For Quick Alerts
  ALLOW NOTIFICATIONS  
  For Daily Alerts

  ಕರೀನಾ ಕಪೂರ್ ಕೈಯಲ್ಲಿರುವ ಬ್ಯಾಗ್ ಬೆಲೆ ಕೇಳಿದ್ರೆ ತಲೆ ತಿರುಗಿ ಬೀಳ್ತೀರಾ.!

  |

  ಯುವತಿಯರು ಬಳಸುವ ಹ್ಯಾಂಡ್ ಬ್ಯಾಗ್ ಬೆಲೆ ಎಷ್ಟಿರಬಹುದು.? ಅಂದಾಜು 1000 ರೂಪಾಯಿ.? ಒಳ್ಳೆ ಡಿಸೈನ್, ಉತ್ತಮ ಬ್ರ್ಯಾಂಡ್ ಹೊಂದಿರುವ ಹ್ಯಾಂಡ್ ಬ್ಯಾಗ್ ಬೆಲೆ 5 ಸಾವಿರ ದಾಟಬಹುದು. ಪಾಶ್ ಲೆದರ್ ಹ್ಯಾಂಡ್ ಬ್ಯಾಗ್ ಬೆಲೆ ಅಬ್ಬಬ್ಬಾ ಅಂದ್ರೆ 20 ಸಾವಿರ ಆಗಬಹುದು.

  ಇಷ್ಟು ದುಬಾರಿ ಇರುತ್ತಾ ಹ್ಯಾಂಡ್ ಬ್ಯಾಗ್ ಬೆಲೆ | kareena kapoor | Handbag | Filmibeat kannada

  ಆದ್ರೆ, ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಬಳಸುವ ಹ್ಯಾಂಡ್ ಬ್ಯಾಗ್ ನ ಬೆಲೆ ಎಷ್ಟು ಗೊತ್ತಾ.? ಸಖತ್ ಸಿಂಪಲ್ ಆಗಿ ಕಂಡರೂ, ಕರೀನಾ ಕಪೂರ್ ಕೈಯಲ್ಲಿ ಇರುವ ಬ್ಯಾಗ್ ಬೆಲೆ ಎಷ್ಟು ಅಂತ ಗೊತ್ತಾದರೆ ಮಧ್ಯಮ ವರ್ಗದವರು ಖಂಡಿತ ತಲೆ ತಿರುಗಿ ಬೀಳುತ್ತಾರೆ.!

  ಹ್ಯಾಂಡ್ ಬ್ಯಾಗ್ ಬೆಲೆ ಎಷ್ಟು.?

  ಹ್ಯಾಂಡ್ ಬ್ಯಾಗ್ ಬೆಲೆ ಎಷ್ಟು.?

  ಇತ್ತೀಚೆಗೆಷ್ಟೇ ನಟಿ ಕರೀನಾ ಕಪೂರ್ ಖಾನ್ ಮುಂಬೈನ ಏರ್ ಪೋರ್ಟ್ ನಲ್ಲಿ ಪ್ರತ್ಯಕ್ಷವಾದರು. ಪತಿ ಸೈಫ್ ಅಲಿ ಖಾನ್, ಪುತ್ರ ತೈಮೂರ್ ಅಲಿ ಖಾನ್ ಜೊತೆಗೆ ಮುಂಬೈ ಏರ್ ಪೋರ್ಟ್ ಗೆ ಬಂದಿಳಿದ ಕರೀನಾ ಕಪೂರ್ ಖಾನ್ ಕೈಯಲ್ಲಿ ಒಂದು ಹ್ಯಾಂಡ್ ಬ್ಯಾಗ್ ಇತ್ತು. ಅದರ ಬೆಲೆ 13 ಲಕ್ಷ ರೂಪಾಯಿ.!

  ಮತ್ತೆ ಗುಡ್ ನ್ಯೂಸ್ ಕೊಡ್ತಾರಾ ಕರೀನಾ ಕಪೂರ್ ಖಾನ್.?ಮತ್ತೆ ಗುಡ್ ನ್ಯೂಸ್ ಕೊಡ್ತಾರಾ ಕರೀನಾ ಕಪೂರ್ ಖಾನ್.?

