ಕೊರೊನಾ ಇದ್ದರೂ ಪಾರ್ಟಿಗಳಲ್ಲಿ ಭಾಗವಹಿಸಿದ ಕರೀನಾ, ಅಮೃತ್ ಅರೋರ!

ಬಾಲಿವುಡ್ ನಟಿ ಕರೀನಾ ಕಪೂರ್ ಹಾಗೂ ಅಮೃತ್ ಅರೋರಾ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ.

ಕೊರೊನಾ ಪಾಸಿಟಿವ್ ಆಗಿದ್ದರೂ ಸಹ ಈ ನಟಿಯರು ಕೊರೊನಾ ನಿಯಮ ಉಲ್ಲಂಘಿಸಿ ವಿವಿಧ ಪಾರ್ಟಿಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ಬಿಎಂಸಿ ಆರೋಪಿಸಿದೆ. ಈ ನಟಿಯರ ಸಂಪರ್ಕಕ್ಕೆ ಬಂದವರು ಕೂಡಲೇ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮುಂಬೈ ಬೃಹತ್ ನಗರಪಾಲಿಕೆ ಆದೇಶ ಮಾಡಿದೆ.

ಜ್ವರ, ನೆಗಡಿ ಇತರೆ ಕೊರೊನಾ ಲಕ್ಷಣಗಳಿರುವ ವ್ಯಕ್ತಿ ಐಸೋಲೇಶನ್‌ಗೆ ಒಳಗಾಗಬೇಕು ಎಂದು ಬಿಎಂಸಿ ಆದೇಶ ಹೊರಡಿಸಿದೆ. ಹಾಗಿದ್ದರೂ ಈ ನಟಿಯರು ಕಳೆದ ಒಂದು ವಾರದಿಂದ ಹಲವು ಪಾರ್ಟಿಗಳಿಗೆ ಹಾಜರಾಗಿದ್ದಾರೆ.

Kareena Kapoor Amruth Arora Tested COVID 19 Positive

ಆತ್ಮೀಯ ಸ್ನೇಹಿತೆಯರಾಗಿರುವ ಕರೀನಾ ಕಪೂರ್ ಹಾಗೂ ಅಮೃತ್ ಅರೋರಾ, ತಮ್ಮ ಅಕ್ಕಂದಿರಾದ ಮಲೈಕಾ ಅರೋರಾ ಹಾಗೂ ಕರಿಶ್ಮಾ ಕಪೂರ್ ಅವರೊಟ್ಟಿಗೆ ರಿಯಾ ಕಪೂರ್ ಮನೆಯಲ್ಲಿ ಕ್ರಿಸ್‌ಮಸ್ ಪಾರ್ಟಿ ಮಾಡಿದ್ದರು. ಅದರ ಬಳಿಕ ಕರಣ್ ಜೋಹರ್ ಮನೆಯಲ್ಲಿ ವೀಕೆಂಡ್ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ಆಲಿಯಾ ಭಟ್, ಅರ್ಜುನ್ ಕಪೂರ್ ಹಾಗೂ ರಣ್ಬೀರ್ ಕಪೂರ್ ಸಹ ಪಾಲ್ಗೊಂಡಿದ್ದರು.

ಕರೀನಾ ಕಪೂರ್‌ ಹಾಗೂ ಅಮೃತ್ ಅರೋರಾ ಸಂಪರ್ಕಕ್ಕೆ ಬಂದವರೆಲ್ಲೆರೂ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಬೇಕಿದೆ. ಜೊತೆಗೆ ಕರೀನಾ ಕಪೂರ್ ಪತಿ ಸೈಫ್ ಅಲಿ ಖಾನ್ ಸಹ. ಕರೀನಾಗೆ ಇಬ್ಬರು ಪುಟ್ಟ ಮಕ್ಕಳಿದ್ದು, ಇಂಥ ಸಮಯದಲ್ಲಿ ಹೀಗೆ ಅಜಾಗರೂಕತೆ ವಹಿಸಿರುವುದು ಸರಿಯಲ್ಲ ಎಂದು ನೆಟ್ಟಿಗರು ಕರೀನಾಗೆ ತಪರಾಕಿ ಹಾಕಿದ್ದಾರೆ.

ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಕರೀನಾ ಕಪೂರ್ ಹಾಗೂ ಅಮೃತ್ ಅರೋರಾ ವಿರುದ್ಧ ಬಿಎಂಸಿ ಕ್ರಮ ಕೈಗೊಳ್ಳುವ ಸಾಧ್ಯತೆಯೂ ಇದೆ.

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಬಾಲಿವುಡ್ ನಟಿ, ಗಾಯಕಿ ಕನ್ನಿಕಾ ಕಪೂರ್ ಹೀಗೆಯೇ ಕೋವಿಡ್ ನಿಯಮ ಉಲ್ಲಂಘಿಸಿ ಪಾರ್ಟಿ ಮಾಡಿದ್ದರು. ಆ ಪಾರ್ಟಿಯಲ್ಲಿ ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೆ, ಸಂಸದ ದುಶ್ಯಂತ್ ಸಿಂಗ್, ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್ ಪಾಲ್ಗೊಂಡಿದ್ದರು. ನಂತರ ಕನ್ನಿಕಾ ಕೋವಿಡ್ ಪರೀಕ್ಷೆ ಮಾಡಲಾಗಿ ಅವರ ವರದಿ ಪಾಸಿಟಿವ್ ಬಂದಿತು. ಅಷ್ಟರಲ್ಲಾಗದೆ ಕನ್ನಿಕಾ ಕಪೂರ್ ಜೊತೆ ಪಾರ್ಟಿ ಮಾಡಿದ್ದ ದುಶ್ಯಂತ್ ಸಿಂಗ್ ಲೋಕಸಭೆ ಅಧಿವೇಶನಕ್ಕೆ ಹೋಗಿಬಿಟ್ಟಿದ್ದರು. ಅಲ್ಲಿ ರಾಷ್ಟ್ರಪತಿಗಳನ್ನು ಸಹ ಭೇಟಿ ಮಾಡಿದ್ದರು. ಹಾಗಾಗಿ ರಾಷ್ಟ್ರಪತಿಗಳು ಸೇರಿದಂತೆ ದುಶ್ಯಂತ್ ಸಿಂಗ್ ಭೇಟಿ ಮಾಡಿದ ಎಲ್ಲರೂ ಐಸೋಲೇಶನ್‌ಗೆ ಒಳಗಾಗಿದ್ದರು. ಕನ್ನಿಕಾ ಕಪೂರ್‌ ವಿರುದ್ಧ ಬಿಎಂಸಿಯು ಪ್ರಕರಣ ದಾಖಲಿಸಿತು. ನಂತರ ಸಾಮಾಜಿಕ ಜಾಲತಾಣದ ಮೂಲಕ ಕನ್ನಿಕಾ ಕಪೂರ್ ಕ್ಷಮೆ ಯಾಚನೆ ಮಾಡಿದರು.

More from Filmibeat

English summary
BMC said actress Kareena Kapoor and Amritha Arora tested Coronavirus positive. still they attend some parties, so BMC ordered people who came in contant with these actress should under go RT-PCR test.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X