ಶಾರುಖ್ ಸೇರಿ ಬಾಲಿವುಡ್ಡಿಗೆ ಬಾಲಿವುಡ್‌ನ್ನೇ ತಮ್ಮ ಇನ್‌ಸ್ಟಾಗ್ರಾಮ್‌ದಿಂದ ಹೊರ ಹಾಕಿದ ಕರಣ್ ಜೋಹರ್ -ಅವಳೇನು ಸ್ಪೆಷಲ್ಲಾ ?
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಚಿತ್ರರಂಗದ ತಾರೆಯರ ಸಂಬಂಧಕ್ಕೆ ಕೈಗನ್ನಡಿ ಹಿಡಿಯಲು ಸಾಮಾಜಿಕ ಜಾಲತಾಣವೊಂದೇ ಸಾಕು. ಲವ್-ಬ್ರೇಕಪ್ ಇಷ್ಟೇ ಯಾಕೆ ಅನೈತಿಕ ಸಂಬಂಧದ ಕುರುಹು ಈಗ ಹಲವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿಯೇ ಸಿಕ್ಕಿ ಬಿಡುತ್ತೆ. ಯಾರನ್ನು ಯಾರು ಫಾಲೋ ಮಾಡುತ್ತಿದ್ದಾರೆ, ಯಾರ ಪೋಸ್ಟ್‌ಗೆ ಯಾರು ಲೈಕ್ ಒತ್ತಿದ್ದಾರೆ ಎನ್ನುವುದೇ ಬ್ರೇಕಿಂಗ್ ನ್ಯೂಸ್ ಆಗಿರುವ ಕಾಲ ಇದು.
ಇಂತಹ ಕಾಲದಲ್ಲಿ ಬಾಲಿವುಡ್‌ನ ಪ್ರಖ್ಯಾತ ನಿರ್ಮಾಪಕ.. ನಿರ್ದೇಶಕ.. ಕರಣ್ ಜೋಹರ್ ಏಕಾಏಕಿ ಎಲ್ಲರನ್ನೂ ಅನ್ ಫಾಲೋ ಮಾಡಿದರೆ ಕೋಲಾಹಲ ಸೃಷ್ಟಿಯಾಗದಿರಲು ಹೇಗೆ ಸಾಧ್ಯ..?

ಹೌದು, ಅಸಲಿಗೆ ಕರಣ್ ಜೋಹರ್ ಮೊನ್ನೆ ಮೊನ್ನೆ ಸ್ವಚ್ಚ ಇನ್‌ಸ್ಟಾಗ್ರಾಮ್ ಅಭಿಯಾನ ಹಮ್ಮಿಕೊಂಡಿದ್ದರು. ಈ ಅಭಿಯಾನದಡಿ ಕರೀನಾ ಕಪೂರ್ ಖಾನ್.. ಮಲೈಕಾ ಅರೋರಾ.. ತಮ್ಮ ಆಪ್ತ ಡಿಸೈನರ್ ಮನೀಶ್ ಮಲ್ಹೋತ್ರಾ.. ಕಾರ್ತಿಕ್ ಆರ್ಯನ್ ಹೀಗೆ ಎಲ್ಲರನ್ನು ಅನ್ ಫಾಲೋ ಮಾಡಿದ್ದರು.
ಜಾಹ್ನವಿ ಕಪೂರ್.. ಆಲಿಯಾ ಭಟ್.. ಅನನ್ಯಾ ಪಾಂಡೆ.. ವರುಣ್ ಧವನ್.. ಸಿದ್ಧಾರ್ಥ್ ಮಲ್ಹೋತ್ರಾ.. ಹೀಗೆ ತಮ್ಮದೇ ಕ್ಯಾಂಪ್‌ನ ಸ್ಟಾರ್ ಕಿಡ್‌ಗಳನ್ನು ಕೂಡ ತಮ್ಮ ಇನ್‌ಸ್ಟಾಗ್ರಾಮ್‌ದಿಂದ ಹೊರ ಹಾಕಿದ್ದರು.
ಇಷ್ಟೇ ಯಾಕೆ.. ಬಾಲಿವುಡ್‌ನ ಕಿಂಗ್ ಖಾನ್ ಶಾರುಖ್ ಅವರನ್ನು ಕೂಡ ಕರಣ್ ಜೋಹರ್ ಅನ್‌ಫಾಲೋ ಮಾಡಿದ್ದರು. ಕರಣ್ ಜೋಹರ್ ಮತ್ತು ಶಾರುಖ್ ಖಾನ್ ಸಂಬಂಧ ಹೇಗಿದೆ ಎನ್ನುವುದು ಎಲ್ಲರಿಗೆ ಗೊತ್ತಿರುವ ವಿಚಾರವೇ. ಸಹೋದರರಂತೆ ಇದ್ದವರು ಇವರು ಇಬ್ಬರು.
ಈ ಹಿನ್ನೆಲೆ ಕರಣ್ ಜೋಹರ್ ಅವರ ಈ ನಡೆ ಹಲವರಲ್ಲಿ ಕುತೂಹಲ ಕೆರಳಿಸಿತ್ತು. ಇಡೀ ಬಾಲಿವುಡ್ಡಿಗೆ ಬಾಲಿವುಡ್ ಮೇಲೆಯೇ ಕರಣ್ ಜೋಹರ್ ಗೆ ಜಿಗುಪ್ಸೆ ಬಂದಿದೆಯಾ ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿತ್ತು. ಇದಕ್ಕೆ ಪೂರಕವಾಗಿ ಗ್ಲೋಬಲ್ ಸ್ಟಾರ್ ಪ್ರಿಯಾಂಕ ಚೋಪ್ರಾ ಅವರನ್ನು ಮಾತ್ರ ಕರಣ್ ಜೋಹರ್ ತಮ್ಮ ಇನ್‌ಸ್ಟಾದಲ್ಲಿ ಉಳಿಸಿಕೊಂಡಿದ್ದರು. ಇದರಿಂದ ಉರಿಯುವ ಬೆಂಕಿಗೆ ಇನ್ನು ತುಪ್ಪ ಸುರಿದಂತಾಗಿತ್ತು. ಊಹಾಪೋಹಗಳಿಗೆ ಕಾರಣವಾಗಿತ್ತು.

