ಮಗುವಿಗೆ ಜನ್ಮ ನೀಡಿ ತಿಂಗಳಲ್ಲೇ ಮತ್ತೆ ಬಣ್ಣ ಹಚ್ಚಿದ ಕರೀನಾ: ಅವಶ್ಯಕತೆ ಏನಿತ್ತು ಎಂದ ನೆಟ್ಟಿಗರು
ಬಾಲಿವುಡ್ ನಟಿ ಕರೀನಾ ಕಪೂರ್ ಎರಡನೇ ಮುಗುವಿಗೆ ಜನ್ಮ ನೀಡಿದ ಬಳಿಕ ಮೊದಲ ಬಾರಿಗೆ ಕೆಲಸಕ್ಕೆ ಮರಳಿದ್ದಾರೆ. ಫೆಬ್ರವರಿ 21ರಂದು ಎರಡನೇ ಮಗುವಿಗೆ ಜನ್ಮ ನೀಡಿದ ಕರೀನಾ ಒಂದು ತಿಂಗಳ ನಂತರ ಸಿನಿಮಾ ಕೆಲಸಕ್ಕೆ ಹಾಜರಾಗಿದ್ದಾರೆ.
ವೈಯಕ್ತಿಕ ಮತ್ತು ವೃತ್ತಿ ಬದುಕು ಎರಡನ್ನು ನಿಭಾಯಿಸಿಕೊಂಡು ಬರುತ್ತಿರುವ ನಟಿ ಕರೀನಾ ಈಗ ಎರಡು ಮುದ್ದಾದ ಮಕ್ಕಳ ತಾಯಿಯಾಗಿದ್ದಾರೆ. ಮೊದಲ ಮಗುವಿಗೆ ಜನ್ಮ ನೀಡಿದಾಗಲೂ ಕರೀನಾ ಬಹುಬೇಗ ಕೆಲಸಕ್ಕೆ ಹಾಜರಾಗಿದ್ದರು. ಇದೀಗ 2ನೇ ಮಗು ಜನಿಸಿ ಒಂದೇ ತಿಂಗಳಿಗೆ ಮತ್ತೆ ಬಣ್ಣ ಹಚ್ಚಿದ್ದಾರೆ.
ಇನ್ನು ಮಗುವಿಗೆ ಜನ್ಮ ನೀಡಿದ ಬಳಿಕ ಕರೀನಾ ಮತ್ತೆ ತೂಕ ಇಳಿಸುವ ಕಡೆ ಗಮನ ಕೊಟ್ಟಿದ್ದು, ಇತ್ತೀಚಿಗೆ ಜಾಗಿಂಗ್ ಶೋಗಳ ಫೋಟೋ ಹಂಚಿಕೊಂಡಿದ್ದರು. ಸದ್ಯ ಶೂಟಿಂಗ್ ಗೆ ಮರಳಿರುವ ಕರೀನಾ ಅಡುಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸೆಲೆಬ್ರಿಟಿ ಅಡುಗೆ ಶೋ ಇದಾಗಿದ್ದು, ಕರೀನಾ ಕೂಡ ಅಡುಗೆಗೆ ಸಿದ್ಧರಾಗಿ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಕರಿನಾ ಮಗುವಿಗೆ ಜನ್ಮ ನೀಡಿ ಒಂದು ತಿಂಗಳಲ್ಲೇ ಕೆಲಸಕ್ಕೆ ಮರಳಿರುವುದನ್ನು ನೋಡಿ ಅನೇಕರು ಸಂತಸ ಪಟ್ಟರೆ ಇನ್ನು ಕೆಲವರು ಇಷ್ಟು ಬೇಗ ಕೆಲಸಕ್ಕೆ ಬರುವ ಅವಶ್ಯಕತೆ ಏನಿತ್ತು ಪ್ರಶ್ನಿಸುತ್ತಿದ್ದಾರೆ. ಮಾತೃತ್ವ ರಜೆಯನ್ನು ಏಕೆ ಆನಂದಿಸುತ್ತಿಲ್ಲ, ಬೇರೆಯವರಿಗೆ ಅವಕಾಶ ನೀಡಬಹುದಲ್ವಾ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಕರೀನಾ ಕಪೂರ್ 2012ರಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 2016ರಲ್ಲಿ ಕರೀನಾ ಮೊದಲ ಮಗು ತೈಮೂರ್ ಅಲಿ ಖಾನ್ ಗೆ ಜನ್ಮ ನೀಡಿದ್ದಾರೆ. ಫೆಬ್ರವರಿ 21ಕ್ಕೆ ಎರಡನೇ ಬಾರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ಕರೀನಾ ದಂಪತಿ ಎರಡನೇ ಮಗುವಿಗೆ ಏನೆಂದು ಹೆಸರಿಡಲಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲ.


Click it and Unblock the Notifications











