ತೈಮೂರ್‌ಗಿಂತ ಈ ಹೆಸರು ವಿಭಿನ್ನ: ಕರೀನಾ-ಸೈಫ್ 2ನೇ ಮಗು ಹೆಸರು ಇದೇನಾ?
ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ದಂಪತಿ ತಮ್ಮ ಎರಡನೇ ಮಗುವಿಗೆ ಹೆಸರು ಹುಡುಕುವುದರಲ್ಲಿ ಬ್ಯುಸಿ ಇದ್ದಾರೆ. ಫೆಬ್ರವರಿ 22 ರಂದು ಮುಂಬೈನ ಬ್ರಿಡ್ಜ್ ಕ್ಯಾಂಡಿ ಹಾಸ್ಪಿಟಲ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು ಕರೀನಾ ಕಪೂರ್.
ಎರಡನೇ ಮಗುವನ್ನು ಸ್ವಾಗತಿಸಿ ಸುಮಾರು ಐದು ತಿಂಗಳು ಕಳೆದಿದೆ. ಇದೀಗ, ಎರಡನೇ ಮಗನಿಗೆ ಏನೆಂದು ಹೆಸರಿಡಬೇಕು ಎನ್ನುವ ಚಿಂತೆಯಲ್ಲಿದ್ದಾರೆ ಕಪೂರ್ ದಂಪತಿ. ಸದ್ಯದ ವರದಿ ಪ್ರಕಾರ, ಕರೀನಾ ಹಾಗು ಸೈಫ್ ತಮ್ಮ ಎರಡನೇ ಪುತ್ರನ ಹೆಸರು ಅಂತಿಮಗೊಳಿಸಿದ್ದಾರೆ ಎಂಬ ಅಂಶ ಹೊರಬಿದ್ದಿದೆ. ಅಷ್ಟಕ್ಕೂ, ಎರಡನೇ ಮಗುವಿನ ಹೆಸರೇನು? ಮುಂದೆ ಓದಿ....

ಕರೀನಾ ಎರಡನೇ ಮಗನ ಹೆಸರು 'ಜೆಹ್'
'ಬಾಂಬೆ ಟೈಮ್ಸ್' ವರದಿ ಮಾಡಿರುವ ಪ್ರಕಾರ ಬಾಲಿವುಡ್ ಬೆಬೋ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ತಮ್ಮ ಎರಡನೇ ಮಗನಿಗೆ ಜೆಹ್ ಅಲಿ ಖಾನ್ ಎಂದು ಹೆಸರಿಡಲು ತೀರ್ಮಾನಿಸಿದ್ದಾರಂತೆ. ಈ ಸುದ್ದಿ ಅಧಿಕೃತವಾಗಿಲ್ಲ. ಆದರೆ ಆಪ್ತರು ಈ ಹೆಸರು ಬಿಟ್ಟುಕೊಟ್ಟಿರುವುದಾಗಿ ತಿಳಿದು ಬಂದಿದೆ.

ತಾತನ ಹೆಸರು ಆಯ್ಕೆಯಲ್ಲಿದೆ
ಜೆಹ್ ಅಥವಾ ಮನ್ಸೂರ್ ಎಂಬ ಹೆಸರುಗಳು ಕರೀನಾ ಮತ್ತು ಸೈಫ್ ಎದುರು ಆಯ್ಕೆಯಾಗಿತ್ತು. ಅದರಲ್ಲಿ ಜೆಹ್ ಎಂಬ ಹೆಸರು ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ. ಅಂದ್ಹಾಗೆ, ಮನ್ಸೂರ್ ಎನ್ನುವುದು ಸೈಫ್ ಅಲಿ ಖಾನ್ ತಂದೆ, ಖ್ಯಾತ ಕ್ರಿಕೆಟಿಗ ಮನ್ಸೂರ್ ಅಲಿ ಖಾನ್ ಪಟೌಡಿಯ ಹೆಸರಾಗಿತ್ತು.

ಮೊದಲ ಮಗುವಿನ ಹೆಸರಿನ ವಿವಾದ
ಈ ಹಿಂದೆ ಮೊದಲ ಮಗನಿಗೆ ತೈಮೂರ್ ಅಲಿ ಖಾನ್ ಎಂದು ಹೆಸರಿಟ್ಟಾಗ ವಿವಾದಕ್ಕೆ ಕಾರಣವಾಗಿತ್ತು. ನೆಟ್ಟಿಗರು ಕರೀನಾ ಮತ್ತು ಸೈಫ್ ದಂಪತಿಯ ವಿರುದ್ಧ ಕಿಡಿಕಾರಿದ್ದರು. ತೈಮೂರ್ ಓರ್ವ ಸರ್ವಾಧಿಕಾರಿ, ಭಾರತದ ಮೇಲೆ ದಾಳಿ ನಡೆಸಿ, ದೆಹಲಿಯಲ್ಲಿ ನೂರಾರು ಮಂದಿಯನ್ನು ಹತ್ಯೆ ಮಾಡಿದ್ದ' ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಅಂತಹ ವ್ಯಕ್ತಿಯ ಹೆಸರನ್ನು ಮಗನಿಗೆ ಇಡಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಹಾಗಾಗಿ, ಈ ಹೆಸರು ಕೈಬಿಡುವಂತೆ ಒತ್ತಾಯಿಸಿದ್ದರು. ಇದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ ಕರೀನಾ-ಸೈಫ್ ದಂಪತಿ.

ಸಮಯ ತೆಗೆದುಕೊಳ್ಳುತ್ತಿರುವ ದಂಪತಿ
ತೈಮೂರ್ ಹೆಸರಿಟ್ಟಾಗ ಎದುರಾದ ಟೀಕೆಯ ಪರಿಣಾಮ ಕಪೂರ್ ದಂಪತಿಗೆ ತಿಳಿದಿದೆ. ಹಾಗಾಗಿ, ಎರಡನೇ ಮಗನಿಗೆ ಹೆಸರಿಡುವ ವಿಚಾರದಲ್ಲಿ ಬಹಳ ಎಚ್ಚರಿಕೆ ಹೆಜ್ಜೆ ಇಡಲಾಗುತ್ತಿದೆ. ಸಾಕಷ್ಟು ಸಮಯ ತೆಗೆದುಕೊಳ್ಳಲಾಗುತ್ತದೆ. ಸದ್ಯಕ್ಕೆ ಜೆಹ್ ಅಲಿ ಖಾನ್ ಎನ್ನುವುದು ಆಪ್ತರಿಂದ ಸೋರಿಕೆಯಾಗಿರುವ ಹೆಸರು, ಆದರೆ ಅದೇ ಅಂತಿಮನಾ ಎನ್ನುವುದು ಗೊತ್ತಿಲ್ಲ.
Recommended Video

ಕಪೂರ್ ದಂಪತಿಯ ಸಿನಿಮಾಗಳು
ಸಿನಿಮಾ ವಿಚಾರಕ್ಕೆ ಬಂದ್ರೆ ಕರೀನಾ ಕಪೂರ್ ಲಾಲ್ ಸಿಂಗ್ ಚಡ್ಡಾದಲ್ಲಿ ನಟಿಸಿದ್ದಾರೆ. ಆ ಕಡೆ ಸೈಫ್ ಅಲಿ ಖಾನ್ ಅಭಿನಯದ ಭೂತ್ ಪೊಲೀಸ್, ಬಂಟಿ ಔರ್ ಬಬ್ಲಿ 2 ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿದೆ. ಜೊತೆಗೆ ಪ್ರಭಾಸ್ ಜೊತೆಗಿನ ಆದಿಪುರುಶ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











