For Quick Alerts
  ALLOW NOTIFICATIONS  
  For Daily Alerts

  ಸೀತೆ ಪಾತ್ರಕ್ಕೆ ಅತೀ ಹೆಚ್ಚು ಸಂಭಾವನೆ ಕೇಳಿ ಟ್ರೋಲ್ ಆದ ಬಗ್ಗೆ ಕೊನೆಗೂ ಮೌನ ಮುರಿದ ಕರೀನಾ

  |

  ರಾಮಾಯಣ, ಮಹಾಭಾರತದ ಬಗ್ಗೆ ಸಾಕಷ್ಟು ಧಾರಾವಾಹಿಗಳು, ಸಿನಿಮಾಗಳು ಬಂದಿವೆ. ಆದರೂ ಜನರಿಗೆ ಅದರ ಬಗ್ಗೆ ಆಸಕ್ತಿ ಕಡಿಮೆ ಆಗಿಲ್ಲ. ಮತ್ತೆ ಮತ್ತೆ ತೆರೆಮೇಲೆ ನೋಡಲು ಇಷ್ಟ ಪಡುತ್ತಾರೆ. ಹಾಗಾಗಿಯೇ ಮಹಾಭಾರತ ಮತ್ತು ರಾಮಾಯಣದ ಮೇಲೆ ಸಿನಿಮಾಗಳು ಬರುತ್ತಲೇ ಇದೆ.

  ಬಾಲಿವುಡ್‌ನಲ್ಲಿ 3ಡಿ ರಾಮಾಯಣ ಮಾಡುವ ಬಗ್ಗೆ ಎರಡು-ಮೂರು ವರ್ಷಗಳಿಂದ ಮಾತು ಕೇಳಿಬರುತ್ತಿದೆ. ನಿತೀಶ್ ತಿವಾರಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಿಗ್ ಬಜೆಟ್ ನ ರಾಮಾಯಣ ಸದ್ಯದಲ್ಲೇ ಸೆಟ್ಟೇರಲಿದೆ. ಈ ನಡುವೆ ಮತ್ತೊಂದು ರಾಮಾಯಣ ಸೈಲೆಂಟ್ ಆಗಿ ಪ್ರಿ-ಪ್ರೊಡಕ್ಷನ್ ಕೆಲಸ ಶುರು ಮಾಡಿಕೊಂಡಿದೆ. ಖ್ಯಾತ ನಿರ್ದೇಶಕ ರಾಜಮೌಳಿ ತಂದೆ, ಖ್ಯಾತ ಬರಹಗಾರ ವಿಜಯೇಂದ್ರ ಪ್ರಸಾದ್ ಬರೆಯುತ್ತಿರುವ ರಾಮಾಯಣ ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭ ಮಾಡಲು ತಯಾರಿ ನಡೆಸುತ್ತಿದೆ. ವಿಶೇಷ ಎಂದರೆ ಸೀತೆ ಪಾತ್ರಕ್ಕೆ ನಟಿ ಕರೀನಾ ಹೆಸರು ಬಲವಾಗಿ ಕೇಳಿಬರುತ್ತಿತ್ತು.

  ಸೈಫ್ ಅಲಿ ಖಾನ್ ಹುಟ್ಟುಹಬ್ಬ; ಪತ್ನಿ-ಮಗಳಿಂದ ಹೃದಯಸ್ಪರ್ಶಿ ವಿಶ್ಸೈಫ್ ಅಲಿ ಖಾನ್ ಹುಟ್ಟುಹಬ್ಬ; ಪತ್ನಿ-ಮಗಳಿಂದ ಹೃದಯಸ್ಪರ್ಶಿ ವಿಶ್

  ಆದರೆ ಸೀತೆಯಾಗಿ ನಟಿಸಲು ಕರೀನಾ ಭಾರಿ ಮೊತ್ತದ ಸಂಭಾವನೆ ಕೇಳಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸಂಭಾವನೆ ಸುದ್ದಿ ವೈರಲ್ ಆಗುತ್ತಿದ್ದಂತೆ ಕರೀನಾ ಸಿಕ್ಕಾಪಟ್ಟೆ ಟ್ರೋಲಿಗೆ ಗುರಿಯಾಗಿದ್ದರು. ಇದೀಗ ಮೊದಲ ಬಾರಿಗೆ ಹೆಚ್ಚು ಸಂಭಾವನೆ ಕೇಳಿದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ...

