For Quick Alerts
  ALLOW NOTIFICATIONS  
  For Daily Alerts

  ಇಮ್ರಾನ್ ಖಾನ್ ಜೊತೆ ಕರೀನಾ ಕಪೂರ್ ಹೋಳಿ

  By Rajendra
  |

  ಮದುವೆ ಬಳಿಕ ತಾರೆ ಕರೀನಾ ಕಪೂರ್ ಗೆ ಗಂಡನೊಂದಿಗೆ ರಸಮಯ ಕ್ಷಣಗಳನ್ನು ಕಳೆಯಲು ಟೈಮೇ ಸಿಗುತ್ತಿಲ್ಲವಂತೆ. ಅತ್ತ ಸೈಫ್ ಆಲಿ ಖಾನ್ ಹಾಗೂ ಇತ್ತ ಕರೀನಾ ತಮ್ಮ ತಮ್ಮ ಚಿತ್ರಗಳಲ್ಲಿ ಬಿಜಿಯಾಗಿರುವುದೇ ಇದಕ್ಕೆ ಕಾರಣ.

  ಇನ್ನೇನು ಮಾರ್ಚ್ 27ಕ್ಕೆ ಬಣ್ಣದ ಹಬ್ಬ ಹೋಳಿ. ಈ ಬಾರಿಯ ಹೋಳಿ ಹಬ್ಬದ ಸಂಭ್ರಮಕ್ಕೆ ತಮ್ಮ ಪತಿಯೊಂದಿಗೆ ಇರಲ್ಲವಂತೆ ಕರೀನಾ. ಹಾಗಿದ್ದರೆ ಇನ್ಯಾರ ಜೊತೆ ಹಬ್ಬವನ್ನು ಆಚರಿಸುತ್ತಾರೆ? ಈ ಪ್ರಶ್ನೆಗೆ ಸ್ವತಃ ಕರೀನಾ ಅವರೇ ಉತ್ತರಿಸಿದ್ದಾರೆ.

  ಪುನಿತ್ ಮಲ್ಹೋತ್ರಾ ನಿರ್ದೇಶಿಸುತ್ತಿರುವ 'ಗೋರಿ ತೇರೆ ಪ್ಯಾರ್ ಮೇ' ಎಂಬ ಚಿತ್ರದಲ್ಲಿ ಕರೀನಾ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ನಾಯಕ ನಟ ಇಮ್ರಾನ್ ಖಾನ್. ಇನ್ನೊಂದು ಕಡೆ 'ಬುಲ್ಲೆಟ್ ರಾಜ' ಚಿತ್ರದಲ್ಲಿ ಸೈಫ್ ಆಲಿ ಖಾನ್ ಬಿಜಿ.

  ಹಾಗಾಗಿ ಈ ಬಾರಿಯ ಹೋಳಿ ಇಮ್ರಾನ್ ಖಾನ್ ಜೊತೆಗೆ ಎನ್ನುತ್ತಿದ್ದಾರೆ ಕರೀನಾ. ಅತ್ತ ಸೈಫ್ ಕೂಡ ಅಷ್ಟೇ 'ಬುಲ್ಲೆಟ್ ರಾಜ' ಚಿತ್ರದ ನಾಯಕಿ ಸೋನಾಕ್ಷಿ ಸಿನ್ಹಾ ಜೊತೆ ಹೋಳಿ ಆಡಲಿದ್ದಾರೆ. ಇದೇನು ಕಥೆನೋ ಏನೋ ಬಣ್ಣದ ಬದುಕು ಎಂದರೆ ಇದೇನಾ.

  "ಇದರಲ್ಲೇನು ವಿಶೇಷ ಇಲ್ಲ ಬಿಡಿ. ಕಲಾವಿದರು ಎಂದ ಮೇಲೆ ಬದುಕು ಹೀಗೇ ಇರುತ್ತದೆ. ಮದುವೆ ಬಳಿಕ ಕರೀನಾ ಬದಲಾಗುತ್ತಾರೆ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿ ಅಷ್ಟೇ. ನಾನು ಬದಲಾಗಲ್ಲ. ನಟಿಯಾಗಿ ಇರಲು ಇಷ್ಟಪಡುತ್ತೇನೆ. ಅಭಿಮಾನಿಗಳು ನನ್ನನ್ನು ಎಷ್ಟು ದಿನ ತೆರೆಯ ಮೇಲೆ ನೋಡಲು ಇಷ್ಟಪಡುತ್ತಾರೋ ಅಷ್ಟು ದಿನವೂ ಅಭಿನಯಿಸುತ್ತೇನೆ..."

  "ಬಾಲನಟಿಯಾಗಿ ಚಿತ್ರರಂಗಕ್ಕೆ ಅಡಿಯಿಟ್ಟ ನಾನು ಕಲಾವಿದೆಯಾಗಿಯೇ ಸಾಯಲು ಇಷ್ಟಪಡುತ್ತೇನೆ. ಚಿತ್ರೀಕರಣದಲ್ಲೇ ಹಾಯಾಗಿ ಪ್ರಾಣ ಬಿಡಬೇಕೆಂದಿದ್ದೇನೆ" ಎಂದಿದ್ದಾರೆ. (ಏಜೆನ್ಸೀಸ್)

  English summary
  This time actress Kareena Kapoor would be celebrating Holi (27th March) with Imran Khan. Because she would be shooting for Karan Johar's film. Saif will be in Lucknow for shooting of Bullet Raja.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X