For Quick Alerts
  ALLOW NOTIFICATIONS  
  For Daily Alerts

  ಮಾಲ್ಡೀವ್ಸ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಕರೀನಾ ಕಪೂರ್

  |

  ಬಾಲಿವುಡ್​ ಸ್ಟಾರ್ ನಟಿ ಕರೀನಾ ಕಪೂರ್​ ಖಾನ್​ ಅವರಿಗೆ ಇಂದು (ಸೆಪ್ಟಂಬರ್ 21) ಜನ್ಮದಿನದ ಸಂಭ್ರಮ. ಕರೀನಾ ಕಪೂರ್ ಕುಟುಂಬದವರ ಜೊತೆ ಅವರು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. 41ನೇ ವಸಂತಕ್ಕೆ ಕಾಲಿಟ್ಟಿರುವ ಕರೀನಾಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳಿಂದ ಶುಭಶಯಗಳ ಕೋರುತ್ತಿದ್ದಾರೆ.

  ಕರೀನಾಗೆ ಕರಣ್​ ಜೋಹರ್​, ಮಲೈಕಾ ಅರೋರಾ, ರಾಕುಲ್​ ಪ್ರೀತ್​ ಸಿಂಗ್​, ವಿವೇಕ್​ ಒಬೆರಾಯ್​, ಕಂಗನಾ ರಣಾವತ್​ ಮುಂತಾದವರು ಕರೀನಾಗೆ ವಿಶ್​ ಮಾಡಿದ್ದಾರೆ. "ಎಲ್ಲರಿಗಿಂತ ಹೆಚ್ಚು ಸುಂದರವಾಗಿರುವ ಕರೀನಾಗೆ ಹುಟ್ಟುಹಬ್ಬದ ಶುಭಾಶಯಗಳು" ಎಂದು ಕಂಗನಾ ಶುಭಕೋರಿದ್ದಾರೆ.

  ಬಾಲಿವುಡ್‌​ನಲ್ಲಿ ಇಂದಿಗೂ ಬೇಡಿಕೆ ಉಳಿಸಿಕೊಂಡಿರುವ ಕರೀನಾ ಸದ್ಯ 'ಲಾಲ್​ ಸಿಂಗ್​ ಚಡ್ಡಾ' ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಆಮೀರ್​ ಖಾನ್‌ಗೆ ಜೊತೆ ತೆರೆಹಂಚಿಕೊಂಡಿದ್ದಾರೆ. ಈ ಸಿನಿಮಾ ಬಳಿಕ ಎರಡನೇ ಮಗನ ಆರೈಕೆಯಲ್ಲಿ ಬ್ಯುಸಿಯಾಗಿರುವ ಕರೀನಾ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಸದ್ಯ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪತಿ ಸೈಫ್​ ಅಲಿ ಖಾನ್ ಮತ್ತು ಇಬ್ಬರು ಮಕ್ಕಳ ಜೊತೆ​ ಜೊತೆಗೆ ಮಾಲ್ಡೀವ್ಸ್​ಗೆ ತೆರಳಿದ್ದಾರೆ.

  ಸೆಲೆಬ್ರಿಟಿಗಳ ಫೇವರಿಟ್​ ತಾಣ ಮಾಲ್ಡೀವ್ಸ್​. ಅಲ್ಲಿನ ಕಡಲ ತೀರದಲ್ಲಿ ಎಂಜಾಯ್​ ಮಾಡೋದು ಎಂದರೆ ಭಾರತೀಯ ಸೆಲೆಬ್ರಿಟಿಗಳಿಗೆ ಸಖತ್​ ಇಷ್ಟ. ಸೈಫ್​ ಅಲಿ ಖಾನ್​ ಮತ್ತು ಮಕ್ಕಳ ಜೊತೆ ಮಾಲ್ಡೀವ್ಸ್​ಗೆ ಹೋಗಿರುವ ಕರೀನಾ ಕಪೂರ್​ ಅವರು ಅಲ್ಲಿಯೇ ಈ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಲ್ಲಿನ ಸುಂದರ ಕ್ಷಣದ ಫೋಟೋಗಳನ್ನು ಅವರು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಸೈಫ್​-ಕರೀನಾ ಆಪ್ತವಾಗಿರುವ ಈ ಫೋಟೋಗಳು ಅವರ ಅಭಿಮಾನಿಗಳ ವಲಯದಲ್ಲಿ ವೈರಲ್​ ಆಗುತ್ತಿವೆ.