  12 ಕೋಟಿ ರೂ. ಸಂಭಾವನೆ ಕೇಳಿ ಟ್ರೋಲ್ ಆಗಿದ್ದ ಕರೀನಾ

  12 ಕೋಟಿ ರೂ. ಸಂಭಾವನೆ ಕೇಳಿ ಟ್ರೋಲ್ ಆಗಿದ್ದ ಕರೀನಾ

  ಭಾರತದ ಮಹಾಕಾವ್ಯದ ಪಾತ್ರಕ್ಕೆ ಕರೀನಾ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಕೇಳುತ್ತಿರುವುದು ಸರಿಯಲ್ಲ ಎಂದು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ಸಾಮಾನ್ಯವಾಗಿ ನಟಿ ಕರೀನಾ ಕಪೂರ್ ಸಿನಿಮಾವೊಂದಕ್ಕೆ 6 ರಿಂದ 8 ಕೋಟಿ ರೂ ಸಂಭಾವನೆ ಪಡೆಯುತ್ತಾರೆ. ಆದರೆ ಸೀತೆ ಪಾತ್ರ ನಿರ್ವಹಿಸಲು ಬರೋಬ್ಬರಿ 12 ಕೋಟಿ ರೂ ಬೇಡಿಕೆ ಇಟ್ಟಿದ್ದರು. ಕೊನೆಗೆ ಸಿನಿಮಾದ ನಿರ್ಮಾಪಕರು ಕರೀನಾರ ಜಾಗಕ್ಕೆ ಬೇರೆ ನಟಿಯ ಹುಡುಕಲು ಪ್ರಾರಂಭ ಮಾಡಿದರು.

  ನಟಿ ತಾಪ್ಸಿ ಸೇರಿ ಅನೇಕರ ಬೆಂಬಲ

  ನಟಿ ತಾಪ್ಸಿ ಸೇರಿ ಅನೇಕರ ಬೆಂಬಲ

  ಕರೀನಾಗೆ ಸಾಕಷ್ಟು ಮಂದಿ ಬೆಂಬಲಕ್ಕೆ ನಿಂತಿದ್ದರು. ನಟಿ ತಾಪ್ಸಿ ಪನ್ನು ಪ್ರತಿಕ್ರಿಯೆ ನೀಡಿ, ''ಯಾವುದೇ ನಟ ಪೌರಾಣಿಕ ಪಾತ್ರ ಮಾಡಲು ಸಂಭಾವನೆ ಹೆಚ್ಚಿಸಿಕೊಂಡಿದ್ದಿದ್ದರೆ ಅದು ಪಾಸಿಟಿವ್ ಸುದ್ದಿ ಆಗಿರುತ್ತಿತ್ತು. ಯಾರೂ ಅದರ ಬಗ್ಗೆ ಋಣಾತ್ಮಕವಾಗಿ ಮಾತನಾಡುತ್ತಿರಲಿಲ್ಲ. ಅದೇ ನಟಿಯೊಬ್ಬರು ಹೆಚ್ಚಿನ ಸಂಭಾವನೆಗೆ ಡಿಮ್ಯಾಂಡ್ ಮಾಡಿದಾಗ ಎಲ್ಲರಿಗೂ ಸಮಸ್ಯೆ ಶುರುವಾಗುತ್ತದೆ'' ಎಂದು ತಾಪ್ಸಿ ಕಿಡಿ ಕಾರಿದ್ದರು.