  ದುಬಾರಿ ಬ್ರ್ಯಾಂಡ್

  ದುಬಾರಿ ಬ್ರ್ಯಾಂಡ್

  ಇಂಟರ್ ನ್ಯಾಷನಲ್ ಬ್ರ್ಯಾಂಡ್ ಹೇರ್ಮೇಸ್ ಬರ್ಕಿನ್ ಲೆದರ್ ಬ್ಯಾಗ್ ಇದಾಗಿದ್ದು, ನೋಡಲು ಸಿಂಪಲ್ ಆಗಿ ಕಂಡು ಬಂದರೂ, ಬೆಲೆ ಮಾತ್ರ 13,31,794 ರೂಪಾಯಿ.! ವಿಶ್ವದಲ್ಲೇ ಅತ್ಯಂತ ದುಬಾರಿ ಬ್ಯಾಗ್ ಗಳನ್ನು ಫ್ರಾನ್ಸ್ ಮೂಲದ ಕಂಪನಿ ಹೇರ್ಮೇಸ್ ಬರ್ಕಿನ್ ತಯಾರು ಮಾಡುತ್ತದೆ.

  ಕರೀನಾಳ ಮಂಡಿ ಕಾಣುತ್ತಿಲ್ಲ: ಹೀಗೂ ಫೋಟೋಶಾಪ್ ಮಾಡ್ತಾರಾ ಗುರು.?!ಕರೀನಾಳ ಮಂಡಿ ಕಾಣುತ್ತಿಲ್ಲ: ಹೀಗೂ ಫೋಟೋಶಾಪ್ ಮಾಡ್ತಾರಾ ಗುರು.?!

  ಸ್ವಿಟ್ಜರ್ಲ್ಯಾಂಡ್ ನಿಂದ ಬಂದಿಳಿದ ಕರೀನಾ

  ಸ್ವಿಟ್ಜರ್ಲ್ಯಾಂಡ್ ನಿಂದ ಬಂದಿಳಿದ ಕರೀನಾ

  ಅಸಲಿಗೆ, ಹತ್ತು ದಿನಗಳ ಕಾಲ ಸ್ವಿಟ್ಜರ್ಲ್ಯಾಂಡ್ ನಲ್ಲಿ ಕಾಲ ಕಳೆದ ಮೇಲೆ ಕರೀನಾ ಕುಟುಂಬ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಟಾಪ್ ಟು ಬಾಟಂ ಕಪ್ಪು ಬಣ್ಣದ ಉಡುಗೆ, ಆಲಿವ್ ಗ್ರೀನ್ ಬೂಟ್ಸ್, ದುಬಾರಿ ಬ್ಯಾಗ್ ನೊಂದಿಗೆ ಏರ್ ಪೋರ್ಟ್ ನಲ್ಲಿ ಕರೀನಾ ಕಾಣಿಸಿಕೊಂಡರೆ, ಸಿಂಪಲ್ ಲುಕ್ ನಲ್ಲಿ ಸೈಫ್ ಮತ್ತು ಪುತ್ರ ತೈಮೂರ್ ಕಂಡು ಬಂದರು.

  ಸಿನಿಮಾಗಳಲ್ಲಿ ಕರೀನಾ ಕಪೂರ್ ಬಿಜಿ

  ಸಿನಿಮಾಗಳಲ್ಲಿ ಕರೀನಾ ಕಪೂರ್ ಬಿಜಿ

  ಬಾಲಿವುಡ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ಕರೀನಾ ಕಪೂರ್ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ. ಕರೀನಾ ಅಭಿನಯದ 'ಗುಡ್ ನ್ಯೂಸ್' ಚಿತ್ರ ಇತ್ತೀಚೆಗಷ್ಟೆ ಬಿಡುಗಡೆ ಆಗಿತ್ತು. ಕರೀನಾ ಕೈಯಲ್ಲಿ 'ತಖ್ತ್' ಸೇರಿದಂತೆ ಎರಡ್ಮೂರು ಚಿತ್ರಗಳಿವೆ.

  English summary
  Bollywood Actress Kareena Kapoor Khan flaunts handbag worth Rs.13 Lakh at the Airport.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X