ನಿಮ್ಮ ದಮಯ್ಯ ಅಂತೀನಿ ಈ ಚಿತ್ರದಿಂದ ನನ್ನ ತೆಗೆದು ಹಾಕಿ ಎಂದು ಕಣ್ಣೀರು ಹಾಕಿದ್ದೇಕೆ ಈ ನಟಿ...?

ಚಿತ್ರದಿಂದ ಚಿತ್ರಕ್ಕೆ.. ಪಾತ್ರದಿಂದ ಪಾತ್ರಕ್ಕೆ.. ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾದವರು ಕರೀನಾ ಕಪೂರ್ ಖಾನ್. ಕಪೂರ್ ಖಾನ್ದಾನ್‌ನಲ್ಲಿ ಜನ್ಮ ಪಡೆದು, ತಮ್ಮ ಅಜ್ಜ-ಅಪ್ಪನ ನೆರಳಿನಾಚೆ ತಮ್ಮದೇ ಬದುಕು ಕಟ್ಟಿಕೊಂಡ ಕರೀನಾ ಕಪೂರ್ ಗೆ ವಯಸ್ಸು 44 ಆದರೂ ಕೂಡ ಬೇಡಿಕೆ ಮಾತ್ರ ಇಂದಿನ ಯುವ ನಾಯಕಿಯರಿಗೆ ಇರುವಷ್ಟೇ ಇದೆ.

ಮದ್ವೆಯಾದ ನಂತರ ಹೆಣ್ಣು ಮಕ್ಕಳಿಗೆ ಚಿತ್ರರಂಗದಲ್ಲಿ ಅವಕಾಶ ಸಿಗುವುದಿಲ್ಲ ಎಂಬ ಮಾತುಗಳಿಗೆ ಅಪವಾದ ಎಂಬಂತೆ, ಮದ್ವೆಯಾಗಿ ಎರಡು ಮಕ್ಕಳ ತಾಯಿಯಾದರೂ ಕೂಡ ಇವತ್ತು ಬಾಲಿವುಡ್‌ನಲ್ಲಿ ತಮ್ಮದೇ ಬೆಲೆ ಹೊಂದಿರುವ ಕರೀನಾ ಕಪೂರ್, ಈ ಹಿಂದೆ ಅಮೀರ್ ಖಾನ್ ಅವರಲ್ಲಿ ಮನವಿಯೊಂದನ್ನು ಮಾಡಿಕೊಂಡಿದ್ದರು. ದಮಯ್ಯ ಅಂತೀನಿ ನನ್ನನ್ನೂ ನಿಮ್ಮ ಚಿತ್ರದಿಂದ ಆಚೆ ಹಾಕಿ ಎಂದು ಕೈ ಮುಗಿದು ಬೇಡಿಕೊಂಡಿದ್ದರು. ಖುದ್ದು ಕರೀನಾ ಕಪೂರ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

Kareena Kapoor requested Aamir Khan to replace her in Laal Singh Chaddha due to her pregnancy

ಹೌದು, ಅಸಲಿಗೆ 2019ರಲ್ಲಿ ಅಮೀರ್ ಖಾನ್ ತಮ್ಮ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಶುರು ಮಾಡಿದ್ದರು. ಚಿತ್ರದ ಶೇಕಡಾ ಐವತ್ತರಷ್ಟು ಭಾಗದ ಚಿತ್ರೀಕರಣವನ್ನು ಕೂಡ ಮಾಡಿದ್ದರು. ಆದರೆ ಅಷ್ಟರಲ್ಲಿ ಕೊರೊನಾ ವಕ್ಕರಿಸಿಕೊಂಡಿತ್ತು. ದೇಶ ಸ್ತಬ್ದವಾಯಿತು. ಸಹಜವಾಗಿ ಲಾಲ್ ಸಿಂಗ್ ಚಡ್ಡಾ ಚಿತ್ರದ ಎಲ್ಲ ಕೆಲಸಕ್ಕೆ ಬ್ರೇಕ್ ಬಿದ್ದಿತ್ತು.

ಇನ್ನು ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಪ್ರಪಂಚದ ಬಹುತೇಕ ದೇಶಗಳು ಲಾಕ್ ಡೌನ್‌ ಮಾರ್ಗ ಅನುಸರಿಸಿದ್ದವು. ಲಾಕ್ ಡೌನ್‌ಗಳನ್ನು ನಾನಾ ಬಗೆಗಳಲ್ಲಿ ಜಾರಿಗೊಳಿಸಿ ಜನರ ನಡುವೆ ದೈಹಿಕ ಅಂತರ ಕಾಪಾಡುವ ಯತ್ನದಲ್ಲಿದ್ದವು. ನಮ್ಮ ದೇಶದಲ್ಲಿ ಕೂಡ ಇಂತಹದ್ದೇ ಪ್ರಯತ್ನ ನಡೆಯುತ್ತಿತ್ತು. ಲಾಕ್ ಡೌನ್ ಮುಕ್ತಾಯವಾದ ಕೂಡಲೇ ಕೊರೊನಾ ವೈರಾಣು ನಾಶವಾಗುತ್ತಾ? ಲಾಕ್ ಡೌನ್ ಮತ್ತೆ ವಿಸ್ತರಣೆ ಆಗುತ್ತಾ.? ಮುಂದೇನು..? ಎಂಬ ಹಲವು ಪ್ರಶ್ನೆ ಹಲವರಲ್ಲಿ ಇದ್ದವು.

