For Quick Alerts
  ALLOW NOTIFICATIONS  
  For Daily Alerts

  ಸೈಫ್ ಅಲಿ ಖಾನ್ ಹುಟ್ಟುಹಬ್ಬ; ಪತ್ನಿ-ಮಗಳಿಂದ ಹೃದಯಸ್ಪರ್ಶಿ ವಿಶ್

  |

  ಬಾಲಿವುಡ್ ಖ್ಯಾತ ನಟ, ಕರೀನಾ ಕಪೂರ್ ಪತಿ ಸೈಫ್ ಅಲಿ ಖಾನ್ ಗೆ ಇಂದು (ಆಗಸ್ಟ್ 16) ಹುಟ್ಟುಹಬ್ಬದ ಸಂಭ್ರಮ. 51ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸೈಫ್ ಅಲಿ ಖಾನ್ ಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಶುಭಾಶಯಗಳು ತಿಳಿಸುತ್ತಿದ್ದಾರೆ. ಸೈಫ್ ಸದ್ಯ ಪತ್ನಿ ಕರೀನಾ ಕಪೂರ್ ಮತ್ತು ಮಕ್ಕಳ ಜೊತೆ ಮಾಲ್ಡೀವ್ಸ್ ನಲ್ಲಿ ಬೀಡುಬಿಟ್ಟಿದ್ದಾರೆ. ಇತ್ತೀಚಿಗಷ್ಟೆ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿರುವ ಸೈಫ್ ದಂಪತಿ ಅಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

  ಇನ್ನು ಸೈಫ್ ಹುಟ್ಟುಹಬ್ಬಕ್ಕೆ ಪತ್ನಿ ಕರೀನಾ ಮತ್ತು ಮಗಳು ಸಾರಾ ಅಲಿ ಖಾನ್ ಭಾವುಕ ವಿಶ್ ಮಾಡಿದ್ದಾರೆ. ನಟಿ ಕರೀನಾ ಕಪೂರ್ ಕುಟುಂಬದ ಜೊತೆಗಿನ ಫೋಟೋ ಶೇರ್ ಮಾಡಿ ಪತಿಗೆ ಪ್ರೀತಿಯ ಸಂದೇಶ ರವಾನಿಸಿದ್ದಾರೆ. ಇಬ್ಬರು ಮುದ್ದಾದ ಮಕ್ಕಳ ಜೊತೆ ಮಾಲ್ಡೀವ್ಸ್ ಬೀಚ್ ನಲ್ಲಿ ಕುಳಿತಿರುವ ಫೋಟೋವನ್ನು ಕರೀನಾ ಶೇರ್ ಮಾಡಿದ್ದಾರೆ. ಫೋಟೋ ಜೊತೆಗೆ, "ನನ್ನ ಜೀವನದ ಪ್ರೀತಿಗೆ ಜನ್ಮದಿನದ ಶುಭಾಶಯಗಳು" ಎಂದು ಹೇಳಿದ್ದಾರೆ.

  ಸೆಕ್ಸ್ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದೆ: ಕರೀನಾ ಕಪೂರ್ ಸೆಕ್ಸ್ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದೆ: ಕರೀನಾ ಕಪೂರ್

  ಕರೀನಾ ಪೋಸ್ಟ್ ಗೆ ಅನೇಕರು ಕಾಮೆಂಟ್ ಮಾಡಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಬಾಲಿವುಡ್ ನ ಅನೇಕ ಗಣ್ಯರು ಸೈಫ್ ಗೆ ವಿಶ್ ಮಾಡಿ ಹಾರ್ಟ್ ಇಮೋಜಿ ಹಾಕುತ್ತಿದ್ದಾರೆ. ಮಲೈಕಾ ಆರೋರಾ ಕಾಮೆಂಟ್ ಮಾಡಿ, "ಪ್ರೀತಿಯ ಸೈಫ್ ಅಲಿ ಖಾನ್ ಅವರಿಗೆ ಜನ್ಮ ದಿನದ ಶುಭಾಶಯಗಳು" ಎಂದು ಹೇಳಿದ್ದಾರೆ.

