For Quick Alerts
  ALLOW NOTIFICATIONS  
  For Daily Alerts

  ಮತ್ತೆ ಗರ್ಭಿಣಿ ಅಂದವರಿಗೆ ಹೊಟ್ಟೆಯಲ್ಲಿ ಏನೇನಿದೆ ಅನ್ನೋದರ ಲಿಸ್ಟ್ ಕೊಟ್ಟ ಕರೀನಾ!

  |

  ಬಾಲಿವುಡ್‌ ನಟಿಯರ ಲವ್, ಅಫೇರ್, ಮ್ಯಾರೇಜ್, ಡೈವೋರ್ಸ್‌ಗೆ ಸಂಬಂಧಿಸಿದ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗ್ತಾನೇ ಇರುತ್ತದೆ. ಬಿಟೌನ್ ಬೇಬೊ ಕರೀನಾ ಕಪೂರ್ ಮೂರನೇ ಬಾರಿಗೆ ಗರ್ಭಿರ್ಣಿಯಾಗಿದ್ದಾರೆ ಅನ್ನೋ ಗುಸುಗುಸು ಕಳೆದೆರಡು ದಿನಗಳಿಂದ ಜೋರಾಗಿತ್ತು. ಇಟಲಿ ಪ್ರವಾಸದಲ್ಲಿರೋ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಫೋಟೊಗಳೇ ಕೆಲವರಲ್ಲಿ ಇಂತಹ ಅನುಮಾನ ಮೂಡಿಸಿತ್ತು. 'ಫೋಟೊಗಳಲ್ಲಿ ಕರೀನಾ ಬೇಬಿ ಬಂಪ್ ಕಾಣುತ್ತಿದೆ, ಮತ್ತೆ ಪ್ರಗ್ನೆಂಟ್ ಆಗಿದ್ದಾರೆ' ಎಂದು ಕೆಲವರು ಕಾಮೆಂಟ್ ಮಾಡೋಕೆ ಶುರುಮಾಡಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹರಡಿ ಕೊನೆಗೆ ಕರೀನಾ ಕಪೂರ್ ಪ್ರತಿಕ್ರಿಯೆ ನೀಡುವಂತಾಗಿದೆ. ಈ ಬಗ್ಗೆ ತಮಾಷೆಯಾಗಿ ಇನ್‌ಸ್ಟಾ ಸ್ಟೋರಿ ಹಾಕಿರುವ ಕರೀನಾ ಕಪೂರ್ ಗಾಸಿಪ್ ಹಬ್ಬಿಸುವವರಿಗೆ ನಯವಾಗಿಯೇ ತಿರುಗೇಟು ನೀಡಿದ್ದಾರೆ.

  ಐಶ್ವರ್ಯಾ ರೈ 2ನೇ ಬಾರಿ ಗರ್ಭಿಣಿ ಆಗಿದ್ದಾರೆ ಅನ್ನೋ ಸುದ್ದಿ ವೈರಲ್ ಆದ ಬೆನ್ನಲ್ಲೇ ಕರೀನಾ 3ನೇ ಬಾರಿ ಗರ್ಭಿಣಿ ಅನ್ನೋ ಸುದ್ದಿ ಸದ್ದು ಮಾಡಿತ್ತು. ಈ ಬಗ್ಗೆ ಖುದ್ದು ಕರೀನಾ ಪ್ರತಿಕ್ರಿಯಿಸಿದ್ದಾರೆ. 'ನನ್ನ ಹೊಟ್ಟೆಯಲ್ಲಿ ಇರೋದು ಪಾಸ್ತಾ ಮತ್ತು ವೈನ್, ಶಾಂತವಾಗಿರಿ, ನಾನು ಗರ್ಭಿಣಿ ಅಲ್ಲ.. ಉಫ್.. ಸೈಫ್ ಈಗಾಗಲೇ ನಮ್ಮ ದೇಶದ ಜನಸಂಖ್ಯೆಗೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ... ಎಂಜಾಯ್' ಎಂದು ಬರೆದುಕೊಂಡಿದ್ದಾರೆ. ಕರೀನಾ ಪ್ರತಿಕ್ರಿಯೆ ಇನ್‌ಸ್ಟಾ ಸ್ಟೋರಿ ಕೂಡ ಸಖತ್ ವೈರಲ್‌ ಆಗಿದೆ.

