ ಲೆಕ್ಕಾಚಾರ.

  'ಬ್ರಹ್ಮಾಸ್ತ್ರ' ಸಿನಿಮಾದ ಮೊದಲ ದಿನದ ಕಲೆಕ್ಷನ್ ಮಾಹಿತಿಯನ್ನು ಟ್ವಿಟ್ಟರ್‌ನಲ್ಲಿ ಕರಣ್ ಜೋಹರ್ ಹಂಚಿಕೊಂಡಿದ್ದು, ಮೊದಲ ದಿನ ವಿಶ್ವದಾದ್ಯಂತ 'ಬ್ರಹ್ಮಾಸ್ತ್ರ' ಸಿನಿಮಾ ವಿಶ್ವದಾದ್ಯಂತ ಬರೋಬ್ಬರಿ 75 ಕೋಟಿ ಕಲೆಕ್ಷನ್ ಮಾಡಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ಕರಣ್ ಜೋಹರ್.

  ವಿಶ್ವದಾದ್ಯಂತ ಸುಮಾರು 9000 ಚಿತ್ರಮಂದಿರಗಳಲ್ಲಿ 'ಬ್ರಹ್ಮಾಸ್ತ್ರ' ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ಹಾಗಾಗಿ ಲೆಕ್ಕಾಚಾರದ ಪ್ರಕಾರ ಮೊದಲ ದಿನ 75 ಕೋಟಿ ಕಲೆಕ್ಷನ್ ಆಗಿರುವುದು ದೊಡ್ಡ ವಿಷಯವೇನಲ್ಲ ಎನಿಸುತ್ತದೆ. ಮೊದಲ ದಿನವೇ 75 ಕೋಟಿ ಗಳಿಸಿರುವ ಸಿನಿಮಾ ಶನಿವಾರ ಹಾಗೂ ಭಾನುವಾರಗಳಂದೂ ಇನ್ನೂ ಹೆಚ್ಚಿನ ಮೊತ್ತವನ್ನು ಕಲೆಕ್ಟ್ ಮಾಡಲಿದೆ ಎನ್ನಲಾಗುತ್ತಿದೆ. ಈ ಎರಡೂ ದಿನಗಳಲ್ಲಿ ಸುಮಾರು 200 ಕೋಟಿ ಕಲೆಕ್ಷನ್ ಆಗುವ ಸಾಧ್ಯತೆ ಇದೆ.

  'ಬ್ರಹ್ಮಾಸ್ತ್ರ' ಸಿನಿಮಾದ ಒಟ್ಟು ಬಜೆಟ್ 410 ಕೋಟಿ ಎಂಬುದು ವಿಕಿಪೀಡಿಯಾ ಮಾಹಿತಿ. ಅದರಂತೆ ಸಿನಿಮಾದ ಬಜೆಟ್ ವಾಪಸ್ ಬರಬೇಕೆಂದರೆ ಇದೇ ಮಾದರಿಯಲ್ಲಿ ಸುಮಾರು ಒಂದು ವಾರವಾದರೂ ಸಿನಿಮಾ ಓಡಬೇಕಾಗುತ್ತದೆ. ಆ ನಂತರ ಸಿನಿಮಾದ ಸ್ಯಾಟಲೈಟ್ ಹಕ್ಕು ಹಾಗೂ ಒಟಿಟಿ ಹಕ್ಕುಗಳಿಂದಲೂ ಲಾಭ ಬರಲಿದೆ. ಅಲ್ಲಿಗೆ ಸಿನಿಮಾದ ನಿರ್ಮಾಪಕ ಕರಣ್ ಜೋಹರ್ ಸೇಫ್. ಸಿನಿಮಾಕ್ಕೆ ಕರಣ್ ಜೋಹರ್ ಮಾತ್ರವೇ ಅಲ್ಲದೆ ನಟ ರಣ್ಬೀರ್ ಕಪೂರ್, ನಿರ್ದೇಶಕ ಅಯಾನ್ ಮುಖರ್ಜಿ ಹಾಗೂ ಇನ್ನೂ ಮೂವರು ಬಂಡವಾಳ ಹೂಡಿದ್ದಾರೆ.

  'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ರಣ್ಬೀರ್ ಕಪೂರ್-ಆಲಿಯಾ ಭಟ್ ನಟಿಸಿದ್ದು, ಸಿನಿಮಾದಲ್ಲಿ ನಾಗಾರ್ಜುನ, ಅಮಿತಾಬ್ ಬಚ್ಚನ್, ಮೌನಿ ರಾಯ್ ಇನ್ನಿತರೆ ಸ್ಟಾರ್ ನಟರು ನಟಿಸಿದ್ದಾರೆ. ಶಾರುಖ್ ಖಾನ್ ಅವರು ಮುಖ್ಯ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಅಯಾನ್ ಮುಖರ್ಜಿ.

  English summary
  Producer Karan Johar says Brahmastra movie collects 75 crore rs on first day world wide. He share the information on twitter.
  Saturday, September 10, 2022, 18:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X