  ಇನ್ನು ಸೈಫ್ ಅಲಿ ಖಾನ್ ಮೊದಲ ಪತ್ನಿಯ ಮಗಳು ಸಾರಾ ಅಲಿ ಖಾನ್ ಕೂಡ ಪ್ರೀತಿಯ ಶುಭಾಶಯ ಹೇಳಿದ್ದಾರೆ. ಕರೀನಾ ಕಪೂರ್ ಮತ್ತು ತಂದೆ ಸೈಫ್ ಜೊತೆ ಇರುವ ಫೋಟೋವನ್ನು ಶೇರ್ ಮಾಡಿ ಅಪ್ಪನಿಗೆ ವಿಶ್ ಮಾಡಿದ್ದಾರೆ. ತಂದೆಯನ್ನು ಸೂಪರ್ ಹೀರೋ ಎಂದು ಕರೀನಾ ಕರೆದಿದ್ದಾರೆ. "ಜನ್ಮದಿನದ ಶುಭಾಶಯಗಳು ಅಬ್ಬಾ. ನನ್ನ ಸೂಪರ್ ಹೀರೋ. ನನ್ನ ಸ್ನೇಹಿತ. ತನನಗೆ ಬೆಂಬಲವಾಗಿ ನಿಂತಿರುವುದಕ್ಕೆ ಧನ್ಯವಾದಗಳು" ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ.

  ಸೈಫ್ ಅಲಿ ಖಾನ್ ಹುಟ್ಟುಹಬ್ಬಕ್ಕೆ ಸಖತ್ ಪ್ಲಾನ್ ಮಾಡಿದ್ದ ಕರೀನಾ ಎರಡು ದಿನಗಳ ಮುಂಚೆೆಯೇ ಮಾಲ್ಡೀವ್ಸ್ ಪಯಣ ಕೈಗೊಂಡಿದ್ದರು. ಭಾರತೀಯ ಸಿನಿ ತಾರೆಯರ ಸ್ವರ್ಗ ಎಂದೇ ಮಾಲ್ಡೀವ್ಸ್ ಅನ್ನು ಕರೆಯಲಾಗುತ್ತಿದೆ. ಕೊರೊನಾ ಮೊದಲನೇ ಅಲೆ ಮುಗಿಯುತ್ತಿದ್ದಂತೆ ಭಾರತೀಯ ಸಿನಿತಾರೆಯರು ಮಾಲ್ಡೀವ್ಸ್ ಕಡೆ ಮುಖ ಮಾಡಿದ್ದರು. ಲಾಕ್ ಡೌನ್‌ನಿಂದ ಮನೆಯಲ್ಲೇ ಕೂತು ಬೋರಾಗಿದ್ದ ಸೆಲೆಬ್ರಿಟಿಗಳಿಗೆ ಎಂಜಾಯ್ ಮಾಡಲು ಸಿಕ್ಕ ಸ್ಥಳ ಮಾಲ್ಡೀವ್ಸ್. ಬಹುತೇಕ ತಾರೆಯರು ಮಾಲ್ಡೀವ್ಸ್ ಪ್ರವಾಸ ಕೈಗೊಳ್ಳುವ ಮೂಲಕ ಕಡಲ ಕಿನಾರೆಯಲ್ಲಿ ಸಖತ್ ಎಂಜಾಯ್ ಮಾಡಿದ್ದರು. ಜೊತೆಗೆ ಸುಂದರ ಫೋಟೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದ್ದರು.

