For Quick Alerts
  ALLOW NOTIFICATIONS  
  For Daily Alerts

  ಸೀತೆಯಾಗಲು ನಟಿ ಕರೀನಾ ಕಪೂರ್ ಇಷ್ಟೊಂದು ಸಂಭಾವನೆ ಬೇಡಿಕೆ ಇಟ್ಟಿದ್ದಾರಾ?

  |

  ರಾಮಾಯಣ, ಮಹಾಭಾರತದ ಬಗ್ಗೆ ಸಾಕಷ್ಟು ಧಾರಾವಾಹಿಗಳು, ಸಿನಿಮಾಗಳು ಬಂದಿವೆ. ಆದರೂ ಜನರಿಗೆ ಅದರ ಬಗ್ಗೆ ಆಸಕ್ತಿ ಕಡಿಮೆ ಆಗಿಲ್ಲ. ಮತ್ತೆ ಮತ್ತೆ ತೆರೆಮೇಲೆ ನೋಡಲು ಇಷ್ಟ ಪಡುತ್ತಾರೆ. ಹಾಗಾಗಿಯೇ ಮಹಾಭಾರತ ಮತ್ತು ರಾಮಾಯಣದ ಮೇಲೆ ಸಿನಿಮಾಗಳು ಬರುತ್ತಲೇ ಇದೆ.

  ಈಗಾಗಲೇ ಬಾಲಿವುಡ್‌ನಲ್ಲಿ ಆದಿಪುರುಷ್ ಸಿನಿಮಾ ಸೆಟ್ಟೇರಿದ್ದು, ಸಾಕಷ್ಟು ಚಿತ್ರೀಕರಣ ಸಹ ಮುಗಿದಿದೆ. ಇದಲ್ಲದೆ ಬಾಲಿವುಡ್‌ನಲ್ಲಿ 3ಡಿ ರಾಮಾಯಣ ಮಾಡುವ ಬಗ್ಗೆ ಎರಡು-ಮೂರು ವರ್ಷಗಳಿಂದ ಮಾತು ಕೇಳಿಬರುತ್ತಿದೆ. ನಿತೀಶ್ ತಿವಾರಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಿಗ್ ಬಜೆಟ್‌ನ ರಾಮಾಯಣ ಸದ್ಯದಲ್ಲೇ ಸೆಟ್ಟೇರಲಿದೆ.

  ಈ ನಡುವೆ ಮತ್ತೊಂದು ರಾಮಾಯಣ ಸೈಲೆಂಟ್ ಆಗಿ ಪ್ರಿ-ಪ್ರೊಡಕ್ಷನ್ ಕೆಲಸ ಶುರುಮಾಡಿಕೊಂಡಿದೆ. ಖ್ಯಾತ ನಿರ್ದೇಶಕ ರಾಜಮೌಳಿ ತಂದೆ, ಖ್ಯಾತ ಬರಹಗಾರ ವಿಜಯೇಂದ್ರ ಪ್ರಸಾದ್ ಬರೆಯುತ್ತಿರುವ ರಾಮಾಯಣ ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭ ಮಾಡಲು ತಯಾರಿ ನಡೆಸುತ್ತಿದೆ. ವಿಶೇಷ ಎಂದರೆ ಸೀತೆಯಾಗಿ ಬಾಲಿವುಡ್ ಖ್ಯಾತ ನಟಿ ಕರೀನಾ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ...

  ಸೀತೆ ಪಾತ್ರದಲ್ಲಿ ಕರೀನಾ

  ಸೀತೆ ಪಾತ್ರದಲ್ಲಿ ಕರೀನಾ

  ಚಿತ್ರಕ್ಕೆ ಸೀತಾ ಎಂದು ಹೆಸರಿಟ್ಟಿದ್ದು, ಅಲೌಕಿಕ್ ದೇಸಾಯಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸೀತೆ ಪಾತ್ರಕ್ಕೆ ಬಾಲಿವುಡ್ ಖ್ಯಾತ ನಟಿ ಕರೀನಾ ಕಪೂರ್ ಅವರನ್ನು ಚಿತ್ರತಂಡ ಸಂಪರ್ಕ ಮಾಡಿದೆ ಎನ್ನುವ ಮಾತು ಕೇಳಿಬರುತ್ತಿದೆ. ಕರೀನಾ ಕೂಡ ಪೌರಾಣಿಕ ಪಾತ್ರಗಳಲ್ಲಿ ನಟಿಸಲು ಆಸಕ್ತಿ ಹೊಂದಿದ್ದು, ಸೀತೆಯಾಗಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  12 ಕೋಟಿ ರೂ. ಸಂಭಾವನೆ ಬೇಡಿಕೆ ಇಟ್ಟ ನಟಿ

