For Quick Alerts
  ALLOW NOTIFICATIONS  
  For Daily Alerts

  ನಾನು ಅಷ್ಟು ಸಂಭಾವನೆ ಕೇಳಿಲ್ಲ: 'ಸೀತಾ' ಬಗ್ಗೆ ಕರೀನಾ ಕಪೂರ್ ಸ್ಪಷ್ಟನೆ

  |

  ನಟಿ ಕರೀನಾ ಕಪೂರ್ ಸದಾ ಸುದ್ದಿಯಲ್ಲಿರುವ ನಟಿ. 'ಲಾಲ್ ಸಿಂಗ್ ಚಡ್ಡಾ' ಸಿನಿಮಾ, ಅದಕ್ಕೂ ಮುನ್ನ ಎರಡನೇ ಮಗು ಇನ್ನಿತರ ಕಾರಣಗಳಿಂದ ಕರೀನಾ ಸುದ್ದಿಯಲ್ಲಿದ್ದರು. ಅದರ ಜೊತೆಗೆ ಸಿನಿಮಾ ಒಂದಕ್ಕಾಗಿ ಭಾರಿ ದೊಡ್ಡ ಸಂಭಾವನೆ ಕೇಳಿದ್ದು ಸಹ ಸುದ್ದಿಯಾಗಿತ್ತು.

  ಕರೀನಾ ಕಪೂರ್ 'ಸೀತಾ' ಹೆಸರಿನ ಸಿನಿಮಾದಲ್ಲಿ ನಟಿಸಲು ಬರೋಬ್ಬರಿ 12 ಕೋಟಿ ರುಪಾಯಿ ಸಂಭಾವನೆ ಕೇಳಿದರೆಂಬುದು ದೊಡ್ಡ ಸುದ್ದಿಯಾಗಿತ್ತು.

  ಈ ಸುದ್ದಿಯ ಬೆನ್ನಲ್ಲೆ ಚರ್ಚೆಗಳು ಏರ್ಪಟ್ಟಿದ್ದವು. ನಟಿಯರೇಕೆ ಹೆಚ್ಚು ಸಂಭಾವನೆ ಕೇಳಬಾರದು? ನಟರ ಸಂಭಾವನೆಗಿಂತಲೂ ನಟಿಯರ ಸಂಭಾವನೆ ಕಡಿಮೆ ಏಕೆ ಎಂಬಿತ್ಯಾದಿ ಚರ್ಚೆಗಳು ಏರ್ಪಟ್ಟಿದ್ದವು. ಈಗ ನೋಡಿದರೆ ಕರೀನಾ ಕಪೂರ್ ನಾನು ಅಷ್ಟು ದೊಡ್ಡ ಸಂಭಾವನೆಯನ್ನು ಕೇಳಿಯೇ ಇಲ್ಲ ಎಂದಿದ್ದಾರೆ.

  ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ನಿರ್ದೇಶಿಸಲಿರುವ 'ಸೀತಾ' ಸಿನಿಮಾದ ನಾಯಕಿ ಪಾತ್ರಕ್ಕೆ ಕರೀನಾ ಕಪೂರ್ ಅವರನ್ನು ಕೇಳಲಾಗಿತ್ತು. ಆದರೆ ಅವರು ಸೀತಾ ಪಾತ್ರದಲ್ಲಿ ನಟಿಸಲು 12 ಕೋಟಿ ಸಂಭಾವನೆ ಕೇಳಿದರು. ಹಾಗಾಗಿ ವಿಜಯೇಂದ್ರ ಪ್ರಸಾದ್ ಬೇರೆ ನಟಿಯರ ಹುಡುಕಾಟದಲ್ಲಿದ್ದಾರೆ ಎನ್ನಲಾಗಿತ್ತು. ಸೀತಾ ಪಾತ್ರದಲ್ಲಿ ನಟಿಸಲು ಇಷ್ಟು ದೊಡ್ಡ ಸಂಭಾವನೆ ಕೇಳಿದ್ದಕ್ಕೆ ಕರೀನಾ ಕಪೂರ್‌ ಅನ್ನು ತೀವ್ರವಾಗಿ ಟೀಕೆ ಮಾಡಲಾಗಿತ್ತು.

  ''ನನಗೆ ಆ ಸಿನಿಮಾವನ್ನು ಆಫರ್ ಸಹ ಮಾಡಲಾಗಿರಲಿಲ್ಲ. ಅದೇಕೆ ನನ್ನ ಹೆಸರು ಆ ವಿವಾದದ ಒಳಗೆ ಬಂತೊ ಗೊತ್ತಿಲ್ಲ. ಆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಲಾದ ವಿಷಯಗಳೆಲ್ಲ ಕಪೋಲಕಲ್ಪಿತ. ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಹಲವರು ಹಲವು ರೀತಿ ಬರೆದರು. ಅದಕ್ಕೆಲ್ಲ ನನಗೆ ಪ್ರತಿಕ್ರಿಯಿಸಬೇಕು ಎನಿಸಲಿಲ್ಲ ಹಾಗಾಗಿ ಸುಮ್ಮನಿದ್ದೆ'' ಎಂದಿದ್ದಾರೆ.

  ಕರೀನಾ ಕಪೂರ್ ಪ್ರಸ್ತುತ 'ಲಾಲ್ ಸಿಂಗ್ ಚಡ್ಡ' ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಮುಂದಿನ ವಾರ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಅಮೀರ್ ಖಾನ್ ಎದುರು ನಾಯಕಿಯಾಗಿ ನಟಿಸಿದ್ದಾರೆ ಕರೀನಾ. ಅದರ ಜೊತೆಗೆ 'ತಖ್ತ್', 'ವೀರ್ ದಿ ವೆಡ್ಡಿಂಗ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ 'ಲಾಲ್ ಸಿಂಗ್ ಚಡ್ಡ' ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ ಕರೀನಾ.

  English summary
  Actress Kareena Kapoor said did not ask for 12 crore remuneration for Sita movie. She said many stories surrounded about my remuneration.
  Saturday, August 6, 2022, 17:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X