ತೈಮೂರ್ ಜನಿಸಿದಾಗ ಎದೆಹಾಲಿನ ಸಮಸ್ಯೆ ಎದುರಿಸಿದ ಬಗ್ಗೆ ನಟಿ ಕರೀನಾ ಕಪೂರ್ ಬಹಿರಂಗ

ಬಾಲಿವುಡ್ ನಟಿ ಕರೀನಾ ಕಪೂರ್ ಇಬ್ಬರು ಸದ್ಯ ಮುದ್ದಾದ ಮಕ್ಕಳ ತಾಯಿ. ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿರುವ ಕರೀನಾ ಇತ್ತೀಚಿಗಷ್ಟೆ ತನ್ನ ಎರಡನೇ ಮಗನ ಹೆಸರನ್ನು ಬಹಿರಂಗ ಪಡಿಸುವ ಮೂಲಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇದರೆ ಬನ್ನಲ್ಲೇ ಕರೀನಾ ತನ್ನ ಪ್ರೆಗ್ನೆನ್ಸಿ ಅನುಭವದ ಬಗ್ಗೆ ಬರೆದ 'ಪ್ರೆಗ್ನೆನ್ಸಿ ಬೈಬಲ್' ಪುಸ್ತಕ ಕೂಡ ಸದ್ದು ಮಾಡುತ್ತಿದೆ. ಈ ಪುಸ್ತಕದಲ್ಲಿ ಗರ್ಭಧಾರಣೆ ಸಮಯದ ಅನುಭವ ಮತ್ತು ಮಕ್ಕಳು ಜನಿಸಿದ ನಂತರದ ಅನುಭವ ಮತ್ತು ಸಮಸ್ಯೆಗಳನ್ನು ಬರೆದುಕೊಂಡಿದ್ದಾರೆ.

14 ದಿನಗಳು ಎದೆ ಹಾಲು ಇರಲಿಲ್ಲ- ಕರೀನಾ

14 ದಿನಗಳು ಎದೆ ಹಾಲು ಇರಲಿಲ್ಲ- ಕರೀನಾ

ಕರೀನಾ ತನ್ನ ಮಕ್ಕಳಿಗೆ ತೈಮೂರ್ ಮತ್ತು ಜಹಂಗೀರ್ ಎಂದು ಹೆಸರಿಟ್ಟಿದ್ದಾರೆ. ಮೊದಲ ಮಗ ತೈಮೂರ್ ಜನಿಸಿದಾಗ ಎದೆಹಾಲಿನ ಸಮಸ್ಯೆ ಎದುರಾದ ಬಗ್ಗೆ ತನ್ನ ಪುಸ್ತಕದಲ್ಲಿ ಬಹಿರಂಗ ಪಡಿಸಿದ್ದಾರೆ. ತೈಮೂರ್ ಜನಿಸಿ ಮೊದಲ 14 ದಿನಗಳು ಎದೆಹಾಲು ಇರಲಿಲ್ಲ ಎನ್ನುವ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಪುಸ್ತಕದಲ್ಲಿ ಬರೆದುಕೊಂಡಿರುವ ಕರೀನಾ, "ತೈಮೂರ್ ಸಿಸೇರಿಯನ್ ಮೂಲಕ ಜನಿಸಿದವನು. ಆಗ ನನಗೆ ಅಕ್ಷರಶಃ 14 ದಿನಗಳು ಎದೆ ಹಾಲು ಇರಲಿಲ್ಲ. ಸಂಪೂರ್ಣವಾಗಿ ಡ್ರೈ ಆಗಿತ್ತು" ಎಂದು ಹೇಳಿದ್ದಾರೆ.

