For Quick Alerts
    ALLOW NOTIFICATIONS  
    For Daily Alerts

    ಟ್ರೋಲ್ ಮಾಡಿದವರ ಬಾಯಿಗೆ ಬೀಗ ಜಡಿದ ಕರೀನಾ ಕಪೂರ್ ಖಾನ್.!

    By Harshitha
    |

    ಬಾಲಿವುಡ್ ನಟ ಸೈಫ್ ಅಲಿ ಖಾನ್ ರನ್ನ ಮದುವೆ ಆಗಿ, ಒಂದು ಗಂಡು ಮಗುವಿನ ತಾಯಿ ಆಗಿರುವ ಕರೀನಾ ಕಪೂರ್ ಖಾನ್ ಅಭಿನಯದ ಹೊಸ ಸಿನಿಮಾ 'ವೀರೇ ದಿ ವೆಡ್ಡಿಂಗ್' ಇಂದು ಬಿಡುಗಡೆ ಆಗಿದೆ.

    'ವೀರೇ ದಿ ವೆಡ್ಡಿಂಗ್' ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ಕರೀನಾ ಕಪೂರ್ ಖಾನ್ ತೊಟ್ಟಿದ್ದ ಉಡುಪುಗಳು ಕೆಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಒಂದು ಗಂಡು ಮಗುವಿನ ತಾಯಿಯಾಗಿ ಸಭ್ಯ ಉಡುಗೆ ಧರಿಸುವುದು ಬಿಟ್ಟು, ಶಾರ್ಟ್ ಡ್ರೆಸ್ ತೊಟ್ಟಿದ್ದ ಕರೀನಾ ಬಗ್ಗೆ ನೆಟ್ಟಿಗರು ಲೇವಡಿ ಮಾಡಿದ್ದರು.

    ಉಡುಪುಗಳಿಂದ ಸತತವಾಗಿ ಟ್ರೋಲ್ ಆಗುತ್ತಿರುವ ಕರೀನಾ ಕಪೂರ್ ಖಾನ್ ಗೆ ಈ ಬಗ್ಗೆ ಇತ್ತೀಚೆಗಷ್ಟೇ ನಡೆದ ಪತ್ರಿಕಾಗೋಷ್ಟಿಯಲ್ಲಿ ಪ್ರಶ್ನಿಸಲಾಯಿತು. ಅದಕ್ಕೆ ಬೇಬೋ ಕೊಟ್ಟ ಉತ್ತರ ಹೀಗಿತ್ತು - ''ಯಾರು ಯಾವುದರಲ್ಲಿ ಚೆನ್ನಾಗಿ ಕಾಣ್ತಾರೋ, ಅದನ್ನ ತೊಡಬೇಕು. ನನ್ನ ತಾಯಿ ಕೂಡ ಮಾರ್ಡನ್ ಉಡುಪು ತೊಡುತ್ತಾರೆ. ಜೀನ್ಸ್ ಹಾಗೂ ಟಾಪ್ ನಲ್ಲಿ ನನ್ನಮ್ಮ ತುಂಬಾ ಚೆನ್ನಾಗಿ ಕಾಣ್ತಾರೆ''

    ''ನನ್ನ ಅತ್ತೆ (ಶರ್ಮಿಳಾ ಟ್ಯಾಗೋರ್) ಕೂಡ ಸೀರೆ ಹಾಗೂ ಮಾರ್ಡನ್ ಉಡುಪಿನಲ್ಲಿ ಚೆಂದ ಕಾಣ್ತಾರೆ. ಮಹಿಳೆಯರು ತಮ್ಮಿಷ್ಟದ ಉಡುಗೆ ತೊಡುವ ಜಗತ್ತಿನಿಂದ ನಾನು ಬಂದವಳು''

    ''ನನಗೆ ಮಗು ಆದ ಕಾರಣ ನಾನು ಶಾರ್ಟ್ ಡ್ರೆಸ್ ಧರಿಸಬಾರದು ಅಂತೇನಿಲ್ಲ. ನಾನು ಗರ್ಭಿಣಿ ಆಗಿದ್ದಾಗಲೂ, ನನ್ನ ತೂಕದ ಬಗ್ಗೆ ಹಲವರು ಹಲವಾರು ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಜೀವನದಲ್ಲಿ ಮಹಿಳೆ ಸಾಗುವ ಪ್ರತಿಯೊಂದು ಘಟ್ಟವನ್ನೂ ಎಲ್ಲರೂ ಗೌರವಿಸಬೇಕು'' ಅಂತ ಹೇಳುವ ಮೂಲಕ ಎಲ್ಲ ಟ್ರೋಲಿಗರ ಬಾಯಿಗೆ ಬೀಗ ಜಡಿದಿದ್ದಾರೆ ನಟಿ ಕರೀನಾ ಕಪೂರ್ ಖಾನ್.

    English summary
    Bollywood Actress Kareena Kapoor Khan gives major burns to trolls.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X