'ಲಾಲ್‌ ಸಿಂಗ್ ಚಡ್ಡ' ಸೋಲು, ಕರೀನಾ ಕಪೂರ್ ಕಾರಣ?

ಬಾಲಿವುಡ್‌ನ ಸೋಲಿನ ಸಾಲಿಗೆ ಈಗ ಮತ್ತೊಂದು ಸಿನಿಮಾ ಸೇರಿಕೊಂಡಿದೆ. ನಿರೀಕ್ಷೆಯೊಂದಿಗೆ ರಿಲೀಸ್ ಆದ 'ಲಾಲ್ ಸಿಂಗ್ ಚೆಡ್ಡ' ಸಿನಿಮಾ, ರಿಲೀಸ್ ಬಳಿಕ ಸೋಲುಂಡಿದೆ. ಅತ್ಯಂತ ಕಡಿಮೆ ಗಳಿಗೆ ಕಂಡ ಆಮಿರ್ ಖಾನ್ ನಟನೆಯ ಮೊದಲ ಸಿನಿಮಾ ಇದು.

ರಿಲೀಸ್ ದಿನ ಏನು ಚಮತ್ಕಾರ ಮಾಡದ ಈ ಸಿನಿಮಾ, ಬಾಕ್ಸಾಫೀಸ್‌ನಲ್ಲಿ ಮೇಲೇಳುವ ಯಾವುದೇ ಸೂಚನೆ ಇಲ್ಲ. ಇನ್ನು ಸಿನಿಮಾ ರಿಲೀಸ್‌ಗೂ ಮುನ್ನವೇ ಸಾಕಷ್ಟು ನೆಗೆಟಿವ್ ಕಮೆಂಟ್‌ಗಳು ಸಿನಿಮಾಗೆ ಬಂದಿದ್ದವು. ಚಿತ್ರದ ನಟ ಆಮಿರ್ ಖಾನ್ ಮತ್ತು ಕರೀನಾ ಕಪೂರ್ ನಡವಳಿಕೆ ಸಿನಿಮಾ ಹಿಂದೆ ಬೀಳಲು ಕಾರಣ ಎನ್ನಲಾಗುತ್ತಿದೆ.

ಆಮಿರ್ ಖಾನ್ ಒಂದು ಪಕ್ಷ ಓಕೆ. ಆದರೆ ನಟಿ ಕರೀನಾ ಕಪೂರ್ ಮಾಡಿದ್ದ ದೊಡ್ಡ ಎಡವಟ್ಟು ಸಿನಿಮಾದ ಸೋಲಿಗೆ ಕಾರಣ ಎನ್ನಲಾಗುತ್ತಿದೆ. ಈಗ ನಟಿ ಕರೀನಾ ಕಪೂರ್ ಉಲ್ಟಾ ಹೊಡೆದಿದ್ದು, ಸಿಕ್ಕಾ ಪಟ್ಟೆ ಟ್ರೋಲ್ ಆಗ್ತಿದ್ದಾರೆ.

ಪ್ರೇಕ್ಷಕರಿಗೆ ಕರೀನಾ ಸವಾಲು!

ಪ್ರೇಕ್ಷಕರಿಗೆ ಕರೀನಾ ಸವಾಲು!

ಸಿನಿಮಾ ಒಂದು ರಿಲೀಸ್ ಆಗಿ ಪ್ರೇಕ್ಷಕರ ಮನ ಮುಟ್ಟಬೇಕು ಎಂದರೆ, ಅದು ಸುಲಭದ ಮಾತಲ್ಲ. ಹಾಗಾಗಿಯೇ ಎಂತಹ ದೊಡ್ಡ ನಿರ್ದೇಶಕ, ಕಲಾವಿದರು ಸಿನಿಮಾ ಮಾಡಿದರೂ ಕೂಡ, ಸಿನಿಮಾ ಪ್ರಚಾರಕ್ಕಾಗಿ ಹೆಚ್ಚಿನ ಸಮಯ ಕೊಡುತ್ತಾರೆ. ಜೊತೆಗೆ ಹೆಚ್ಚಿನ ಮುತುವರ್ಜಿ ವಹಿಸಿ ತಮ್ಮ ಸಿನಿಮಾದ ಬಗ್ಗೆ ಉತ್ತಮವಾಗಿ ಪ್ರಚಾರ ಮಾಡುತ್ತಾರೆ. ಆದರೆ ನಟಿ ಕರೀನಾ ಕಪೂರ್ ತಾನು ನಟಿಸುವ ಸಿನಿಮಾಗಳನ್ನ ನೋಡಲೇ ಬೇಡಿ ಎಂದು ಪ್ರೇಕ್ಷಕರ ಮೇಲೆ ಕಿಡಿ ಕಾರಿದ್ದರು.

ಕರೀನಾ ಕಪೂರ್ ಹೇಳಿಕೆ ಕಾರಣ!

ಕರೀನಾ ಕಪೂರ್ ಹೇಳಿಕೆ ಕಾರಣ!