  ಪ್ರಭಾಸ್ 'ಸ್ಪಿರಿಟ್‌'ಗೆ ಕರೀನಾ ಕಪೂರ್ ಸಹಿ!ಪ್ರಭಾಸ್ 'ಸ್ಪಿರಿಟ್‌'ಗೆ ಕರೀನಾ ಕಪೂರ್ ಸಹಿ!

  16 ಅಕ್ಟೋಬರ್ 2012ರಂದು ಕರೀನಾ ಕಪೂರ್ ನಟ ಸೈಫ್ ಅಲಿ ಖಾನ್ ಜೊತೆ ಮದುವೆ ಆಗಿದ್ದರು. ದಂಪತಿಗೆ ತೈಮೂರ್ ಮತ್ತು ಜೇಹಂಗೀರ್ ಅನ್ನೋ ಇಬ್ಬರು ಮಕ್ಕಳಿದ್ದಾರೆ. ಮದುವೆ ಆಗಿ ಮಕ್ಕಳು ಆದ ಮೇಲೂ ಕರೀನಾ ಕಪೂರ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆಮೀರ್ ಖಾನ್ ಜೊತೆ ಕರೀನಾ ಕಪೂರ್ ನಟನೆಯ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಕರೀನಾ ಎರಡನೇ ಬಾರಿ ಗರ್ಭಿಣಿ ಆಗಿದ್ದ ಸಮಯದಲ್ಲೇ ಸಿನಿಮಾ ಚಿತ್ರೀಕರಣವನ್ನು ಮುಗಿಸಿದ್ದರು.

  ಕರೀನಾ ಕಾಲ್‌ಶೀಟ್‌ಗೆ ಕಾಯ್ತಿದ್ದಾರೆ ನಿರ್ಮಾಪಕರು

  ಕರೀನಾ ಕಾಲ್‌ಶೀಟ್‌ಗೆ ಕಾಯ್ತಿದ್ದಾರೆ ನಿರ್ಮಾಪಕರು

  ಮದುವೆ ಆದರೂ, ಎರಡು ಮಕ್ಕಳ ತಾಯಿಯಾದರೂ ಚಿತ್ರರಂಗದಲ್ಲಿ ಬೇಬೊ ಕರೀನಾ ಕ್ರೇಜ್ ಮಾತ್ರ ಕಿಂಚಿತ್ತೂ ಕಮ್ಮಿ ಆಗಿಲ್ಲ. ಕರೀನಾ ಕೂಡ ಸಿನಿಮಾಗಳಲ್ಲಿ ನಟಿಸೋಕೆ ಉತ್ಸುಕರಾಗಿದ್ದಾರೆ. 'ಲಾಲ್‌ ಸಿಂಗ್ ಚಡ್ಡಾ' ನಂತ್ರ ಮತ್ತಷ್ಟು ಸಿನಿಮಾ ಅವಕಾಶಗಳು ಕರೀನಾ ಕಪೂರ್ ಅವರನ್ನು ಹುಡುಕಿ ಬರುತ್ತಿದೆ. ಸದ್ಯ ಮಕ್ಕಳ ಲಾಲನೆ ಪಾಲನೆಯಲ್ಲಿ ಕಾಲ ಕಳೆಯುತ್ತಿರುವ ಬೇಬೊ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ.

  Kareena-Saif: ಮಕ್ಕಳು ಸಾಕು, ಪತಿಗೆ ಎಚ್ಚರಿಕೆ ನೀಡಿದ ಕರೀನಾ!Kareena-Saif: ಮಕ್ಕಳು ಸಾಕು, ಪತಿಗೆ ಎಚ್ಚರಿಕೆ ನೀಡಿದ ಕರೀನಾ!