ತಾಯಿ ಮತ್ತು ನರ್ಸ್ ಗೆ ಅಚ್ಚರಿಯಾಗಿತ್ತು

ತಾಯಿ ಮತ್ತು ನರ್ಸ್ ಗೆ ಅಚ್ಚರಿಯಾಗಿತ್ತು

"ಆಗ ನನ್ನ ತಾಯಿ ಮತ್ತು ನರ್ಸ್ ತುಂಬಾ ಪ್ರಯತ್ನ ಪಡುತ್ತಿದ್ದರು. ಯಾಕೆ ಎದೆಹಾಲು ಇಲ್ಲ ಎಂದು ತುಂಬಾ ಅಶ್ಚರ್ಯ ಪಡುತ್ತಿದ್ದರು" ಎನ್ನುವ ವಿಚಾರವನ್ನು ಕರೀನಾ ಪ್ರೆಗ್ನೆನ್ಸಿ ಬೈಬಲ್ ನಲ್ಲಿ ಬರೆದುಕೊಂಡಿದ್ದಾರೆ. ಆದರೆ ಎರಡೇ ಮಗು ಜೇಯ್ ಹುಟ್ಟಿದ್ದ ಸಮಯದಲ್ಲಿ ವಿಭಿನ್ನವಾಗಿತ್ತು ಎಂದು ಸೈಫ್ ಪತ್ನಿ ಬರೆದುಕೊಂಡಿದ್ದಾರೆ.

ಜೇಯ್ ಜನಿಸಿದಾಗ ಎದೆಹಾಲಿನ ಸಮಸ್ಯೆ ಇರಲಿಲ್ಲ

ಜೇಯ್ ಜನಿಸಿದಾಗ ಎದೆಹಾಲಿನ ಸಮಸ್ಯೆ ಇರಲಿಲ್ಲ

"ಜೇಯ್ ಹುಟ್ಟಿದ ಸಮಯದಲ್ಲಿ ಎದೆಹಾಲು ಇತ್ತು ಮತ್ತು ಅವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೆ. ಇದು ಒಂದು ಸಾಧನೆಯಂತೆ ಭಾಸವಾಯಿತು" ಎಂದು ಹೇಳಿದ್ದಾರೆ.

ಎರಡನೇ ಪ್ರಗ್ನೆನ್ಸಿ ತುಂಬಾ ಕಷ್ಟರವಾಗಿತ್ತು

ಎರಡನೇ ಪ್ರಗ್ನೆನ್ಸಿ ತುಂಬಾ ಕಷ್ಟರವಾಗಿತ್ತು

ತೈಮೂರ್ ಗೆ ಹೋಲಿಸಿದರೆ ಎರಡನೇ ಪ್ರೆಗ್ನೆನ್ಸಿ ತುಂಬಾ ಕಷ್ಟಕರವಾಗಿತ್ತು. ನಾನು ತುಂಬಾ ಆನಂದಿಸಿರುವುದಾಗಿ ಹೇಳಿದ್ದಾರೆ. ಕೊರೊನಾ ಭೀಕರ ಪರಿಸ್ಥಿತಿ ಮಾನಸಿಕ ಆರೋಗ್ಯದ ಮೇಲೆ ತುಂಬಾ ಪ್ರಭಾವ ಬೀರಿತ್ತು ಎಂದು ಹೇಳಿದ್ದಾರೆ. ಅಲ್ಲದೆ ಮನೆಯಿಂದ ಹೊರಹೋಗಲು ಸಹ ತುಂಬಾ ಭಯವಾಗುತ್ತಿತ್ತು ಎಂದು ಕರೀನಾ ಬಹಿರಂಗ ಪಡಿಸಿದ್ದಾರೆ.

