For Quick Alerts
  ALLOW NOTIFICATIONS  
  For Daily Alerts

  8 ಮಂದಿಯನ್ನು ಬಿಟ್ಟು ಎಲ್ಲಾ ಸೆಲಿಬ್ರಿಟಿಗಳನ್ನು ಟ್ವಿಟ್ಟರ್ ನಲ್ಲಿ ಅನ್ ಫಾಲೋ ಮಾಡಿದ ಕರಣ್ ಜೋಹರ್

  By ಫಿಲ್ಮ್ ಡೆಸ್ಕ್
  |

  ಬಾಲಿವುಡ್ ಸ್ಟರ್ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಳಿಕ ಕೆಲವು ನಿರ್ಮಾಕರು ಮತ್ತು ನಟರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸುಶಾಂತ್ ಸಿಂಗ್ ಸಾವು ಬಾಲಿವುಡ್ ನಲ್ಲಿರುವ ಸ್ವಜನಪಕ್ಷಪಾತದ ಬಗ್ಗೆ ಚರ್ಚೆಗೆ ನಾಂದಿಹಾಡಿದೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದು, ಬಾಲಿವುಡ್ ನ ಕೆಲವು ನಿರ್ಮಾಣ ಸಂಸ್ಥೆ ಮತ್ತು ಸ್ಟಾರ್ ನಟರು ಎಂದು ನೆಟ್ಟಿಗರು ಆರೋಪಿಸುತ್ತಿದ್ದಾರೆ.

  ಎಲ್ಲಾ ಸೆಲೆಬ್ರಿಟಿಗಳನ್ನು ಅನ್ ಫಾಲೋ ಮಾಡಿದ ಕರಣ್ ಜೋಹರ್ | Karan johar | Filmibeat Kannada

  ಅಲ್ಲದೆ ಕೆಲವು ಸ್ಟಾರ್ ನಟ-ನಟಿಯರನ್ನು ಮತ್ತು ನಿರ್ಮಾಪಕರನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಲ್ ಫಾಲೋ ಮಾಡುತ್ತಿದ್ದಾರೆ. ಅವರ ಸಿನಿಮಾಗಳನ್ನು ಬಹಿಷ್ಕರಿಸುವಂತೆ ನೆಟ್ಟಿಗರು ಒತ್ತಾಯಮಾಡುತ್ತಿದ್ದಾರೆ. ಅದರಲ್ಲೂ ಬಾಲಿವುಡ್ ನ ಖ್ಯಾತ ನಿರ್ಮಾಪಕ ಎನಿಸಿಕೊಂಡಿರುವ ಕರಣ್ ಜೋಹರ್, ನಟಿ ಅಲಿಯಾ ಭಟ್, ಸಲ್ಮಾನ್ ಖಾನ್, ಸೋನಂ ಕಪೂರ್, ಏಕ್ತ ಕಪೂರ್ ಸೇರಿದ್ದಂತೆ ಅನೇಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಟ್ರೋಲ್ ಮಾಡಲಾಗುತ್ತಿದೆ. ಮುಂದೆ ಓದಿ...

  ಸುಶಾಂತ್ ಸಾವಿನ ಬಗ್ಗೆ ಹತ್ತು ಗಂಟೆ ವಿಚಾರಣೆ: ಪೊಲೀಸರಿಗೆ ರಿಯಾ ತಿಳಿಸಿದ್ದೇನು?ಸುಶಾಂತ್ ಸಾವಿನ ಬಗ್ಗೆ ಹತ್ತು ಗಂಟೆ ವಿಚಾರಣೆ: ಪೊಲೀಸರಿಗೆ ರಿಯಾ ತಿಳಿಸಿದ್ದೇನು?

  8 ಮಂದಿಯನ್ನು ಬಿಟ್ಟು ಎಲ್ಲರನ್ನು ಅನ್ ಫಾಲೋ ಮಾಡಿದ ಕರಣ್

  8 ಮಂದಿಯನ್ನು ಬಿಟ್ಟು ಎಲ್ಲರನ್ನು ಅನ್ ಫಾಲೋ ಮಾಡಿದ ಕರಣ್

  ಸುಶಾಂತ್ ಸಾವಿನ ಬಳಿಕ ಸಾಕಷ್ಟು ಕಲಾವಿದರು ತಮಗಾದ ಅನ್ಯಾಯದ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಲ್ಲಿರುವ ಸ್ವಜನಪಕ್ಷಪಾತದ ಬಗ್ಗೆ ಹೇಳುತ್ತಿದ್ದಾರೆ. ಅದರಲ್ಲೂ ಕರಣ್ ಜೋಹರ್ ಬಗ್ಗೆ ನೆಟ್ಟಿಗರು ಸಿಡಿದೆದ್ದಿದ್ದಾರೆ. ಈ ಮದ್ಯೆ ಕರಣ್ ಟ್ವಿಟ್ಟರ್ ನಲ್ಲಿ 8 ಮಂದಿಯನ್ನು ಉಳಿದೆಲ್ಲ ಕಲಾವಿದರನ್ನು ಅನ್ ಫಾಲೋ ಮಾಡಿದ್ದಾರೆ. ಕರಣ್ ಈ ನಡೆ ಬಾಲಿವುಡ್ ನಲ್ಲಿ ಅಚ್ಚರಿ ಮೂಡಿಸಿದೆ.