  12 ಕೋಟಿ ರೂ. ಸಂಭಾವನೆ ಬೇಡಿಕೆ ಇಟ್ಟ ನಟಿ

  ಕರೀನಾ ಬೇಡಿಕೆ ಇಟ್ಟ ಸಂಭಾವನೆ ಈಗ ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಬಾಲಿವುಡ್ ನ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿರುವ ಹಿಂದಿ ಸಿನಿಮಾವಂದಕ್ಕೆ 6 ರಿಂದ 8 ಕೋಟಿ ಪಡೆಯುತ್ತಾರೆ. ಆದರೆ ಸೀತಾ ಚಿತ್ರದಲ್ಲಿ ನಟಿಸಲು ಬರೊಬ್ಬರಿ 12 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

  8 ರಿಂದ 12 ಕೋಟಿ ರೂಗೆ ಚಿತ್ರತಂಡ ಮಾತುಕತೆ

  8 ರಿಂದ 12 ಕೋಟಿ ರೂಗೆ ಚಿತ್ರತಂಡ ಮಾತುಕತೆ

  ಆದರೆ ಸಿನಿಮಾತಂಡ 8 ರಿಂದ 10 ಕೋಟಿ ನೀಡುವುದಾಗಿ ಹೇಳುತ್ತಿದ್ದಾರಂತೆ. ಚಿತ್ರತಂಡದ ಬೇಡಿಕೆಗೆ ಒಪ್ಪಿ ಕರೀನಾ ಸೀತೆಯಾಗ್ತಾರಾ ಎನ್ನುವುದು ಅಭಿಮಾನಿಗಳ ಕುತೂಹಲ. ಒಂದು ವೇಳೆ ಸಂಭಾವನೆ ವಿಚಾರದಲ್ಲಿ ಹೊಂದಾಣಿಕೆಯಾಗದಿದ್ದರೆ ಬೇರೆ ನಟಿಯನ್ನು ಸಂಪರ್ಕಿಸುವ ಸಾಧ್ಯತೆ ಇದೆ.

  ತೂಕು ಇಳಿಸುವಲ್ಲಿ ಬ್ಯುಸಿಯಾಗಿರುವ ಕರೀನಾ

  ತೂಕು ಇಳಿಸುವಲ್ಲಿ ಬ್ಯುಸಿಯಾಗಿರುವ ಕರೀನಾ

  ಎರಡನೇ ಮಗುವಿಗೆ ಜನ್ಮ ನೀಡಿರುವ ಕರೀನಾ ಸದ್ಯ ತೂಕ ಇಳಿಸುವಲ್ಲಿ ಬ್ಯುಸಿಯಾಗಿದ್ದಾರೆ. ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿರುವ ಕರೀನಾ ಈಗಾಗಲೇ ತೂಕ ಇಳಿಸಿ ತೆಳ್ಳಗಾಗಿದ್ದಾರೆ. ಸದ್ಯ ಕರೀನಾ ವೀರೆ ದಿ ವೆಡ್ಡಿಂಗ್-2 ನಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಹನ್ಸಾಲ್ ಮೆಹ್ತಾ ಅಕ್ಷನ್ ಕಟ್ ಹೇಳುತ್ತಿದ್ದಾರೆ.

  ತಿಯೊಬ್ಬ ರಾಜಕಾರಣಿಗೂ ಚಪ್ಪಲಿಯಲ್ಲಿ ಹೊಡಿಬೇಕು ಅಂದ್ರು ಗುರುಪ್ರಸಾದ್
  ರಾವಣ ಆಗ್ತಾರಾ ರಣ್ವೀರ್?

  ರಾವಣ ಆಗ್ತಾರಾ ರಣ್ವೀರ್?

  ಇನ್ನು ವಿಜಯೇಂದ್ರ ಪ್ರಸಾದ್ ಅವರ ಸೀತಾ ಸಿನಿಮಾದಲ್ಲಿ ರಾವಣನಾಗಿ ಬಾಲಿವುಡ್ ಸ್ಟಾರ್ ನಟ ರಣ್ವೀರ್ ಸಿಂಗ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ರಾವಣನ ಪಾತ್ರಕ್ಕೆ ಚಿತ್ರತಂಡ ರಣ್ವೀರ್ ಸಿಂಗ್ ಅವರನ್ನು ಸಂಪರ್ಕ ಮಾಡಿದ್ದು ರಣ್ವೀರ್ ಕಡೆಯಿಂದ ಇನ್ನು ಗ್ರೀನ್ ಸಿಗ್ನಲ್ ಸಿಕ್ಕಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ.

  English summary
  Actress Kareena Kapoor demands Rs.12 crore for playing Sita role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X