ಪುಸ್ತಕ ಮೂರನೇ ಮಗು ಎಂದ ಕರೀನಾ

ಪುಸ್ತಕ ಮೂರನೇ ಮಗು ಎಂದ ಕರೀನಾ

ಇನ್ನು ಪುಸ್ತಕದ ಬಗ್ಗೆ ಹೇಳಿರುವ ಕರೀನಾ, "ನನ್ನ ಎರಡು ಪ್ರೆಗ್ನೆನ್ಸಿ ಮತ್ತು ಪ್ರಗ್ನೆನ್ಸಿ ಬೈಬಲ್ ಬರೆಯುವುದು ದೊಡ್ಡ ಪಯಣವಾಗಿತ್ತು. ಒಳ್ಳೆಯ ದಿನಗಳು ಮತ್ತು ಕೆಟ್ಟ ದಿನಗಳು ಇದ್ದವು. ಕೆಲವು ದಿನಗಳು ನಾನು ಕೆಲಸಕ್ಕೆ ಹೋಗಲು ಹರಸಾಹಸ ಪಡುತ್ತಿದ್ದೆ. ಇನ್ನು ಕೆಲವು ದಿನ ಹಾಸಿಗೆ ಇಂದ ಎದ್ದೇಳಲು ಕಷ್ಟಪಡುತ್ತಿದ್ದೆ. ಈ ಪುಸ್ತಕ ನನ್ನ ಎರಡು ಗರ್ಭಾಧಾರಣೆಯ ಮೂಲಕ ನಾನು ಧೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಅನುಭವಿಸಿದ ಒಂದು ವೈಯಕ್ತಿಕ ಖಾತೆಯಾಗಿದೆ. ಈ ಪುಸ್ತಕ ನನ್ನ ಮೂರನೆ ಮಗುವಂತೆ" ಎಂದು ಹೇಳಿದ್ದಾರೆ.

2016ರಲ್ಲಿ ತೈಮೂರ್ ಜನನ

2016ರಲ್ಲಿ ತೈಮೂರ್ ಜನನ

ನಟಿ ಕರೀನಾ ಕಪೂರ್ ಮತ್ತು ಪತಿ ಸೈಫ್ ಅಲಿ ಖಾನ್ 2016ರಲ್ಲಿ ಮೊದಲನೇ ಮಗುವನ್ನು ಸ್ವಾಗತಿಸಿದರು. ಮೊದಲನೇ ಮಗುವಿಗೆ ತೈಮೂರ್ ಅಲಿ ಖಾನ್ ಎಂದು ನಾಮಕರಣ ಮಾಡಿದ್ದಾರೆ. ಇನ್ನು ಈ ವರ್ಷದ ಪ್ರಾರಂಭದಲ್ಲಿ 2021ರಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಮೊದಲ ಮಗುವಿಗೆ ತೈಮೂರ್ ಎಂದು ಹೆಸರಿಟ್ಟಿದ್ದ ಕರೀನಾ 2ನೇ ಮಗುವಿಗೆ ಏನೆಂದು ನಾಮಕರಣ ಮಾಡುತ್ತಾರೆ ಎನ್ನುವುದು ಕುತೂಹಲ ಮೂಡಿಸಿತ್ತು.

ಮಕ್ಕಳ ಹೆಸರಿಂದ ಟ್ರೋಲ್ ಆದ ಕರೀನಾ ದಂಪತಿ

ಮಕ್ಕಳ ಹೆಸರಿಂದ ಟ್ರೋಲ್ ಆದ ಕರೀನಾ ದಂಪತಿ

ಇತ್ತೀಚಿಗೆ ಕರೀನಾ ಎರಡನೇ ಮಗುವಿನ ಹೆಸರನ್ನು ರಿವೀಲ್ ಮಾಡಿದ್ದಾರೆ. ಮಗನಿಗೆ ಜೇಯ್ ಎಂದು ಹೆಸರಿಟ್ಟಿದ್ದರು ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಜೇಯ್ ಪೂರ್ಣ ಹೆಸರನ್ನು ತನ್ನ ಪ್ರೇಗ್ನನ್ಸಿ ಬೈಬಲ್ ನಲ್ಲಿ ಬಹಿರಂಗ ಪಡಿಸಿದ್ದಾರೆ. ಕರೀನಾ ದಂಪತಿ ಎರಡನೇ ಮಗನಿಗೆ ಜಹಂಗೀರ್ ಎಂದು ಹೆಸರಿಟ್ಟಿದ್ದಾರೆ.

ಮೊದಲ ಮಗನಿಗೆ ತೈಮೂರ್ ಎಂದು ಹೆಸರಿಟ್ಟು ಹಿಂದೂಗಳ ಕಂಗಣ್ಣಿಗೆ ಗುರಿಯಾಗಿದ್ದ ಕರೀನಾ ಈಗ 2ನೇ ಮಗನಿಗೆ ಹೆಸರಿಟ್ಟು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.

More from Filmibeat

English summary
Bollywood Actress Kareena Kapoor revealed that she had no milk after her first son Taimur Ali Khan was born.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X