ಇದೇ ಸಮಯದಲ್ಲಿ ಅತ್ತ ಲಾಲ್ ಸಿಂಗ್ ಚಡ್ಡಾ ಚಿತ್ರದ ಚಿತ್ರೀಕರಣಕ್ಕೆ ಅರ್ಧಕ್ಕೆ ನಿಂತಿದ್ದರೆ ಇತ್ತ ಚಿತ್ರದ ಪ್ರಮುಖ ಕಥಾ ನಾಯಕಿ ಕರೀನಾ ಕಪೂರ್ ಇನ್ನೊಮ್ಮೆ ಗರ್ಭಿಣಿಯಾಗಿದ್ದರು. ಒಂದು ರೀತಿಯ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿದ್ದರು. ಆಗ ಪತಿ ಸೈಫ್ ಅಲಿ ಖಾನ್ ನೀಡಿದ ಅಲಹೆ ಮೇರೆಗೆ ಹಾಗೂ ಹೀಗೂ ಧೈರ್ಯ ಮಾಡಿದ ಕರೀನಾ ಕಪೂರ್ ಖಾನ್ ಅದೊಂದು ದಿನ ಅಮೀರ್ ಖಾನ್‌ ಅವರಿಗೆ ಕರೆ ಮಾಡಿದರು. ಈಗಾಗಲೇ ಚಿತ್ರದ ಅರ್ಧದಷ್ಟು ಚಿತ್ರೀಕರಣ ಮುಗಿದಿದೆ, ಇದನ್ನೂ ಹೇಳಬಾರದು ಆದರೂ ನನಗೆ ಬೇರೆ ದಾರಿ ಇಲ್ಲ ಎಂದು ಮಾತು ಶುರು ಮಾಡಿದ ಕರೀನಾ ಕಪೂರ್ ತಾವು ಮತ್ತೊಮ್ಮೆ ಗರ್ಭಿಣಿಯಾದ ವಿಚಾರವನ್ನು ಅಮೀರ್ ಖಾನ್ ಅವರಿಗೆ ಹೇಳಿದರು. ನನಗೇನು ಮಾಡಬೇಕೆಂದು ಗೊತ್ತಾಗುತ್ತಿಲ್ಲ ದಯಮಾಡಿ ನನ್ನನ್ನೂ ಚಿತ್ರದಿಂದ ಕೈ ಬಿಡಿ ಎಂದು ಅಲವತ್ತುಕೊಂಡಿದ್ದರು.

ಬಹುಶಃ ಅಮೀರ್ ಖಾನ್ ಬದಲು ಬೇರೆ ಯಾರೇ ಆಗಿದ್ದರೂ ಕೂಡ ಅವರಿಗೆ ಆಕಾಶ ಕಳಚಿ ಬಿದ್ದಂತ ಅನುಭವ ಆಗುತ್ತಿತ್ತು. ಆದರೆ ಅಮೀರ್ ಖಾನ್ ಮಾತ್ರ ಕರೀನಾ ಕಪೂರ್ ನೀಡಿದ ಈ ಶಾಕಿಂಗ್ ಸುದ್ದಿಯನ್ನು ಕೇಳಿ ಕಂಗೆಡಲಿಲ್ಲ. ಬಾಕಿ ಉಳಿದ ಚಿತ್ರದ ಚಿತ್ರೀಕರಣವನ್ನು ಹೇಗೆ ಮಾಡುವುದು ಎಂದು ಆಲೋಚನೆಯನ್ನು ಮಾಡಲಿಲ್ಲ. ಬದಲಿಗೆ ಕರೀನಾ ಕಪೂರ್‌ ಅವರಿಗೆ ಅಮೀರ್ ಖಾನ್ ಸಮಾಧಾನ ಹೇಳಿದರು. ಮತ್ತೊಮ್ಮೆ ತಾಯಿಯಾಗುತ್ತಿರುವುದಕ್ಕೆ ಶುಭಾಶಯವನ್ನು ಕೋರಿದ ಅಮೀರ್ ಖಾನ್ ಎಷ್ಟೇ ದಿನ ಆದರೂ ಪರವಾಗಿಲ್ಲ ನಾನು ಕಾಯುತ್ತೇನೆ ಎಂದು ಹೇಳಿದರು. ನೀವು ದೈಹಿಕವಾಗಿ ಮಾನಸಿಕವಾಗಿ ಸಿದ್ಧವಾದ ಮೇಲೆ ಚಿತ್ರದ ಚಿತ್ರೀಕರಣವನ್ನು ಶುರು ಮಾಡೋಣ ಎಂದು ಹೇಳಿದರು. ಅಂದ್ಹಾಗೇ ಈ ಎಲ್ಲ ವಿಚಾರವನ್ನು ಕರೀನಾ ಕಪೂರ್ ದಿ ಹಾಲಿವುಡ್ ರಿಪೋರ್ಟರ್‌ಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X