For Quick Alerts
  ALLOW NOTIFICATIONS  
  For Daily Alerts

  ಮದುವೆಗೆ ಕರೆದಿಲ್ಲವೆಂದು ಸಿಟ್ಟು ಮಾಡಿಕೊಂಡಿದ್ದ ಕರಣ್ ಜೋಹರ್!

  |

  ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್, ಬಾಲಿವುಡ್‌ನ ಗಾಸಿಪ್ ಕಿಂಗ್. ಬಾಲಿವುಡ್‌ನ ಯಾವ ನಟ, ಯಾವ ನಟಿಯೊಂದಿಗೆ ಪ್ರೀತಿಯಲ್ಲಿದ್ದಾರೆ, ಯಾರು ಸಿಂಗಲ್, ಯಾರು ಮಿಂಗಲ್ ಎಲ್ಲ ಮಾಹಿತಿಯೂ ಅವರ ಬಳಿ ಇರುತ್ತದೆ. ಬಾಲಿವುಡ್‌ನ ಯಾವುದೇ ಪಾರ್ಟಿ, ಮದುವೆ ಆದರೂ ಅವರ ಹಾಜರಿ ಪಕ್ಕ.

  ಬಾಲಿವುಡ್‌ನ ಬಹುತೇಕ ಸ್ಟಾರ್ ನಟರೊಂದಿಗೆ ಆಪ್ತ ಸಂಬಂಧ ಹೊಂದಿದ್ದಾರೆ ಕರಣ್. ಅದೇ ಕಾರಣಕ್ಕೆ ಅವರಿಗೆ ಬಹುತೇಕ ಎಲ್ಲ ಬಾಲಿವುಡ್ ಮಂದಿಯ ಖಾಸಗಿ ಕಾರ್ಯಕ್ರಮಗಳಿಗೆ ಆಹ್ವಾನ ಇದ್ದೇ ಇರುತ್ತದೆ.

  ಆದರೆ ಬಾಲಿವುಡ್ ನ ತಾರಾ ಜೋಡಿಯೊಂದು ಕರಣ್ ಅನ್ನು ತಮ್ಮ ಮದುವೆಗೆ ಕರೆದಿರಲಿಲ್ಲ. ಇದು ಬಾಲಿವುಡ್ ಮೀಡಿಯಾಗೆ ತುಸು ಆಶ್ಚರ್ಯ ಉಂಟುಮಾಡಿತ್ತು. ಸ್ವತಃ ಕರಣ್ ಜೋಹರ್‌ಗೆ ಸಹ.

  ಕಳೆದ ವರ್ಷ ವಿವಾಹವಾದ ತಾರಾ ಜೋಡಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರುಗಳು ತಮ್ಮ ಮದುವೆಗೆ ಕರಣ್ ಜೋಹರ್ ಅನ್ನು ಕರೆದಿರಲಿಲ್ಲ. ಅಸಲಿಗೆ ಇವರಿಬ್ಬರಿಗೂ ಕರಣ್ ಜೊತೆ ಸ್ನೇಹ ಹೊಂದಿರುವವರೇ ಆಗಿದ್ದರು.

  ಈ ಬಗ್ಗೆ ತಮ್ಮ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಕರಣ್ ಜೋಹರ್, ವಿಕ್ಕಿ ಹಾಗೂ ಕತ್ರಿನಾ ತಮ್ಮ ಮದುವೆಗೆ ನನ್ನನ್ನು ಕರೆಯದೇ ಹೋದದ್ದು ನನಗೆ ಬೇಸರ ತರಿಸಿತ್ತು ಎಂದಿದ್ದಾರೆ.

  ಇಬ್ಬರೂ ನನಗೆ ಪರಿಚಿತರೇ. ಹಾಗಾಗಿ ನನಗೆ ಆಹ್ವಾನ ಬರುತ್ತದೆ ಎಂದುಕೊಂಡಿದ್ದೆ ಆದರೆ ಆಹ್ವಾನ ಬರಲಿಲ್ಲ. ಅದು ನನಗೆ ಬೇಸರ ತರಿಸಿತು. ನನ್ನನ್ನು ಒಂಟಿ ಮಾಡಿದ ಅನುಭವ ಕಾಡಿತು ಎಂದಿದ್ದಾರೆ.

