ಮಾಲ್ದೀವ್ಸ್ ನಲ್ಲಿ ಬಿಕಿನಿ ತೊಟ್ಟ ಕರೀನಾ: ಮುನಿಸಿಕೊಂಡ ನೆಟ್ಟಿಗರು.!
ಅದ್ಯಾಕೋ, ಏನೋ ನೆಟ್ಟಿಗರ ಕೆಂಗಣ್ಣಿಗೆ ಆಗಾಗ ಕರೀನಾ ಕಪೂರ್ ಖಾನ್ ಗುರಿಯಾಗುತ್ತಲೇ ಇರುತ್ತಾರೆ. ಮದುವೆ ಆಗಿ ಒಂದು ಮಗುವಿನ ತಾಯಿ ಆಗಿರುವ ಕರೀನಾ ತುಂಡುಡುಗೆ ತೊಟ್ಟರೆ, ನೆಟ್ಟಿಗರಿಗೆ ವಿಪರೀತ ಕೋಪ.
'ವೀರೇ ದಿ ವೆಡ್ಡಿಂಗ್' ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಕರೀನಾ ಕಪೂರ್ ಖಾನ್ ತೊಟ್ಟಿದ್ದ ಉಡುಗೆ ಅನೇಕರಿಗೆ ಇಷ್ಟ ಆಗಿರಲಿಲ್ಲ. ಆಗ ಇನ್ಸ್ಟಾಗ್ರಾಮ್ ನಲ್ಲಿ ಕರೀನಾ ಕಪೂರ್ ಖಾನ್ ಟ್ರೋಲ್ ಆಗಿದ್ದರು.
ಈಗ, ಬಿಕಿನಿ ತೊಟ್ಟ ಕಾರಣಕ್ಕೆ ಮತ್ತೊಮ್ಮೆ ಕರೀನಾ ಕಪೂರ್ ಖಾನ್ ನೆಟ್ಟಿಗರ ಮುನಿಸಿಗೆ ಕಾರಣವಾಗಿದ್ದಾರೆ.

ಸದ್ಯ ಕುಟುಂಬದ ಜೊತೆಗೆ ಕರೀನಾ ಜಾಲಿ ಮೂಡ್ ನಲ್ಲಿದ್ದಾರೆ. ಸೈಫ್ ಅಲಿ ಖಾನ್, ಪುತ್ರ ತೈಮೂರ್, ಸೋಹಾ ಅಲಿ ಖಾನ್, ಕುನಾಲ್ ಖೇಮು ಹಾಗೂ ಇನಾಯ ಜೊತೆಗೆ ಕರೀನಾ ಮಾಲ್ದೀವ್ಸ್ ನಲ್ಲಿದ್ದಾರೆ.
ಮಾಲ್ದೀವ್ಸ್ ಬೀಚ್ ನಲ್ಲಿ ಸೈಫ್ ಕುಟುಂಬ ಇರುವ ಫೋಟೋವನ್ನ ಸೋಹಾ ಅಲಿ ಖಾನ್ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದರು. ಆ ಫೋಟೋದಲ್ಲಿ ಕರೀನಾ ಕಪೂರ್ ಬಿಕಿನಿ ತೊಟ್ಟಿರುವುದು ಹಲವರಿಗೆ ಕೋಪ ತರಿಸಿದೆ.
ಒಂದು ಮಗುವಿನ ತಾಯಿಯಾಗಿ ಬಿಕಿನಿ ತೊಟ್ಟ ಕರೀನಾಗೆ ನೆಟ್ಟಿಗರು ಶೇಮ್ ಶೇಮ್ ಎನ್ನುತ್ತಿದ್ದಾರೆ. ಟ್ರೋಲ್ ಗಳ ಬಗ್ಗೆ ತಲೆ ಕೆಡೆಸಿಕೊಳ್ಳದ ಸೈಫ್ ಕುಟುಂಬ ಮಾಲ್ದೀವ್ಸ್ ನಲ್ಲಿ ಖುಷಿಯಾಗಿದ್ದಾರೆ.


Click it and Unblock the Notifications