  ಮಾಲ್ಡೀವ್ಸ್​ನಲ್ಲಿ ಕಾಲ ಕಳೆಯುತ್ತಿರುವ ಕರೀನಾ-ಸೈಫ್​ ಜೊತೆ ಮಕ್ಕಳಾದ ತೈಮೂರ್​ ಅಲಿ ಖಾನ್​ ಮತ್ತು ಜಹಾಂಗೀರ್​ ಅಲಿ ಖಾನ್ ಖಾನ್​ ಕೂಡ ಸಾಥ್​ ನೀಡಿದ್ದಾರೆ. ಅಂದಹಾಗೆ ಸೈಫ್ ಹುಟ್ಟುಹಬ್ಬವನ್ನು ಸಹ ಮಾಲ್ಡೀವ್ಸ್ ನಲ್ಲಿ ಆಚರಣೆ ಮಾಡಿದ್ದರು. ಸೈಫ್ ಮತ್ತು ಕರೀನಾ ಮಕ್ಕಳ ಜೊತೆಗೆ ಸೈಫ್ ಮೊದಲ ಪತ್ನಿಯ ಮಕ್ಕಳು ಸಹ ಸೈಫ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು.

  ಒಂದಿಲ್ಲೊಂದು ಕಾರಣಕ್ಕೆ ಕರೀನಾ ಸುದ್ದಿ ಆಗುತ್ತಲೇ ಇರುತ್ತಾರೆ. ಇತ್ತೀಚೆಗೆ ಅವರ ಮನೆಯಲ್ಲಿ ಗಣೇಶ ಚತುರ್ಥಿ ಹಬ್ಬ ಆಚರಿಸಲಾಗಿತ್ತು. ಈ ವೇಳೆ ಗಣೇಶನ ವಿಗ್ರಹಕ್ಕೆ ಸೈಫ್​ ಮತ್ತು ಮಕ್ಕಳು ಕೈ ಮುಗಿಯುತ್ತಿರುವ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ಫೋಟೋಗಳಿಗೆ ಕೆಲವರು ನೆಗೆಟಿವ್​ ಕಮೆಂಟ್​ ಮಾಡಿದ್ದರು. ಮುಸ್ಲಿಂ ವ್ಯಕ್ತಿ ಆಗಿರುವ ಸೈಫ್​ ಹಿಂದೂ ದೇವರಿಗೆ ಕೈಮುಗಿದಿರುವುದು ಸರಿಯಲ್ಲ ಎಂದು ಒಂದು ವರ್ಗದ ನೆಟ್ಟಿಗರು ಕಿಡಿಕಾರಿದ್ದರು. ಆದರೆ ಕರೀನಾ ದಂಪತಿ ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ.

  ಸೈಫ್ ಸದ್ಯ 'ಆದಿಪುರುಷ್', 'ಬಂಟಿ ಔಟ್​ ಬಬ್ಲಿ 2' ಮುಂತಾದ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ನಟಿಸಿದ 'ಭೂತ್​ ಪೊಲೀಸ್​' ಚಿತ್ರ ಇತ್ತೀಚೆಗೆ ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ ಮೂಲಕ ಬಿಡುಗಡೆ ಆಗಿದೆ.

  English summary
  Bollywood Actress Kareena Kapoor celebrates her 41st her birthday in maldives.
  Tuesday, September 21, 2021, 16:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X