'ಲಾಲ್‌ ಸಿಂಗ್ ಚಡ್ಡ' ಸಿನಿಮಾವನ್ನು ಬಾಯ್‌ಕಾಟ್ ಮಾಡಿ ಎನ್ನುವ ಅಭಿಯಾನ ಸಿನಿಮಾ ರಿಲೀಸ್‌ಗೂ ಮುನ್ನವೇ ಶುರುವಾಗಿತ್ತು. ಆದರೆ ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ನಟ ಆಮಿರ್ ಖಾನ್ ಈ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದರು. ಸಿನಿಮಾ ನೋಡಿ ಬಾಯ್ ಕಾಟ್ ಬೇಡ ಎಂದಿದ್ದರು. ಆದರೆ ನಟಿ ಕರೀನಾ ಮಾತ್ರ, "ನಮ್ಮಂತಹ ನೆಪೋಟಿಸಂ ಕಲಾವಿದರನ್ನು ಪ್ರೇಕ್ಷಕರೇ ಹುಟ್ಟು ಹಾಕಿದ್ದಾರೆ. ನಮ್ಮ ಸಿನಿಮಾ ಅವರು ನೋಡೋದೇ ಬೇಡ" ಎಂದಿದ್ದರು.

ಉಲ್ಟಾ ಹೊಡೆದ ಕರೀನಾ ಕಪೂರ್!

ಉಲ್ಟಾ ಹೊಡೆದ ಕರೀನಾ ಕಪೂರ್!

ಕರೀನಾ ಕಪೂರ್ ಸಿನಿಮಾ ರಿಲೀಸ್ ಹತ್ತಿರ ಬಂದಾಗಲೂ, ಸಿನಿಮಾ ನೋಡಬೇಡಿ. ನಮ್ಮ ಸಿನಿಮಾ ನೋಡಿ ಎಂದು ಯಾರು ಹೇಳುವುದಿಲ್ಲ ಎಂದು ನೀಡಿದ್ದ ಹೇಳಿಕೆ ಈಗ ಆಕೆಗೆ ಮುಳುವಾಗಿದೆ. ಹಾಗಾಗಿ ಈಗ ಕರೀನಾ ಕಪೂರ್ ಯೂಟರ್ನ್ ಹೊಡೆದಿದ್ದಾರೆ. ಇತ್ತೀಚೆಗಿನ ಸಂದರ್ಶನದಲ್ಲಿ ಕರೀನಾ ಕಪೂರ್ "ದಯವಿಟ್ಟು ಲಾಲ್‌ ಸಿಂಗ್ ಚಡ್ಡ ಸಿನಿಮಾವನ್ನು ನೋಡಿ. ಬಾಯ್‌ಕಾಟ್ ಮಾಡಬೇಡಿ. ನನ್ನ ಮತ್ತು ಆಮಿರ್ ಖಾನ್‌ರನ್ನು ನೀವೂ ಸಿನಿಮಾ ತೆರೆಯ ಮೇಲೆ ನೋಡಬೇಕು." ಎಂದಿದ್ದಾರೆ. ಹಾಗಾಗಿ ಉಲ್ಟಾ ಹೇಳಿಕೆ ನೀಡಿದ ಕಾರಣ ಕರೀನಾಳನ್ನು ಟ್ರೋಲ್ ಮಾಡಲಾಗುತ್ತಿದೆ.

'ಲಾಲ್‌ಸಿಂಗ್ ಚಡ್ಡ' ವಿರುದ್ಧ ಅಭಿಯಾನ!

'ಲಾಲ್‌ಸಿಂಗ್ ಚಡ್ಡ' ವಿರುದ್ಧ ಅಭಿಯಾನ!

ಈ ಹಿಂದೆಯೂ 'ಲಾಲ್‌ಸಿಂಗ್ ಚಡ್ಡ' ಸಿನಿಮಾವನ್ನು ಬಹಿಷ್ಕಾರ ಮಾಡುವಂತೆ ಕೂಗು ಕೇಳಿಬಂದಿತ್ತು. ಆಮಿರ್ ಖಾನ್ ನೀಡಿದ ಒಂದು ಹೇಳಿಕೆಯಿಂದಾಗಿ ಸಿನಿಮಾವನ್ನು ಬಹಿಷ್ಕರಿಸಬೇಕು ಎನ್ನುವ ವಿಚಾರ ಸದ್ದು ಮಾಡಿತ್ತು.ಇನ್ನು ಇತ್ತೀಚೆಗೆ ಚಿತ್ರದ ಟ್ರೈಲರ್ ರಿಲೀಸ್ ಆದ ಬೆನ್ನಲ್ಲೇ, ಸಿನಿಮಾ ರಿಲೀಸ್ ಹತ್ತಿರವಾಗುತ್ತಿದ್ದಂತೆಯೇ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ಬಹಿಷ್ಕರಿಸಬೇಕು ಎನ್ನುವ ಕೂಗು ಕೇಳಿ ಬಂದಿತ್ತು.

More from Filmibeat

English summary
Kareena Kapoor Khan Trolled For Laal Singh Chaddha Flop, know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X