ಬರ್ತಡೇ ಪಾರ್ಟಿಯಲ್ಲಿ ಭಾಗಿಯಾಗಿ ಮತ್ತೆ ಟ್ರೋಲಿಗರಿಗೆ ಆಹಾರವಾದ ಕರಣ್ ಜೋಹರ್

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ಬಳಿಕ ಸ್ವಜನಪಕ್ಷಪಾತದ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಬಾಲಿವುಡ್ ನ ಕೆಲವು ನಟರು ಮತ್ತು ನಿರ್ಮಾಪಕರ ವಿರುದ್ಧ ನೆಪೋಟಿಸಂ ಆರೋಪ ಕೇಳಿಬರುತ್ತಿದೆ. ಸ್ಟಾರ್ ಮಕ್ಕಳಿಗೆ ಮಾತ್ರ ಮಣೆ ಹಾಕುತ್ತಾರೆ, ಹೊರಗಡೆಯಿಂದ ಬಂದ ಪ್ರತಿಭಾವಂತರನ್ನು ತುಳಿಯಲಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಈ ವಿಚಾರದಲ್ಲಿ ಬಾಲಿವುಡ್ ನಲ್ಲಿ ಅತೀ ಹೆಚ್ಚು ಟ್ರೋಲ್ ಗೆ ಗುರಿಯಾದವರು ಕರಣ್ ಜೋಹರ್.

Recommended Video

Darshan,ಆಷಾಢ ಶುಕ್ರವಾರ ಚಾಮುಂಡಿ ತಾಯಿಯ ಆಶೀರ್ವಾದ ಪಡೆದ ನಟ ದರ್ಶನ್ | Filmibeat Kannada

ಸಾಮಾಜಿಕ ಜಾಲತಾಣದಲ್ಲಿ ಕರಣ್ ಜೋಹರ್ ಅನ್ನು ಎಷ್ಟರ ಮಟ್ಟಿಗೆ ಟ್ರೋಲ್ ಮಾಡಲಾಗುತ್ತಿದೆ ಎಂದರೆ, ಟ್ರೋಲ್ ಗೆ ಬೇಸತ್ತು ಖಿನ್ನತೆಗೆ ಹೋಗಿದ್ದಾರೆ, ಯಾರ ಜೊತೆಯು ಮಾತನಾಡುತ್ತಿಲ್ಲ. ಮಾತನಾಡಿಸಿದರೆ ಬಿಕ್ಕಿ ಬಿಕ್ಕಿ ಅಳುತ್ತಾರೆ ಎಂದು ಕರಣ್ ಆಪ್ತ ಹೇಳಿದ್ದರು. ಆದರೆ ಇತ್ತೀಚಿಗೆ ಕರಣ್, ರಣಬೀರ್ ಕಪೂರ್ ತಾಯಿ ನೀತು ಕಪೂರ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ನಗುತ್ತಾ ಫೋಟೋಗೆ ಪೋಸ್ ನೀಡಿ ಮತ್ತೆ ಟ್ರೋಲಿಗರಿಗೆ ಆಹಾರವಾಗಿದ್ದಾರೆ.

ನೀತು ಕಪೂರ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕಪೂರ್ ಕುಟುಂಬದ ಅನೇಕರು ಭಾಗಿಯಾಗಿದ್ದರು. ಇವರ ಜೊತೆ ಕರಣ್ ಕೂಡ ಹಾಜರಾಗಿದ್ದಾರೆ. ಜನ್ಮದಿನ ಸಂಭ್ರಮದ ಒಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕುಟುಂಬದ ಜೊತೆ ಕರಣ್ ನಗುತ್ತಾ ಫೋಟೋಗೆ ಪೋಸ್ ನೀಡಿರುವುದನ್ನು ನೋಡಿ ನಟ್ಟಿಗರು ಎಲ್ಲಿ ಕರಣ್ ಅಳುತ್ತಿಲ್ಲವಲ್ಲಾ? ಎಂದು ಪ್ರಶ್ನಿಸುತ್ತಿದ್ದಾರೆ.

Karan Johar Attend Neetu Kapoor Birthday

ಅಲ್ಲದೆ ನೆಟ್ಟಿಗರು ಕರಣ್ ಅನ್ನು ಸುಳ್ಳುಗಾರ, ಕಪಟ, ಕೊಲೆಗಾರ ಎಂದೆಲ್ಲ ಕರೆಯುತ್ತಿದ್ದಾರೆ. ಇಂತಹ ಸಮಯದಲ್ಲಿ ಹೇಗೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದೀರಿ ಎಂದು ಕೇಳುತ್ತಿದ್ದಾರೆ. ಇನ್ನು ಕೆಲವರು ಈ ಸುಳ್ಳುಗಾರನ್ನು ಅನ್ ಫಾಲೋ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಪದೇ ಪದೆ ಟ್ರೋಲ್ ಆಗುತ್ತಿರುವ ಕರಣ್ ಸದ್ಯ ಏನನ್ನು ಹೇಳುವ ಸ್ಥಿತಿಯಲ್ಲಿಲ್ಲದೆ ಪೇಚಾಡುತ್ತಿದ್ದಾರೆ.

More from Filmibeat

English summary
Karan Johar trolled after attending Neetu Kapoor birthday. Netizens questions wasn't he shattered and crying
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X