Kareena Kapoor in Maldives: ಮಾಲ್ಡೀವ್ಸ್‌ನಲ್ಲಿ ಸೂರ್ಯನ ಶಾಖಕ್ಕೆ ಮುಖ ಕೆಂಪಗಾಗಿಸಿಕೊಂಡ ಕರೀನಾ

ಬಾಲಿವುಡ್ ಬೇಬೊ ಕರೀನಾ ಕಪೂರ್ ಖಾನ್ ತನ್ನಿಬ್ಬರು ಮಕ್ಕಳಾದ ತೈಮೂರ್ ಅಲಿ ಖಾನ್, ಜೆಹ್ ಅಲಿ ಖಾನ್ ಮತ್ತು ಸಹೋದರಿ ಕರಿಷ್ಮಾ ಕಪೂರ್ ಜೊತೆ ಮಾಲ್ಡೀವ್ಸ್‌ಗೆ ಇತ್ತೀಚೆಗೆ ಹಾರಿದ್ದಾರೆ.

ವೆಕೇಶನ್ ಮೂಡ್‌ನಲ್ಲಿರುವ ಕರೀನಾ ಮತ್ತು ಕರಿಶ್ಮಾ ಮಾಲ್ಡೀವ್ಸ್‌ಗೆ ಹೋಗಿ ಮೂರು ದಿನಗಳು ಕಳೆದಿದ್ದರೂ ಒಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರಲಿಲ್ಲಾ.

ಅಭಿಮಾನಿಗಳು ಕೂಡ ಇವತ್ತು ಫೋಟೊ ಹಾಕ್ತಾರೆ, ನಾಳೆ ಹಾಕ್ತಾರೆ ಅಂತ ಕಾದು ಕುಳಿತ್ತಿದ್ದೆ ಬಂತು. ಆದರೆ ಈಗ ಕರೀನಾ ಕಪೂರ್ ಅಭಿಮಾನಿಗಳಿಗಾಗಿ ಮಾಲ್ಡೀವ್ಸ್ ಫೋಟೊವನ್ನು ಹಂಚಿಕೊಂಡಿದ್ದಾರೆ. ಫ್ಯಾನ್ಸ್ ಫೋಟೊ ನೋಡಿ ಫುಲ್ ಥ್ರಿಲ್ ಆಗಿದ್ದಾರೆ.

ಬಿಕಿನಿ ತೊಟ್ಟು ಪೋಸ್ ಕೊಟ್ಟ ಕರೀನಾ

ಬಿಕಿನಿ ತೊಟ್ಟು ಪೋಸ್ ಕೊಟ್ಟ ಕರೀನಾ

ಬಾಲಿವುಡ್ ನಟಿ ಕರೀನಾ ಕಪೂರ್ ಮಾಲ್ಡೀವ್ಸ್‌ನಲ್ಲಿ ಹಾಟ್ ಅವತಾರವೆತ್ತಿದ್ದಾರೆ. ಬಿಕಿನಿ ತೊಟ್ಟು ಪೋಸ್ ಕೊಟ್ಟಿರುವ ಕರೀನಾ ಸಖತ್ ಎಂಜಾಯ್ ಮಾಡ್ತಿದ್ದಾರೆ. ತನ್ನಿಬ್ಬರು ಮಕ್ಕಳಾದ ತೈಮೂರ್ ಅಲಿ ಖಾನ್, ಜೆಹ್ ಅಲಿ ಖಾನ್ ಜೊತೆ ಇದೇ ಮೊದಲ ಬಾರಿಗೆ ಮಾಲ್ಡೀವ್ಸ್‌ಗೆ ತೆರಳಿರುವ ಕರೀನಾ ಖುಷಿಯ ದಿನಗಳನ್ನು ಕಳೆಯುತ್ತಿದ್ದಾರೆ. ದ್ವೀಪ ರಾಷ್ಟ್ರದಲ್ಲಿ ಬೋಲ್ಡ್ ಬರ್ಡ್ ಆಗಿ ಕರೀನಾ ಸಮಯ ಕಳೆಯುತ್ತಿದ್ದಾರೆ. ಅಲ್ಲದೇ ಮಾಲ್ಡೀವ್ಸ್ ಪ್ರವಾಸದಲ್ಲಿರು ಕರೀನಾ ಸೂರ್ಯನ ಕಿರಣಕ್ಕೆ ಮುಖ ಕೆಂಪಗಾಗಿಸಿಕೊಂಡಿದ್ದಾರೆ. ಇದನ್ನು ನೋಡಿ ಫ್ಯಾನ್ಸ್ ಅಂತದ್ದೇನಾಯ್ತು ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಬಿಕಿನಿ ಅವತಾರ ಕಂಡು ಫ್ಯಾನ್ಸ್ ಫುಲ್ ಫಿದಾ

