ಕರೀನಾಳ ಮಂಡಿ ಕಾಣುತ್ತಿಲ್ಲ: ಹೀಗೂ ಫೋಟೋಶಾಪ್ ಮಾಡ್ತಾರಾ ಗುರು.?!
ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಶೇರ್ ಮಾಡುವ ಮುನ್ನ ಎಡಿಟಿಂಗ್ ಮಾಡುವುದು ಕಾಮನ್. ಅಲ್ಪ-ಸ್ವಲ್ಪ ಎಡಿಟಿಂಗ್ ಮಾಡಿದ್ರೆ ಪರ್ವಾಗಿಲ್ಲ. ಆದ್ರೆ, ಅತಿ ಎನಿಸುವಷ್ಟು ಎಡಿಟಿಂಗ್ ಮಾಡಿದ್ರೆ, ನೆಟ್ಟಿಗರು ಛೀಮಾರಿ ಹಾಕದೇ ಇರ್ತಾರಾ.? ಸದ್ಯ ಕರೀನಾ ಕಪೂರ್ ಖಾನ್ ಗೂ ಇದೇ ಪರಿಸ್ಥಿತಿ ಉಂಟಾಗಿದೆ.!
ಪ್ರಖ್ಯಾತ ಮ್ಯಾಗಜೀನ್ ಒಂದಕ್ಕಾಗಿ ನಟಿ ಕರೀನಾ ಕಪೂರ್ ಖಾನ್ ಇತ್ತೀಚೆಗಷ್ಟೇ ಫೋಟೋ ಶೂಟ್ ಮಾಡಿಸಿದ್ದರು. ತಿಳಿ ಹಸಿರು ಬಣ್ಣದ ತುಂಡುಡುಗೆ ತೊಟ್ಟಿದ್ದ ಕರೀನಾ ಕಪೂರ್ ಫೋಟೋವನ್ನ ಆ ಮ್ಯಾಗಜೀನ್ ನವರು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಆ ಫೋಟೋಗೆ ಮೆಚ್ಚುಗೆಗಿಂತ ತೆಗಳಿಕೆಗೆ ಹೆಚ್ಚು ವ್ಯಕ್ತವಾಗಿದೆ. ಯಾಕಂದ್ರೆ, ಆ ಫೋಟೋದಲ್ಲಿ ಕರೀನಾ ಕಪೂರ್ ಖಾನ್ ರವರ ಮಂಡಿಯೇ ಕಾಣುತ್ತಿಲ್ಲ.! ಮೊಣಕಾಲು ಕಾಣದ ಹಾಗೆ, ಸ್ಕಿನ್ ಟೋನ್ ನ ಟ್ಯೂನ್ ಮಾಡಿ ಫೋಟೋ ಎಡಿಟ್ ಮಾಡಲಾಗಿದೆ.

ಮಂಡಿಯೇ ಇಲ್ಲದಂತೆ ಎಡಿಟ್ ಆಗಿರುವ ಕರೀನಾ ಕಪೂರ್ ಖಾನ್ ರವರ ಈ ಫೋಟೋ ನೋಡಿ, ''ಅತಿ ಕೆಟ್ಟ ಫೋಟೋಶಾಪ್ ಇದು. ಈ ಸೆಲೆಬ್ರಿಟಿಗಳು ರಿಯಲ್ ಆಗಿ ಯಾಕೆ ಇರಲ್ಲ.? ಮುಂದಿನ ಪೀಳಿಗೆಗೆ ಇವರೆಲ್ಲಾ ಕೆಟ್ಟ ರೋಲ್ ಮಾಡೆಲ್ ಗಳು. ಕರೀನಾ ಪ್ಲಾಸ್ಟಿಕ್ ಡಾಲ್ ನಂತೆ ಕಾಣುತ್ತಿದ್ದಾರೆ''
''ಈ ಫೋಟೋ ನೋಡಿದ್ಮೇಲೆ ನನ್ನ ಮಂಡಿ ನೋವಾಗುತ್ತದೆ. ಇದು ಹಾಟ್ ಆಗಿಯೂ ಕಾಣುತ್ತಿಲ್ಲ'', ''ಮಂಡಿಯಲ್ಲದೆ ಕರೀನಾ ಕಪೂರ್ ಖಾನ್ ಜನಿಸಿದ್ದಾರೆ'' ಅಂತೆಲ್ಲಾ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.


Click it and Unblock the Notifications