  ಟ್ರೆಂಡ್ ಹುಟ್ಟಾಕ್ಕಿತ್ತು ಕರೀನಾ ಸೈಜ್ ಜೀರೋ ಫಿಜಿಕ್

  ಟ್ರೆಂಡ್ ಹುಟ್ಟಾಕ್ಕಿತ್ತು ಕರೀನಾ ಸೈಜ್ ಜೀರೋ ಫಿಜಿಕ್

  14 ವರ್ಷಗಳ ಹಿಂದೆ 'ತಶಾನ್' ಸಿನಿಮಾದಲ್ಲಿ ಸೈಜ್ ಜೀರೋ ಬಾಡಿ ಮಾಡಿ ಬಿಕಿನಿಯಲ್ಲಿ ದರ್ಶನ ಕೊಟ್ಟಿದ್ದರು. ಅಂದಿನ ಕಾಲಕ್ಕೆ ಇದು ಎಲ್ಲರ ಹುಬ್ಬೇರಿಸಿತ್ತು. ಮುಂದೆ ಸಾಕಷ್ಟು ನಟಿಯರು ಕರೀನಾ ಹಾದಿಯಲ್ಲಿ ಸೈಜ್ ಜೀರೋಗೆ ಮೊರೆ ಹೋದರು. ಸಾಕಷ್ಟು ಹೆಣ್ಣು ಮಕ್ಕಳು ಕೂಡ ಇದನ್ನು ಟ್ರೈ ಮಾಡಿದ್ದರು. ಮದುವೆ ಆದಮೇಲೂ ಮಗುವಿನ ತಾಯಿ ಆದಮೇಲೂ ಜೀರೋ ಸೈಜ್ ಮೇಂಟೇನ್ ಮಾಡಿ ಬೇಬೊ ಗಮನ ಸೆಳೆದಿದ್ದರು.

  ಯೋಗದಿಂದ ಫಿಟ್‌ನೆಸ್ ಕಾಪಾಡಿಕೊಂಡಿರುವ ಕರೀನಾ

  ಯೋಗದಿಂದ ಫಿಟ್‌ನೆಸ್ ಕಾಪಾಡಿಕೊಂಡಿರುವ ಕರೀನಾ

  ಬಾಲಿವುಡ್ ಬೇಬೊ ವಯಸ್ಸು ನಲವತ್ತು ದಾಟಿದ್ರು, ಬಳಕುವ ಬಳ್ಳಿಯಂತೆ ಫಿಟ್ ಆಗಿರುವ ಸೀಕ್ರೆಟ್ ಏನು ಅಂದ್ರೆ, ಜಿಮ್ ವರ್ಕ್‌ಔಟ್ ಮತ್ತು ಯೋಗ ಅನ್ನುವ ಉತ್ತರ ಬರುತ್ತದೆ. ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಕರೀನಾ ತಮ್ಮ ಫಿಟ್‌ನೆಸ್ ಸೀಕ್ರೆಟ್ ರಿವೀಲ್ ಮಾಡಿದ್ದರು. ಜಿಮ್‌ನಲ್ಲಿ ಪ್ರತಿದಿನ 55 ನಿಮಿಷ ಕಳೆಯುವ ಕರೀನಾ, ಪವರ್ ಯೋಗ ಮಾಡೋದನ್ನು ಮರೆಯೋದಿಲ್ಲವಂತೆ.

  ಪ್ರಭಾಸ್ ಜೊತೆ ಕರೀನಾ ಡ್ಯುಯೆಟ್

  ಪ್ರಭಾಸ್ ಜೊತೆ ಕರೀನಾ ಡ್ಯುಯೆಟ್

  'ಅರ್ಜುನ್ ರೆಡ್ಡಿ' ಸಿನಿಮಾ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಸ್ಪಿರಿಟ್' ಸಿನಿಮಾದಲ್ಲಿ ಬಾಹುಬಲಿ ಪ್ರಭಾಸ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ಕರೀನಾ ಕಪೂರ್ ಅವರನ್ನು ಕರೆತರುವ ಪ್ರಯತ್ನಗಳು ನಡೀತಿದೆ. ಅದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

  Recommended Video

  Umapathy Srinivas | ಒಳ್ಳೆ ಪ್ರೊಡ್ಯೂಸರ್ ಕೆಟ್ಟ ಪ್ರೊಡ್ಯೂಸರ್ ಅಂತ ಇರ್ತಾರೆ ಆದ್ರೆ! *Sandalwood
  English summary
  Kareena Kapoor Khan Reacts On Her 3rd Pregnancy Rumours. Know More.
  Thursday, July 21, 2022, 13:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X