ಬಿಕಿನಿ ಅವತಾರ ಕಂಡು ಫ್ಯಾನ್ಸ್ ಫುಲ್ ಫಿದಾ

ಇನ್ನು ಕರೀನಾ ಸಹೋದರಿ ಕರಿಶ್ಮಾ ಕಪೂರ್ ಕೂಡ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಇವರೂ ಕೂಡ ಹಾಟ್ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಕಪೂರ್ ಸಹೋದರಿಯರ ಈ ಬಿಕಿನಿ ಅವತಾರ ಕಂಡು ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಮಾಲ್ಡೀವ್ಸ್‌ಗೆ ತೆರಳಿರುವ ಕಪೂರ್ ಸಹೋದರಿಯರಿಗೆ ಇದು ರಜೆಯ ಸಮಯ. ಹೀಗಾಗಿ ಸೋಮವಾರ(ಮಾರ್ಚ್ 14) ಕರೀನಾ ಕಪೂರ್, ಮಕ್ಕಳಾದ ತೈಮೂರ್ ಅಲಿ ಖಾನ್, ಜೆಹ್ ಅಲಿ ಖಾನ್ ಮತ್ತು ಸಹೋದರಿ ಕರಿಶ್ಮಾ ಕಪೂರ್ ತಮ್ಮ ಖಾಸಗಿ ವಿಮಾನದಲ್ಲಿ ಮಾಲ್ಡೀವ್ಸ್‌ಗೆ ಹಾರಿದ್ದರು. ಕರಿಶ್ಮಾ ಮತ್ತು ಕರೀನಾ ಒಂದು ವಾರದ ಮಾಲ್ಡೀವ್ಸ್ ಟ್ರಿಪ್ ಇದಾಗಿದ್ದು, ಇನ್ನು ಕೆಲ ದಿನ ಅಲ್ಲೇ ಇದ್ದು ತಮ್ಮ ವೆಕೇಶನ್ ಎಂಜಾಯ್ ಮಾಡಲಿದ್ದಾರೆ.