  ಕರಣ್ ಹಿಂಬಾಲಿಸುತ್ತಿರುವ ಸೆಲೆಬ್ರಿಟಿಗಳಿವರು

  ಕರಣ್ ಹಿಂಬಾಲಿಸುತ್ತಿರುವ ಸೆಲೆಬ್ರಿಟಿಗಳಿವರು

  ಕರಣ್ ಜೋಹರ್ ಸಾಕಷ್ಟು ಸೆಲೆಬ್ರಿಟಿಗಳನ್ನು ಫಾಲೋ ಮಾಡುತ್ತಿದ್ದರು. ಆದರೀಗ ಬಾಲಿವುಡ್ ಸ್ಟಾರ್ಸ್ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಅಕ್ಷಯ್ ಕುಮಾರ್ ಅವರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಉಳಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಧರ್ಮ ಪ್ರೊಡಕ್ಷನ್ ಗೆ ಸಂಬಂಧಪಟ್ಟರು ಸೇರಿದ್ದಂತೆ ಕೇವಲ 8 ಮಂದಿಯನ್ನು ಮಾತ್ರ ಹಿಂಬಾಲಿಸುತ್ತಿದ್ದಾರೆ. ಉಳಿದೆಲ್ ಸೆಲೆಬ್ರಿಟಿಗಳನ್ನು ಅನ್ ಫಾಲೋ ಮಾಡಿದ್ದಾರೆ.

  ಸುಶಾಂತ್‌ಗಾಗಿ ಹುಡುಕುತ್ತಾ ಕಣ್ಣೀರಿಡುತ್ತಿದೆ ಅವರ ಮುದ್ದಿನ ನಾಯಿಸುಶಾಂತ್‌ಗಾಗಿ ಹುಡುಕುತ್ತಾ ಕಣ್ಣೀರಿಡುತ್ತಿದೆ ಅವರ ಮುದ್ದಿನ ನಾಯಿ

  ಅಲಿಯಾ ಭಟ್-ಕರಣ್ ವಿರುದ್ಧ ಆಕ್ರೋಶ

  ಅಲಿಯಾ ಭಟ್-ಕರಣ್ ವಿರುದ್ಧ ಆಕ್ರೋಶ

  ಅಲಿಯಾ ಭಟ್ ಮತ್ತು ಕರಣ್ ಜೋಹರ್ ಇಬ್ಬರು ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಸುಶಾಂತ್ ಸಿಂಗ್ ಅವರನ್ನು ಅಪಹಾಸ್ಯ ಮಾಡಿರುವ ವಿಡಿಯೋ ಈಗ ವೈರಲ್ ಆಗಿದ್ದು, ನೆಟ್ಟಿಗರಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಕಿರುತೆರೆಯಿಂದ ಬಂದ ನಟ ಎನ್ನುವ ಕಾರಣಕ್ಕೆ ಸುಶಾಂತ್ ಅವರನ್ನು ಬಾಲಿವುಡ್ ನ ಕೆಲವು ನಿರ್ಮಾಪಕರು ಮತ್ತು ಸ್ಟಾರ್ಸ್ ಸುಶಾಂತ್ ಅವರನ್ನು ಅವಮಾನ ಮಾಡಿರುವ ಬಗ್ಗೆ ಸಾಕಷ್ಟು ಸುದ್ದಿಗಳು ಹೊರಬರುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಅಲಿಯಾ, ಕರಣ್ ಸೇರಿದ್ದಂತೆ ಸಾಕಷ್ಟು ಮಂದಿಯನ್ನು ಅನ್ ಫಾಲೋ ಮಾಡುತ್ತಿದ್ದಾರೆ.

  ಸುಶಾಂತ್ ಸಾವಿನ ಪರಿಣಾಮ: 'ಬಾಲಿವುಡ್ ಕುಟುಂಬ'ಗಳ ಫಾಲೋವರ್ಸ್ ಸಂಖ್ಯೆ ಇಳಿಕೆಸುಶಾಂತ್ ಸಾವಿನ ಪರಿಣಾಮ: 'ಬಾಲಿವುಡ್ ಕುಟುಂಬ'ಗಳ ಫಾಲೋವರ್ಸ್ ಸಂಖ್ಯೆ ಇಳಿಕೆ

  ಸುಶಾಂತ್ ಪ್ರೇಯಸಿ ರಿಯಾ ಸುದೀರ್ಘ ವಿಚಾರಣೆ

  ಸುಶಾಂತ್ ಪ್ರೇಯಸಿ ರಿಯಾ ಸುದೀರ್ಘ ವಿಚಾರಣೆ

  ಸುಶಾಂತ್ ಸಿಂಗ್ ಪ್ರೇಯಸಿ ಎಂದು ಹೇಳಲಾಗುತ್ತಿರುವ ರಿಯಾ ಅವರನ್ನು ಸುದೀರ್ಘ ಕಾಲ ವಿಚಾರಣೆಗೆ ಒಳಪಡಿಸಲಾಗಿದೆ. ಸುಶಾಂತ್ ಜತೆಗಿನ ಸಂಬಂಧ ಮತ್ತು ಬ್ರೇಕಪ್, ಅವರ ಸಿನಿಮಾಗಳು, ಸುಶಾಂತ್ ಅವರಿಗಿದ್ದ ಮಾನಸಿಕ ಖಿನ್ನತೆ, ಅವರ ಮಾನಸಿಕ ಸ್ಥಿತಿ ಮುಂತಾದವುಗಳ ಬಗ್ಗೆ ಪೊಲೀಸರು ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ವರದಿಯಾಗಿದೆ.

  English summary
  Karan Johar unfollow all actors on twitter except 8 members. Karan Johar now following Akshay Kumar, Shahrukh Khan, Amitabh Bachchan and others.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X