For Quick Alerts
  ALLOW NOTIFICATIONS  
  For Daily Alerts

  ವರುಣ್ ಧವನ್-ನತಾಶಾ ಮದುವೆಗೆ ಬಂದು ಟ್ರೋಲ್ ಆದ ಕರಣ್ ಜೋಹರ್

  By ಫಿಲ್ಮ್ ಡೆಸ್ಕ್
  |

  ಬಾಲಿವುಡ್ ನಟ ವರುಣ್ ಧವನ್ ಬಾಲ್ಯದ ಗೆಳತಿ ನತಾಶಾ ದಲಾಲ್ ಜೊತೆ ಭಾನುವಾರ ಸಂಜೆ ಹಸೆಮಣೆ ಏರಿದ್ದಾರೆ. ವರುಣ್ ಮದುವೆ ಮಹಾರಾಷ್ಟ್ರದ ಅಲಿಬಾಗ್ ನಲ್ಲಿರುವ ಐಷಾರಾಮಿ ಹೋಟೆಲ್ ದಿ ಮ್ಯಾನ್ಷನ್ ಹೌಸ್ ನಲ್ಲಿ ನೆರವೇರಿತು.

  ಕುಟುಂಬದವರು ಮತ್ತು ತೀರ ಆಪ್ತರ ಸಮ್ಮುಖದಲ್ಲಿ ವರುಣ್ ಮತ್ತು ನತಾಶಾ ದಾಂಪತ್ಯ ಜೇವನಕ್ಕೆ ಕಾಲಿಟ್ಟಿದ್ದಾರೆ. ಕೇವಲ 150 ರಿಂದ 200 ಮಂದಿ ಮಾತ್ರ ಮದುವೆಯಲ್ಲಿ ಹಾಜರಾಗಿ ನವಜೋಡಿಗೆ ಶುಭಹಾರೈಸಿದ್ದಾರೆ ಎನ್ನಲಾಗುತ್ತಿದೆ. ಕುಟುಂಬದ ಜೊತೆ ಬಾಲಿವುಡ್ ನ ಕೆಲವೇ ಕೆಲವು ಗಣ್ಯರು ಮಾತ್ರ ಹಾಜರಾಗಿದ್ದರು.

  ಸೆೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ, ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್ ಸೇರಿದಂತೆ ಕೆಲವು ಗಣ್ಯರು ಮಾತ್ರ ವರುಣ್ ಮದುವೆಯಲ್ಲಿ ಕಾಣಿಸಿಕೊಂಡಿದ್ದರು. ಕರಣ್ ಜೋಹರ್ ಅಲಿಬಾಗ್ ಗೆ ತೆರಳುವಾಗ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಕರಣ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟೆಯಲ್ಲ ವಿಭಿನ್ನ ಡಿಸೈನ್ ನ ಉಡುಪು ಧರಿಸಿದ್ದ ಕರಣ್ ನೆಟ್ಟಗರಿಂದ ಟ್ರೋಲ್ ಗೆ ಗುರಿಯಾಗಿದ್ದಾರೆ.

  ಬಾಲ್ಯದ ಗೆಳತಿ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ವರುಣ್ ಧವನ್ಬಾಲ್ಯದ ಗೆಳತಿ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ವರುಣ್ ಧವನ್

  ಕರಣ್ ಜೋಹರ್ ಅಲಿಬಾಗ್ ಗೆ ತೆರಳುವಾಗ ಬಿಳಿ ಮತ್ತು ಕಪ್ಪು ಬಣ್ಣದ ಬಟ್ಟೆಯ ಮೇಲೆ ಗೋಲ್ಡ್ ಬಣ್ಣದ ಡಿಸೈನ್ ಇರುವ ಕ್ಯಾಶುಯಲ್ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದರು. ಕರಣ್ ಧರಿಸಿದ್ದ ಬಟ್ಟೆ ಈಗ ಟ್ರೋಲಿಗರಿಗೆ ಆಹಾರವಾಗಿದೆ.

  ಬ್ಯಾಂಡ್ ವಾಲ ಎಂಟ್ರಿ ಕೊಡ್ತಿದ್ದಾರೆ, ಕರ್ಟನ್ ತುಂಬಾ ಸುಂದರವಾಗಿದೆ, ಅಮ್ಮನ ಸೀರೆ ಧರಿಸಿದ್ದೀರಾ? ಎಂದು ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿ ಕರಣ್ ಕಾಲೆಳೆಯುತ್ತಿದ್ದಾರೆ. ಅಂದಹಾಗೆ ಕರಣ್ ಟ್ರೋಲ್ ಆಗುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ನಟ ಸುಶಾಂತ್ ಸಿಂಗ್ ಸಾವಿನ ಬಳಿಕ ಕರಣ್ ಸಿಕ್ಕಾಪಟ್ಟೆ ಟ್ರೋಲ್ ಗೆ ಗುರಿಯಾಗಿದ್ದರು.

  ನೆಪೋಟಿಸಂ ವಿಚಾರವಾಗಿ ಕರಣ್ ಅವರನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡಲಾಗಿತ್ತು. ಟ್ರೋಲ್ ಗಳ ಕಾಟಕ್ಕೆ ಕರಣ್ ಸಾಮಾಜಿಕ ಜಾಲತಾಣದಿಂದ ದೂರವಾಗಿದ್ದರು. ಮತ್ತೆ ಸಾಮಾಜಿಕ ಜಾಲತಾಣಕ್ಕೆ ವಾಪಸ್ ಆದರೂ ಸಹ ಕಾಮೆಂಟ್ ವಿಭಾಗವನ್ನು ಹೈಡ್ ಪೋಸ್ಟ್ ಮಾಡುತ್ತಾರೆ. ಆದರೂ ಕರಣ್ ಅವರನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಾರೆ.

  ಸದ್ದಿಲ್ಲದೆ ಮುಗಿದುಹೋಯ್ತು ವರುಣ್ ಧವನ್ ಮದುವೆ | Filmibeat Kannada

  ಅಂದಹಾಗೆ ನಟ ವರುಣ್ ಧವನ್ ಅವರನ್ನು ಚಿತ್ರರಂಗಕ್ಕೆ ಪರಿಚಿಯಿದ್ದು, ಕರಣ್ ಜೋಹರ್. ಕರಣ್ ನಿರ್ಮಾಣದ ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾ ಮೂಲಕ ವರುಣ್ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ವರುಣ್ ಮತ್ತು ಕರಣ್ ನಡುವೆ ಉತ್ತಮವಾದ ಸ್ನೇಹ ಬಾಂಧವ್ಯವಿದೆ.

  English summary
  Karan Johar trolled for his outfit in Varun dhawan and Natasha Dalal wedding. Netizens clled 'band baje wala aaya'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X