  ಆದರೆ ನನಗೆ ಮಾತ್ರವಲ್ಲ‌ ನಿರ್ದೇಶಕ ಅನುರಾಗ್ ಕಶ್ಯಪ್ ಗೆ ಸಹ ಆಹ್ವಾನ ಹೋಗಿಲ್ಲ ಎಂಬುದು ಗೊತ್ತಾದ ಬಳಿಕ ನನಗೆ ಸಮಾಧಾನವಾಯಿತು ಎಂದಿದ್ದಾರೆ.

  ಅಸಲಿಗೆ, ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಪ್ರೇಮಕ್ಕೆ ಬುನಾದಿ ಹಾಕಿದ್ದೆ ಕರಣ್ ಜೋಹರ್. ತಮ್ಮ ಕಾಫಿ ವಿತ್ ಕರಣ್ ಶೋನಲ್ಲಿ ಕತ್ರಿನಾ ಅತಿಥಿಯಾಗಿ ಭಾಗವಹಿಸಿದ್ದಾಗ ನಿಮಗೆ ಯಾವ ಯುವ ನಟ ಹ್ಯಾಂಡ್ಸಮ್ ಎನ್ನಿಸುತ್ತಾರೆ ಎಂದು ಕರಣ್ ಪ್ರಶ್ನಿಸಿದ್ದರು. ಆಗ ಕತ್ರಿನಾ, ವಿಕ್ಕಿ‌ ಕೌಶಲ್ ಹೆಸರು ಹೇಳಿದ್ದರು.

  ಬಳಿಕ ವಿಕ್ಕಿ ಕೌಶಲ್, ಅದೇ ಶೋಗೆ ಅತಿಥಿಯಾಗಿ ಬಂದಾಗ ಕತ್ರಿನಾ, ವಿಕ್ಕಿ ಬಗ್ಗೆ ಹೇಳಿದ್ದ ಮಾತುಗಳನ್ನು ಕೇಳಿಸಲಾಯ್ತು, ತನ್ನ ಬಗ್ಗೆ ಕತ್ರಿನಾ ಕೈಫ್ ಹೇಳಿರುವ ಮಾತುಗಳು ಕೇಳಿ ವಿಕ್ಕಿ ಫಿದಾ ಆಗಿದ್ದರು. ಆ ಬಳಿಕವೇ ಅವರಿಬ್ಬರ ಪ್ರೇಮಕತೆ ಶುರುವಾದದ್ದು. ಕೊನೆಗೆ ಇಬ್ಬರೂ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ರಾಜಸ್ಥಾನದಲ್ಲಿ ಅದ್ಧೂರಿಯಾಗಿ ವಿವಾಹವಾದರು.

  ಇದೀಗ ವಿಕ್ಕಿ ಹಾಗೂ ಕತ್ರಿನಾ ಜಂಟಿಯಾಗಿ ಕಾಫಿ ವಿತ್ ಕರಣ್ ಶೋಗೆ ಅತಿಥಿಯಾಗಿ ಆಗಮಿಸಿದ್ದಾರೆ. ತಮ್ಮಿಬ್ಬರ ಬಗ್ಗೆ ಹಲವು ವಿಷಯಗಳನ್ನು ಮಾತನಾಡಿದ್ದಾರೆ. ಜೊತೆಗೆ ಕೆಲವು ಗೇಮ್‌ಗಳನ್ನು ಸಹ ಆಡಿದ್ದಾರೆ.

  English summary
  Karan Johar was upset when Katrina Kaif and Vicky Kaushal not invited him for their wedding. He talks about it in Koffee with Karan show.
  Friday, September 30, 2022, 13:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X