  ಭಾರತದಲ್ಲಿ ಕೊರೊನಾ ಹೆಚ್ಚಾಗುತ್ತಿದ್ದಂತೆ ಮಾಲ್ಡೀವ್ಸ್ ಸರ್ಕಾರ ಭಾರತೀಯರ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು. ಇದೀಗ ಮತ್ತೆ ಅವಕಾಶ ನೀಡಿದ್ದು, ಸೆಲೆಬ್ರಿಟಿಗಳು ಪ್ರವಾಸ ಕೈಗೊಳ್ಳುತ್ತಿದ್ದಾರೆ. ಕರೀನಾ ದಂಪತಿ ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಇಬ್ಬರನ್ನು ಮಾಲ್ಡೀವ್ಸ್ ದ್ವೀಪಕ್ಕೆ ಕರೆದುಕೊಂಡು ಹೋಗಿದ್ದಾರೆ. ಇತ್ತೀಚಿಗಷ್ಟೆ ಕರೀನಾ ಮತ್ತು ಸೈಫ್ ಇಬ್ಬರೂ ಮನೆಯಿಂದ ಹೊರ ಬಂದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮೊದಲ ಬಾರಿಗೆ ಎರಡನೇ ಪುತ್ರ ಜೆಹ್ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದು, ಮುದ್ದು ಮಗುವಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಕರೀನಾ ಮತ್ತು ಸೈಫ್ ಇಬ್ಬರಿಗೂ ಪ್ರವಾಸವೆಂದರೆ ತುಂಬಾ ಇಷ್ಟ. ಆದರೆ ಕೊರೊನಾ ಕಾರಣದಿಂದ ಇಬ್ಬರೂ ಮುಂಬೈ ಮನೆಯಲ್ಲೇ ಇರುವಂತಾಗಿತ್ತು. ಇದೀಗ ಒಂದು ವರ್ಷದ ಬಳಿಕ ಪ್ರವಾಸ ಕೈಗೊಂಡಿದ್ದಾರೆ. ಕೆಲ ದಿನಗಳು ಮಾಲ್ಡೀವ್ಸ್ ನಲ್ಲಿ ಕಳೆಯಲು ಕರೀನಾ ದಂಪತಿ ಪ್ಲಾನ್ ಮಾಡಿದ್ದು, ಮಕ್ಕಳ ಜೊತೆ ಮಾಲ್ಡೀವ್ಸ್ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ.

  ಇನ್ನು ಸೈಫ್ ಅಲಿ ಖಾನ್ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಸದ್ಯ 'ಆದಿಪುರುಷ್' ಸಿನಿಮಾದಲ್ಲಿ ರಾವಣನಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ರಾಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಆದಿಪುರುಷ್ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದೆ. ಈ ಸಿನಿಮಾ ಜೊತೆಗೆ ಸೈಫ್ ಬಂಟಿ ಔರ್ ಬಬ್ಲಿ-2 ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವರುಣ್ ಶರ್ಮಾ ನಿರ್ದೇಶನದ ಈ ಚಿತ್ರಕ್ಕೆ ಆದಿತ್ಯ ಚೋಪ್ರ ಬಂಡವಾಳ ಹೂಡಿದ್ದಾರೆ. ಸೈಫ್ ಜೊತೆ ರಾಣಿ ಮುಖರ್ಜಿ, ಸಿದ್ಧಾಂತ್ ಚತುರ್ವೇದಿ ಕಾಣಿಸಿಕೊಳ್ಳುತ್ತಿದ್ದಾರೆ.

  ಕರೀನಾ ಕಪೂರ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಈಗಾಗಲೇ 'ಲಾಲ್ ಸಿಂಗ್ ಚಡ್ಡ' ಸಿನಿಮಾದ ಚಿತ್ರೀಕರಣ ಮುಗಿಸಿ, ಬಿಡುಗಡೆಗೆ ಕಾಯುತ್ತಿದ್ದಾರೆ. ಕರೀನಾ, ಆಮೀರ್ ಖಾನ್ ಜೊತೆ ತೆರೆಹಂಚಿಕೊಂಡಿದ್ದಾರೆ.

  English summary
  Actress Kareena Kapoor Khan wished her husband Saif Ali Khan on birthday with an post, featuring their sons.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X