ಇದೀಗ ಈ ಅಂತೆ-ಕಂತೆಗಳಿಗೆಲ್ಲಾ ಖುದ್ದು ಕರಣ್ ಜೋಹರ್ ಬ್ರೇಕ್ ಹಾಕಿದ್ದಾರೆ. ಮಾಧ್ಯಮಗಳು ರಾಷ್ಟ್ರ ಮಟ್ಟದಲ್ಲಿ ಈ ವಿಚಾರವನ್ನು ದೊಡ್ಡ ಸುದ್ದಿಯನ್ನಾಗಿ ಮಾಡಿದ್ದಕ್ಕೆ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಪಷ್ಟೀಕರಣ ನೀಡಿರುವ ಕರಣ್ ಜೋಹರ್ ''ಇದೊಂದು ಕೇವಲ ಡಿಜಿಟಲ್ ಡಿಟಾಕ್ಸ್ ಅಷ್ಟೇ !!! ಸೋಶಿಯಲ್ ಮೀಡಿಯಾದಲ್ಲಿ ನನ್ನ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡುವುದನ್ನು ಕಡಿಮೆ ಮಾಡಿಕೊಳ್ಳಲು ನಾನು ಎಲ್ಲರನ್ನೂ ಅನ್‌ಫಾಲೋ ಮಾಡುತ್ತಿದ್ದೇನೆ, ಅಷ್ಟೇ''!! ಎಂದು ಬರೆದುಕೊಂಡಿದ್ದಾರೆ.
ಮುಂದುವರೆದು ''ದೇವ್ರಾಣೆ.. ಇದು ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುವ ವಿಷಯ ಅಲ್ಲ.ದಯಮಾಡಿ ಬೇರೆ ಯಾವುದಾದರೂ ಕ್ಲಿಕ್ ಬೈಟ್ ಸುದ್ದಿ ಹುಡುಕಿಕೊಳ್ಳಿ. ಜನರನ್ನು ಸೆಳೆಯಲು ಈ ತರಹದ ಕೆಲಸ ಮಾಡಬೇಡಿ. ಇದು ತೀರಾ ಅಪ್ರಸ್ತುತ ವಿಷಯ ಎಂದು ಮಾಧ್ಯಮವರ ವಿರುದ್ಧ ಕಿಡಿ ಕಾರಿದ್ದಾರೆ.
ಈ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ 'ಅನ್‌ಫಾಲೋ' ಮಾಡಿದ ಮಾತ್ರಕ್ಕೆ, ಸಂಬಂಧ ಹಾಳಾಗಿದೆ ಎಂದು ಅರ್ಥ ಅಲ್ಲ, ಅದು ಕೇವಲ ಮಾನಸಿಕ ನೆಮ್ಮದಿಗೆ ತೆಗೆದುಕೊಂಡ ನಿರ್ಧಾರ ಎನ್ನುವುದನ್ನು ಕರಣ್ ಜೋಹರ್ ಸೂಚ್ಯವಾಗಿ ಹೇಳಿದ್ದಾರೆ. ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಮೇಲೆ ಜನಸಾಮಾನ್ಯರಿಗಿರುವ ಅತಿಯಾದ ಕುತೂಹಲಕ್ಕೂ ಕೂಡ ಕರಣ್ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ಧಾರೆ.
ಇನ್ನು ಆಗಲೇ ಹೇಳಿದಂತೆ ಪ್ರಿಯಾಂಕ ಚೋಪ್ರಾ ಅವರನ್ನು ಕರಣ್ ಜೋಹರ್ ಅನ್ ಫಾಲೋ ಮಾಡಿಲ್ಲ. ಈ ವಿಚಾರವನ್ನು ಮುಂದಿಟ್ಕೊಂಡು ಸದ್ಯ ಹಲವರು ಕರಣ್ ಜೋಹರ್ ಅವರ ಕಾಲೆಳೆಯುತ್ತಿದ್ದಾರೆ. ಪ್ರಿಯಾಂಕ ಚೋಪ್ರಾ ಅವರೇನು ಅಪ್ಸರೆನಾ..? ಅವರನ್ನು ಮಾತ್ರ ಯಾಕೆ ಫಾಲೋ ಮಾಡ್ತಿದ್ದೀರಾ ಎಂಬ ಪ್ರಶ್ನೆಯನ್ನು ಕೇಳುತ್ತಿದ್ಧಾರೆ. ಕರಣ್ ಜೋಹರ್ ಈ ಪ್ರಶ್ನೆಗೆ ಉತ್ತರ ಇನ್ನೂ ಕೊಡಬೇಕಿದೆ.



Click it and Unblock the Notifications