For Quick Alerts
  ALLOW NOTIFICATIONS  
  For Daily Alerts

  ಜೇಹ್ ಜೊತೆ ಕರೀನಾ ಸೆಲ್ಫಿ: ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

  |

  ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಸದ್ಯ ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಎಂಜಾಯ್ ಮಾಡ್ತಿದ್ದಾರೆ. ಆಗಸ್ಟ್ 16 ರಂದು ಸೈಫ್ ಅಲಿ ಖಾನ್ ಹುಟ್ಟುಹಬ್ಬವಿದ್ದ ಕಾರಣ ಬರ್ತಡೇ ಸೆಲೆಬ್ರೇಷನ್‌ಗಾಗಿ ಇಡೀ ಕುಟುಂಬ ಮಾಲ್ಡೀವ್ಸ್‌ ತೆರಳಿತ್ತು.

  ಕಳೆದ ಎರಡು ನಾಲ್ಕು ದಿನದಿಂದಲೂ ಕರೀನಾ ಕಪೂರ್ ಮಾಲ್ಡೀವ್ಸ್‌ನಲ್ಲಿ ಹಾಲಿ ಡೇ ಎಂಜಾಯ್ ಮಾಡ್ತಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಂದು ಕಿರಿಯ ಪುತ್ರ ಜೇಹ್ ಜೊತೆಗಿನ ಸೆಲ್ಫಿ ಎಲ್ಲರ ಗಮನ ಸೆಳೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಕರೀನಾ ಮತ್ತು ಜೇಹ್ ಒಟ್ಟಿಗಿರುವ ಫೋಟೋ ಸಖತ್ ವೈರಲ್ ಆಗಿದೆ.

  ಕೊರೊನಾ ಭೀತಿಯ ನಡುವೆಯೂ ಮಕ್ಕಳೊಂದಿಗೆ ಮಾಲ್ಡೀವ್ಸ್‌ಗೆ ಹಾರಿದ ಕರೀನಾ ದಂಪತಿಕೊರೊನಾ ಭೀತಿಯ ನಡುವೆಯೂ ಮಕ್ಕಳೊಂದಿಗೆ ಮಾಲ್ಡೀವ್ಸ್‌ಗೆ ಹಾರಿದ ಕರೀನಾ ದಂಪತಿ

  ಜೇಹ್‌ನನ್ನು ಕರೀನಾ ಎತ್ತುಕೊಂಡಿದ್ದು, ಆ ಪುಟ್ಟು ಮಗು ಅಮ್ಮನ ತೋಳಿನಲ್ಲಿ ಮಲಗಿದೆ. ಈ ಫೋಟೋಗೆ 'ಲೈಟ್ಸ್, ಕ್ಯಾಮೆರಾ, ನ್ಯಾಪ್‌ಟೈಮ್' ಎಂದು ಕ್ಯಾಪ್ಷನ್ ಹಾಕಿದ್ದಾರೆ ಕರೀನಾ. ಈ ಹಿಂದೆ ಆಗಸ್ಟ್ 16 ರಂದು ಪತಿ ಹಾಗೂ ಇಬ್ಬರು ಮಕ್ಕಳು ಒಟ್ಟಿಗೆ ಮಾಲ್ಡೀವ್ಸ್‌ ರೆಸಾರ್ಟ್‌ವೊಂದರಲ್ಲಿ ಎಂಜಾಯ್ ಮಾಡ್ತಿದ್ದ ಫೋಟೋ ಆಕರ್ಷಿಸಿತ್ತು.

  ಎರಡನೇ ಪುತ್ರನಿಗೆ ಜಹಾಂಗೀರ್ ಎಂದು ಹೆಸರಿಟ್ಟಿದ್ದು, ಪ್ರೀತಿಯಿಂದ ಜೇಹ್ ಎಂದು ಕರೆಯುತ್ತಿದ್ದಾರೆ. ಜಹಾಂಗೀರ್ ಹೆಸರಿಟ್ಟಿದ್ದಕ್ಕೆ ಅನೇಕರು ವಿರೋಧಿಸಿದರು. ಮೊದಲ ಮಗನಿಗೆ ತೈಮೂರ್ ಅಲಿ ಖಾನ್ ಎಂದು ಹೆಸರಿಟ್ಟಾಗಲೂ ಟೀಕೆ ವ್ಯಕ್ತವಾಗಿತ್ತು. ಈಗ ಜೇಹ್ ಹೆಸರಿಗೂ ಟೀಕೆ ಎದುರಾಗಿದೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕರೀನಾ-ಸೈಫ್ ದಂಪತಿ ಖಾಸಗಿzಜೀವನವನ್ನು ಎಂಜಾಯ್ ಮಾಡ್ತಿದ್ದಾರೆ.

  ಇನ್ನು ಮಗನ ಹೆಸರಿನ ಬಗ್ಗೆ ವೆಬ್‌ಸೈಟ್‌ವೊಂದಕ್ಕೆ ಪ್ರತಿಕ್ರಿಯಿಸಿ ಕರೀನಾ ಕಪೂರ್, ''ನಾನು ಹಾಗೂ ಸೈಫ್ ಎರಡು ಬಾರಿಯೂ ಉದ್ದೇಶಪೂರ್ವಕವಾಗಿ ಇದೇ ಹೆಸರಿಡಬೇಕೆಂದು ಇಡಲಿಲ್ಲ. ಅಥವಾ ಮಕ್ಕಳ ಹೆಸರನ್ನು ಲಿಸ್ಟ್ ಬರೆದು ಆಯ್ಕೆ ಮಾಡಲಿಲ್ಲ. ತೈಮೂರ್ ಹಾಗೂ ಜಹಾಂಗೀರ್ ಹೆಸರುಗಳು ನಮಗೆ ಕುಟುಂಬ ಸದಸ್ಯರಿಗೆ ಇಷ್ಟವಾದವು ಹಾಗಾಗಿ ಅವನ್ನು ಇಟ್ಟೆವು'' ಎಂದಿದ್ದಾರೆ.

  ಸಿನಿಮಾ ವಿಚಾರಕ್ಕೆ ಬಂದ್ರೆ ಕರೀನಾ ಕಪೂರ್ 'ಲಾಲ್ ಸಿಂಗ್ ಚಡ್ಡಾ'ದಲ್ಲಿ ನಟಿಸಿದ್ದಾರೆ. ಆ ಕಡೆ ಸೈಫ್ ಅಲಿ ಖಾನ್ ಅಭಿನಯದ ಭೂತ್ ಪೊಲೀಸ್, ಬಂಟಿ ಔರ್ ಬಬ್ಲಿ 2 ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿದೆ. ಜೊತೆಗೆ ಪ್ರಭಾಸ್ ಜೊತೆಗಿನ 'ಆದಿಪುರುಷ್' ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  kareena kapoor khan shares beautiful pic with her baby boy Jeh from Maldives.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X