ಫಿಟ್‌ನೆಸ್ ಬಗ್ಗೆ ಕೂಡ ಗಮನ ಹರಿಸಿರುವ ನಟಿ

ಫಿಟ್‌ನೆಸ್ ಬಗ್ಗೆ ಕೂಡ ಗಮನ ಹರಿಸಿರುವ ನಟಿ

2015ರಿಂದಲೂ ಕುಟುಂಬಕ್ಕೆ ಸಮಯ ನೀಡುತ್ತಿರುವ ಕರೀನಾ, ತನ್ನೆರಡು ಮಕ್ಕಳ ಹಾರೈಕೆ ಜೊತೆಗೆ, ಫಿಟ್‌ನೆಸ್ ಬಗ್ಗೆ ಕೂಡ ಗಮನ ಹರಿಸಿದ್ದಾರೆ. ಎರಡನೇ ಮಗ ಜೆಹ್ ಹುಟ್ಟಿದ ಬಳಿಕ ಯೋಗಾಭ್ಯಾಸದ ಜೊತೆಗೆ ವರ್ಕ್ ಔಟ್ ಕೂಡ ಮಾಡಿ ಸ್ಲಿಮ್ ಆಗಿದ್ದರು. ಮತ್ತೆ ತನ್ನ ಹಿಂದಿನ ದೇಹ ಸೌಂದರ್ಯವನ್ನು ಪಡೆದ ಕರೀನಾ ಕಪೂರ್ ಮದುವೆ ನಂತರದಲ್ಲಿ ಸಿನಿಮಾಗಳನ್ನು ಹೆಚ್ಚಾಗಿ ಒಪ್ಪಿಕೊಳ್ಳುತ್ತಿಲ್ಲ. ಕುಟುಂಬ, ಮಕ್ಕಳ ಜವಾಬ್ದಾರಿ ಅಂತ ಸಮಯ ಕಳೆಯುತ್ತಿದ್ದಾರೆ. ಸಿನಿಮಾಗಳನ್ನು ಲೆಕ್ಕಾಚಾರ ಹಾಕಿ ಒಪ್ಪಿಕೊಳ್ಳುತ್ತಿರುವ ಕರೀನಾ ಇತ್ತೀಚೆಗೆ ಕಿರುತೆರೆ ರಿಯಾಲಿಟಿ ಶೋಗೂ ಎಂಟ್ರಿ ಕೊಟ್ಟಿದ್ದಾರೆ.

 ಕರೀನಾ ಧರಿಸಿದ ಪ್ರಿಂಟೆಡ್ ಬಿಕಿನಿ ಬೆಲೆ 20,590 ರೂ.

ಕರೀನಾ ಧರಿಸಿದ ಪ್ರಿಂಟೆಡ್ ಬಿಕಿನಿ ಬೆಲೆ 20,590 ರೂ.

ಇನ್ನು ಕರೀನಾ ಧರಿಸುವ ಬಿಕಿನಿ ವಿಚಾರಕ್ಕೂ ಸಾಕಷ್ಟು ಸುದ್ದಿಯಾಗುತ್ತಾರೆ. ಯಾಕಂದ್ರೆ ಅವರು ಧರಿಸುವ ಬಿಕಿನಿ ಬೆಲೆ ಅಷ್ಟು ದುಬಾರಿ. ಕರೀನಾ ಮಾಲ್ಡೀವ್ಸ್‌ಗೆ ಹೋದರೆ, ಮುಗೀತು ಬಿಕಿನಿ ಧರಿಸಿದ ಒಂದೆರಡು ಫೋಟೊಗಳನ್ನು ತನ್ನ ಅಭಿಮಾನಿಗಳಿಗಾಗಿ ಪೋಸ್ಟ್ ಮಾಡುತ್ತಾರೆ. ಕಳೆದ ಬಾರಿ ಮಾಲ್ಡೀವ್ಸ್‌ಗೆ ತೆರಳಿದ್ದಾಗ ಕರೀನಾ ಧರಿಸಿದ ಪ್ರಿಂಟೆಡ್ ಬಿಕಿನಿಯ ಬೆಲೆ 20,590 ರೂಪಾಯಿ ಎಂದು ವರದಿ ಆಗಿತ್ತು. ಈಗ ಮತ್ತೆ ವಿಭಿನ್ನ ಬಗೆಯ ಬಿಕಿನಿ ತೊಟ್ಟು ಕರೀನಾ ನೆಟ್ಟಿಗರ ಕಂಗಣ್ಣಿಗೆ ಗುರಿಯಾಗಿದ್ದಾರೆ. ಆದರೆ, ಫ್ಯಾನ್ಸ್ ಮಾತ್ರ ಫುಲ್ ಖುಷಿಯಾಗಿದ್ದಾರೆ.

More from Filmibeat

English summary
Natasha Poonawalla just shared new glimpses from the fun girls' trip with Kareena and Karisma and their kids on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X