  ಕರೀನಾ ಪ್ರತಿಕ್ರಿಯೆ ಹೀಗಿದೆ

  ಕರೀನಾ ಪ್ರತಿಕ್ರಿಯೆ ಹೀಗಿದೆ

  ಇದೀಗ ಕರೀನಾ ಕಪೂರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಂದರ್ಶನದಲ್ಲಿ ನಿರೂಪಕರು ಕರೀನಾಗೆ, ಕರೀನಾ ಕಪೂರ್ ಮುಂದೋನು?, ಆಮೀರ್ ಖಾನ್ ಜೊತೆ ಒಂದು ಸಿನಿಮಾವಿದೆ. 12 ಕೋಟಿ ಸಂಭಾವನೆ ಪಡೆಯುತ್ತೀರಿ ಎನ್ನುವ ಸುದ್ದಿಯಾಗಿತ್ತು, ಅನೇಕರು ನಿಮ್ಮ ಬೆಂಬಲಕ್ಕೆ ನಿಂತರು" ಎಂದು ಕೇಳಿದರು. ಇದಕ್ಕೆ ಕರೀನಾ ಹೆಚ್ಚು ಮಾತನಾಡದೆ, "ಹೌದು..ಹೌದು.. " ಎನ್ನುತ್ತಾ "ಇದು ಸಂಪೂರ್ಣವಾಗಿ ಸುಳ್ಳು ಸುದ್ದಿ" ಎಂದು ಹೇಳಿದರು.

  ಮುಂದಿನ ಸಿನಿಮಾದ ಬಗ್ಗೆ ಕರೀನಾ ಮಾತು

  ಮುಂದಿನ ಸಿನಿಮಾದ ಬಗ್ಗೆ ಕರೀನಾ ಮಾತು

  ಇನ್ನು ಮುಂದಿನ ಸಿನಿಮಾದ ಬಗ್ಗೆ ಸದ್ಯದಲ್ಲೇ ಬಹಿರಂಗ ಪಡಿಸುವುದಾಗಿ ಕರೀನಾ ಹೇಳಿದ್ದಾರೆ. ಹಿಂದೆಂದೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಹೇಳಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ. ಕರೀನಾ ಸದ್ಯ ಸಿನಿಮಾಗೆ ರಿ-ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ. ಎರಡನೇ ಮಗುವಿಗೆ ಜನ್ಮ ನೀಡಿದ ಬಳಿಕ ಸಿಕ್ಕಾಪಟ್ಟೆ ದಪ್ಪಾ ಆಗಿದ್ದ ಕರೀನಾ ಸದ್ಯ ತೆಳ್ಳಗಾಗಲು ವರ್ಕೌಟ್ ಮಾಡುತ್ತಿದ್ದಾರೆ. ಯೋಗ, ಜಿಮ್ ಅಂತ ಬ್ಯುಸಿಯಾಗಿರುವ ಕರೀನಾ ಸದ್ಯದಲ್ಲೇ ಮತ್ತೆ ಬಣ್ಣ ಹಚ್ಚಲಿದ್ದಾರೆ.

  ಮಾಲ್ಡೀವ್ಸ್ ನಲ್ಲಿ ಕರೀನಾ ದಂಪತಿ

  ಮಾಲ್ಡೀವ್ಸ್ ನಲ್ಲಿ ಕರೀನಾ ದಂಪತಿ

  ಕರೀನಾ ಕಪೂರ್ ಸದ್ಯ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಪತಿ ಸೈಫ್ ಅಲಿ ಖಾನ್ ಮತ್ತು ಇಬ್ಬರು ಮುದ್ದಾದ ಮಕ್ಕಳ ಜೊತೆ ಕರೀನಾ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದಾರೆ. ಮಾಲ್ಡೀವ್ಸ್ ನಲ್ಲೇ ಕರೀನಾ ಪತಿ ಸೈಫ್ ಅಲಿ ಖಾನ್ ಹುಟ್ಟುಹಬ್ಬವನ್ನು ಆಚರಣೆ ಮಾಡಿ ಸಂಭ್ರಮಿಸಿದ್ದರು. ವರ್ಷದ ಬಳಿಕ ಕರೀನಾ ದಂಪತಿ ಪ್ರವಾಸಕ್ಕೆ ಹೋಗಿದ್ದು ಮಾಲ್ಡೀವ್ಸ್ ಬೀಚ್ ನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

  English summary
  Bollywood Actress Kareena Kapoor reacts to demanding 12 crore to play Sita role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X